Advertisement

ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು: ಸಿ.ಎಂ.ಇಬ್ರಾಹಿಂ

11:50 AM May 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರವಿದು. 2023 ಕ್ಕೆ ಈ ಮಂಗಳಮುಖಿ ಸರ್ಕಾರ ತೆಗೆಯಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಜೊತೆಗೆ ಹೋರಾಡಲೂ ಆಗುವುದಿಲ್ಲ ಸುಮ್ಮನಿರಲೂ ಆಗುವುದಿಲ್ಲ. ಹೆಂಗಸರಾದರೆ ಹೆಂಗಸರ ಜೊತೆಗೆ ಕಳುಹಿಸಬಹುದು, ಗಂಡಸರಾದರೆ ಗಂಡಸರ ಜೊತೆ ಕಳುಹಿಸಬಹುದು. ಆದರೆ ಇವರು ಎರಡೂ ಅಲ್ಲ, ಭಾಷಾ ಅಂತ ಚಪ್ಪಾಳೆ ತಟ್ಟಿಬಿಡುತ್ತಾರೆ. ಏನಾದರೂ ಆರೋಪ ಮಾಡಿದರೆ ಕಿಸಿಕ್ ಎಂದು ನಗಾಡ್ತಾರೆ, ಏನು ಮಾಡೋಣ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಬದಲಾಯ್ತು ಬಿಜೆಪಿ ಪಟ್ಟಿ: ಲಕ್ಷ್ಮಣ ಸವದಿ, ಹೇಮಲತಾ ನಾಯಕ್ ಗೆ ಪರಿಷತ್ ಟಿಕೆಟ್

ಪರಿಷತ್ ಚುನಾವಣೆ ಟಿಕೆಟ್ ಬಗ್ಗೆ ಮಾತನಾಡಿದ ಅವರು, ನಾನು ಆಕಾಂಕ್ಷಿ ಆಗಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸುವ ಜಾಗದಲ್ಲಿ ಇದ್ದು ನಾವೇ ಊಟ ಮಾಡಲು ಕೂತರೆ ಹೇಗೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next