Advertisement

JDS ಪ್ರತಿಭಟನೆ; ಸಚಿವ ಅನಂತ ಕುಮಾರ್ ಹೆಗಡೆಗೆ “ಪುಟಗೋಸಿ”ರವಾನೆ

11:23 AM Jun 04, 2018 | Team Udayavani |

ಮಂಡ್ಯ/ಬೆಂಗಳೂರು:ಸದಾ ವಿವಾದದಲ್ಲಿ ಇರುವ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಗೆ ಮಂಡ್ಯದ ಜೆಡಿಎಸ್ ಕಾರ್ಯಕರ್ತರು “ಪುಟಗೋಸಿ” ಯನ್ನು ಅಂಚೆ ಮೂಲಕ ರವಾನಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

Advertisement

ಜೆಡಿಎಸ್ ಪಕ್ಷವನ್ನು ಟೀಕಿಸಿದ್ದ ಸಚಿವ ಹೆಗಡೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎಂಥ ಶ್ರೀಮಂತನೇ ಇರಲಿ ಪುಟಗೋಸಿ ಇದ್ದರೇನೆ ಮರ್ಯಾದೆ ಉಳಿಸಿಕೊಳ್ಳಲು ಸಾಧ್ಯ ಎಂದು ತಿರುಗೇಟು ಕೊಟ್ಟಿದ್ದರು.

ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಪುಟಗೋಸಿಯನ್ನು ಅಂಚೆ ಮೂಲಕ ರವಾನಿಸಿ, ಇನ್ಮುಂದೆ ಪಕ್ಷದ ಬಗ್ಗೆ ಟೀಕಿಸುವಾಗ ಎಚ್ಚರ ಇರಲಿ ಎಂಬ ಸಂದೇಶವನ್ನು ರವಾನಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಭಾನುವಾರ ಉತ್ತರ ಕನ್ನಡದಲ್ಲಿ ಬಿಜೆಪಿ ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ್ದ ಅನಂತ ಕುಮಾರ ಹೆಗಡೆ, ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೃದಯದಲ್ಲಿಕೊಂಡು ಪೂಜೆ ಮಾಡುತ್ತಿದ್ದರು, ಕಾಂಗ್ರೆಸ್ ಬಿಟ್ಟರೆ ಬೇರೆ ಯಾವ ಪಕ್ಷ ಇಲ್ಲ ಎಂಬಂತೆ ಇತ್ತು..ಆದರೆ ಈಗ  30-37 ಸ್ಥಾನ ಪಡೆದ ಪುಟಗೋಸಿ(ಜೆಡಿಎಸ್) ಪಕ್ಷಕ್ಕೆ ಡೊಗ್ಗು ಸಲಾಂ ಹೊಡೆಯುವ ದಯನೀಯ ಸ್ಥಿತಿ ಬಂತಲ್ಲಾ..ನಿಮಗೆ(ಕಾಂಗ್ರೆಸ್) ನಾಚಿಕೆಯಾಗೋಲ್ವಾ ಎಂದು ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next