Advertisement

ಇಂದು ಜೆಡಿಎಸ್‌ “ಪ್ರಗತಿ ಪರಿಶೀಲನೆ’

09:10 PM Feb 03, 2023 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡು ಎರಡು ಹಂತಗಳ ಪಂಚರತ್ನ ಯಾತ್ರೆ ಮುಗಿಸಿರುವ ಜೆಡಿಎಸ್‌, 3ನೇ ಹಂತದ ಯಾತ್ರೆಗೆ ಹೊರಡುವ ಮೊದಲು ಮೊದಲ ಹಂತದಲ್ಲಿ ಟಿಕೆಟ್‌ ಘೋಷಣೆಯಾದ 92 ಅಭ್ಯರ್ಥಿಗಳ “ಪ್ರಗತಿ ಪರಿಶೀಲನೆ’ ನಡೆಸಲು ಮುಂದಾಗಿದೆ. ಈ ಸಂಬಂಧ ಫೆ.4ರಂದು ಇಡೀ ದಿನ ಸಭೆ ನಡೆಸಲಿದೆ.

Advertisement

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಟಿಕೆಟ್‌ ಘೋಷಣೆಯಾದ 92 ಅಭ್ಯರ್ಥಿಗಳು ಡಿಸೆಂಬರ್‌ನಿಂದ ಈವರೆಗೆ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ, ಪಂಚರತ್ನ ಯಾತ್ರೆಯಲ್ಲಿ ಅವರ ಪಾತ್ರ ಮತ್ತು ಸಕ್ರಿಯತೆ ಹೇಗಿತ್ತು ಮುಂತಾದವುಗಳ ಜತೆಗೆ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಚುನಾವಣ ಟಾಸ್ಕ್ನ “ರಿಪೋರ್ಟ್‌ ಕಾರ್ಡ್‌’ ಅನ್ನೂ ಪರಿಶೀಲಿಸಲಾಗುತ್ತದೆ.

ಘೋಷಿತ 92 ಅಭ್ಯರ್ಥಿಗಳು, ಕಳೆದ ಸೋತ ಅಭ್ಯರ್ಥಿಗಳು, ಮಾಜಿ ಶಾಸಕರು, ಮಾಜಿ ಸಚಿವರು, ಎಲ್ಲ ಜಿಲ್ಲೆಗಳ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸಲಾಗಿದೆ.

ಜಿಲ್ಲಾಧ್ಯಕ್ಷರಿಗೆ ಟಾಸ್ಕ್
ಎರಡು ಹಂತಗಳ ಪಂಚರತ್ನ ಯಾತ್ರೆ ಮುಗಿದ ಜಿಲ್ಲೆಗಳಲ್ಲಿ ಪಕ್ಷದ ವರ್ಚಸ್ಸು ಮತ್ತು ತಳಹದಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು, ಈ ವೇಳೆ ಪಕ್ಷಕ್ಕೆ ಸಿಕ್ಕಿರುವ ಬೆಂಬಲವನ್ನು ಚುನಾವಣೆವರೆಗೆ ಹೇಗೆ ಹಿಡಿದಿಟ್ಟುಕೊಳ್ಳಬೇಕು ಹಾಗೂ ಫೆ.8ರಿಂದ ಆರಂಭವಾಗಲಿರುವ ಮೂರನೇ ಹಂತದ ಪಂಚರತ್ನ ಯಾತ್ರೆ ನಡೆಯುವ ಜಿಲ್ಲೆಗಳಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ, ಮಾಡಬೇಕಿರುವ ಕೆಲಸಗಳೇನು ಎಂಬ ಬಗ್ಗೆ ಜಿಲ್ಲಾಧ್ಯಕ್ಷರಿಂದ ಮಾಹಿತಿ ಪಡೆದು ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next