Advertisement

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸತ್ತಿದೆ:ಸಚಿವ ಈಶ್ಚರಪ್ಪ

06:37 PM Aug 21, 2019 | Team Udayavani |

ವಿಜಯಪುರ : ಸಚಿವ ಸ್ಥಾನ ಸಿಗದ ಶಾಸಕ ಉಮೇಶ ಕತ್ತಿ‌ ಅವರನ್ನು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಜೆಡಿಎಸ್ ಆಹ್ವಾನಿಸಿದ್ದಾರೆ ಎಂಬುದು ಹಾಸ್ಯಾಸ್ಪದ ಸಂಗತಿ. ಏಕೆಂದರೆ ರಾಜ್ಯದಲ್ಲಿ ಜೆಡಿಎಸ್ ಸತ್ತಿಹೋದ ಪಕ್ಷ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಹೊರಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷ ಸತ್ತು ಹೋಗಿದೆ ಅದಕ್ಕೆ ಜೆಡಿಎಸ್ ಪಕ್ಷದ ಬಗ್ಗೆ ಯಾಕೇ ಕೇಳ್ತಿರಾ ಎಂದು ವ್ಯಂಗ್ಯವಾಡಿದ ಈಶ್ವರಪ್ಪ,ರಾಜ್ಯ ಬಿಜೆಪಿ ಸರ್ಕಾರ ಬಹಳದಿನ ಉಳಿವುದಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಸ್ಥಿತಿ ಕುಡಿದ ಅಮಲಿನಲ್ಲಿ ವ್ಯಸನಿಗಳು ಬಡಬಡಿಸಿದಂತಿದೆ.

ಯಾರೋ ಕುಡಿದವರಂತೆ ಮಾತನಾಡಿದ್ದಾರೆ ಎಂದ ಮಾತ್ರಕ್ಕೆ ನಾನು ಉತ್ತರಿಸಬೇಕಿಲ್ಲ ಎಂದರು.ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ‌ ಸರಕಾರ ಒಳ್ಳೆಯ ಸಚಿವ ಸಂಪುಟ ಹೊಂದಿದೆ.ಇದಲ್ಲದೇ ನಮ್ಮ ಪಕ್ಷವನ್ನು ನಂಬಿಕೊಂಡು ಬಂದವರಿಗೆ ನಮ್ಮ ನಾಯಕರು ಅನ್ಯಾಯ ಮಾಡಲ್ಲ.

ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹ ಮಾಡುವ ನಿರ್ಧಾರದ‌ ಮೂಲಕ ಹಿಂದಿನ ಸ್ಪೀಕರ್ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.

Advertisement

ಸ್ಪೀಕರ್ ಹುದ್ದೆಯಂಥ ಸ್ಥಾನದಲ್ಲಿದ್ದ ರಮೇಶ ಕುಮಾರ ಕಾಂಗ್ರೆಸ್ ಪರ ಧೋರಣೆ ತೋರಿಸಿದ್ದಾರೆ.

ಉಳಿದ 13 ಸಚಿವ ಸ್ಥಾನಗಳನ್ನು ಅನರ್ಹರು ಬಿಜೆಪಿ ಸೇರಿದ ಬಳಿಕ ನಡೆಯುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೀಡಲಾಗುವುದು. ಅನರ್ಹರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರ ವಿಷಯ ಸುಪ್ರೀಂ ಕೋರ್ಟ್ ನಲ್ಲಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next