ಬೆಂಗಳೂರು: ಮನೆ ಮನೆಗೆ ಪಂಚರತ್ನ ಕರಪತ್ರ ಹಂಚಿ. ಪ್ರತೀ ಗ್ರಾಮದಲ್ಲಿ ಇರುವ ಜೆಡಿಎಸ್ ಅಭಿಮಾನಿಗಳ ಮನೆ ಗೋಡೆಯಲ್ಲಿ ಪಕ್ಷದ ಚಿಹ್ನೆ ಬರೆಯಿಸಿ, ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಳ್ಳಿ…
– ಹೀಗೆ ಹಲವು ಹೊಣೆಗಳನ್ನು ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಅದನ್ನು ಪೂರೈಸಲು ಎರಡೂ ವರೆ ತಿಂಗಳ ಗಡುವನ್ನೂ ವಿಧಿಸಿದ್ದಾರೆ.
ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾದ 93 ಅಭ್ಯರ್ಥಿಗಳು ಇದುವರೆಗೆ ಸಿದ್ಧತೆಯಲ್ಲಿ ಸಾಧಿಸಿದ ಪ್ರಗತಿಯ ಪರಿಶೀಲನೆಯನ್ನು ಕುಮಾರಸ್ವಾಮಿ ಶನಿವಾರ ಬೆಂಗ ಳೂರಿನಲ್ಲಿ ನಡೆಸಿದರು.
“ಮನೆ ಮನೆಗೆ ಪಂಚರತ್ನ’ ಕಾರ್ಯಕ್ರಮದ ಮೂಲಕ ಪ್ರತೀ ಮನೆಗೆ ಕರ ಪತ್ರ ಹಂಚಬೇಕು. ಪ್ರತೀ ಹಳ್ಳಿಯಲ್ಲಿ ಕನಿಷ್ಠ 100 ಅಭಿಮಾನಿಗಳನ್ನು ಗುರು ತಿಸಿ ಅವರ ಮನೆಗಳ ಮುಂದೆ ಪಕ್ಷದ ಚಿಹ್ನೆ ಬರೆಸಬೇಕು, ಟಿಕೆಟ್ ಘೋಷಣೆ ಯಾದ ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳು ಗ್ರಾ.ಪಂ. ಮಟ್ಟದಲ್ಲಿ ಪಾದಯಾತ್ರೆ ನಡೆಸಬೇಕು, ವಾರದಲ್ಲಿ ಕನಿಷ್ಠ ಮೂರು ದಿನ ಗ್ರಾಮ ವಾಸ್ತವ್ಯ ಮಾಡಬೇಕು. ಈ ರೀತಿ ಮುಂದಿನ ಎರಡೂವರೆ ತಿಂಗಳು ಪಕ್ಷವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದರು.
Related Articles
ವಾರದಲ್ಲಿ ಎರಡನೇ ಪಟ್ಟಿ ಬಿಡು ಗಡೆ ಮಾಡುತ್ತೇವೆ. ಘೋಷಿತ ಅಭ್ಯರ್ಥಿಗಳ ಪೈಕಿ ಸ್ವಲ್ಪ ಬದಲಾವಣೆ ಆಗಬಹುದು ಎಂದರು.