ಬೆಂಗಳೂರು-ಮೈಸೂರು ಹೆದ್ದಾರಿಯ ಮದ್ದೂರಿನ ಟಿ.ಬಿ.ಸರ್ಕಲ್ ಬಳಿಯ ತಗ್ಗಹಳ್ಳಿ ಚಂದ್ರುಗೆ ಸೇರಿದ
ಹೀರೋ ಹೋಂಡಾ ಷೋರೂಂ ಎದುರು ನಡೆದಿದೆ.
Advertisement
ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ ಪತಿ ಪ್ರಕಾಶ್(50) ಕೊಲೆಯಾದವರು. 2016ರ ಡಿಸೆಂಬರ್ 25ರಂದು ತೊಪ್ಪನಹಳ್ಳಿ ಗ್ರಾಮ ದಲ್ಲಿ ನಡೆದ ಜೆಡಿ ಎಸ್ ಕಾರ್ಯಕರ್ತರ ಜೋಡಿ ಕೊಲೆ ಪ್ರಕ ರ ಣಕ್ಕೆ ಪ್ರಕಾ ಶ್ ಪ್ರಮುಖ ಸಾಕ್ಷಿ ದಾರರಾಗಿದ್ದರು. ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದ ನಾಲ್ಕೈದು ಜನರ ಗುಂಪು ಪ್ರಕಾಶ್ ಕುಳಿತಿದ್ದ ಕಾರಿನಲ್ಲೇ ಭೀಕರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
Related Articles
Advertisement
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಿ.ಶಿವಪ್ರಕಾಶ್, ಮಳವಳ್ಳಿ ಡಿವೈಎಸ್ಪಿ ಶೈಲೇಂದ್ರ, ಸಿಪಿಐಗಳಾದ ಎನ್. ವಿ.ಮಹೇಶ್, ನವೀನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆ ಹಿನ್ನೆಲೆಯಲ್ಲಿ ಮದ್ದೂರು ಹಾಗೂ ತೊಪ್ಪನಹಳ್ಳಿ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಪ್ರಕಾಶ್ ಶವಾಗಾರದಲ್ಲಿ ಇರಿ ಸಲಾಗಿದ್ದು, ಸ್ಥಳದಲ್ಲಿ ಜನ ಜಂಗುಳಿ ಜಮಾಯಿಸಿದೆ.
ಪೊಲೀಸ್ ರಕ್ಷಣೆ ನಿರಾಕರಣೆತೊಪ್ಪನಹಳ್ಳಿ ಜೋಡಿ ಕೊಲೆಯ ಪ್ರಮುಖ ಸಾಕ್ಷೀದಾರನಾಗಿದ್ದ ಪ್ರಕಾಶ್‌ಗೆ ಜೀವಭಯವಿದ್ದ ಕಾರಣ ಪೊಲೀಸ್ ರಕ್ಷಣೆ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಅದನ್ನು ಪ್ರಕಾಶ್ ನಿರಾಕರಿಸಿ ಓಡಾಡುತ್ತಿದ್ದನು. ಒಮ್ಮೆ ಪೊಲೀಸ್ ರಕ್ಷಣೆ ಪಡೆದಿದ್ದರೆ ಕೊಲೆ ಸಂಭವಿಸುತ್ತಿರಲಿಲ್ಲವೆಂಬ ಮಾತುಗಳೂ ಕೇಳಿ ಬರುತ್ತಿವೆ. ಮರು ಕಳಿಸಿದ ಹಳೆಯ ದ್ವೇಷ ಎರಡು ವರ್ಷದ ಹಿಂದೆ ತೊಪ್ಪನಹಳ್ಳಿಯಲ್ಲಿ ಗ್ರಾಪಂ ಚುನಾ ವಣೆ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹರಿದ ವಿಚಾರಕ್ಕೆ ಜೆಡಿಎಸ್ ಕಾರ್ಯಕರ್ತರಾದ ನಂದೀಶ್ ಹಾಗೂ ಮುತ್ತು ರಾಜು ಅವ ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮುತ್ತು ರಾಜು, ರಾಮ ಲಿಂಗ, ಜಗ ದೀಶ, ದೀಪಕ್, ಯೋಗೇಶ್, ಸ್ವಾಮಿ, ಶಿವ ರಾಜು, ಶಿವಣ್ಣ, ಪ್ರತಾಪ್ ಸೇರಿ 19 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದ ರಲ್ಲಿ 17 ಮಂದಿ ಜಾಮೀ ನಿನ ಮೇಲೆ ಹೊರಗೆ ಬಂದಿದ್ದರು. ಜಗದೀಶ್ ಹಾಗೂ ಮುತ್ತು ರಾಜು ಇನ್ನೂ ಜೈಲಿ ನಲ್ಲೇ ಇದ್ದರು. ಮುತ್ತಪ್ಪ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಂಬಲಿಗರ ಆಕ್ರೋಶ ಜೆಡಿ ಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಹತ್ಯೆ ಖಂಡಿಸಿ ಜೆಡಿಎಸ್ ಕಾರ್ಯ ಕರ್ತರು ಮದ್ದೂರು ಸಾರ್ವಜನಿಕ ಆಸ್ಪತ್ರೆ ಎದುರಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಇದ ರಿಂದ ಹೆದ್ದಾರಿ ವಾಹನ ಸಂಚಾರದಲ್ಲಿ ತೀವ್ರ ಅಸ್ತ ವ್ಯಸ್ತ ಉಂಟಾ ಗಿತ್ತು. ಉದ್ರಿಕ್ತ ಪ್ರಕಾಶ್ ಬೆಂಬಲಿಗರ ಗುಂಪೊಂದು ಆಸ್ಪತ್ರೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದೆ. ಗ್ರಾಮಸ್ಥರು ಕಿಟಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ.ಇದರಿಂದ ಆಸ್ಪತ್ರೆ ಸುತ್ತ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. 20 ಕಿ.ಮೀ. ವ ರೆಗೆ ಟ್ರಾಫಿಕ್ ಜಾಮ್ ಮಂಡ್ಯ: ತೊಪ್ಪನಹಳ್ಳಿ ಪ್ರಕಾಶ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸಂಜೆ 4 ಗಂಟೆಯಿಂದಲೇ ಭಾರೀ ಸಂಖ್ಯೆ ಯಲ್ಲಿ ಜೆಡಿ ಎಸ್ ಕಾರ್ಯ ಕ ರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರಿಂದ ವಾಹನಗಳು ಚಲಿಸಲಾಗದೆ ಅಲ್ಲೇ ನಿಂತಿದ್ದವು. ಕಿಲೋಮೀಟರ್‌ಗಟ್ಟಲೆ ಟ್ರಾಫಿ ಕ್ ಜಾಮ್ ಉಂಟಾಗಿತ್ತು. ಹೆದ್ದಾರಿ ಪ್ರತಿಭಟನೆಯಿಂದ ವಾಹನಗಳ ಮಾರ್ಗ ಬದಲಾವಣೆ ಮಾಡುವುದು ಪೊಲೀಸರಿಗೆ ಅನಿವಾರ್ಯವಾಯಿತು. ಹೀಗಾಗಿ ಮಂಡ್ಯದಿಂದ ಬರುವ ವಾಹನಗಳನ್ನು ಮಳವಳ್ಳಿ ಮಾರ್ಗ ವಾಗಿ ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಅದೇ ರೀತಿ ಬೆಂಗ ಳೂರಿನಿಂದ ಬರುವ ವಾಹನಗಳನ್ನು ಚನ್ನಪಟ್ಟಣದಿಂದ ಹಲಗೂರು, ಮಳ ವಳ್ಳಿ ಮಾರ್ಗವಾಗಿ ಮಂಡ್ಯ ಹಾಗೂ ಮೈಸೂರಿಗೆ ಕಳುಹಿಸಲಾಗುತ್ತಿತ್ತು. ರಾತ್ರಿಯಾದರೂ ರಸ್ತೆ ತಡೆ ಮುಂದುವರೆ ದಿದ್ದರಿಂದ ಸುಮಾರು 20 ಕಿ.ಮೀ. ದೂರದವ ರೆಗೆ ಟ್ರಾಫಿ ಕ್ ಜಾಮ್ ಆಗಿತ್ತು. ಒಂದು ವಾಹನವನ್ನೂ ಚಲಿ ಸಲು ಬಿಡ ದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ ರು. ಅಘೋಷಿತ ಬಂದ್ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕ ರ ಣದ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದಲ್ಲಿ ಅಘೋಷಿತ ಬಂದ್ ನಿರ್ಮಾ ಣವಾಗಿತ್ತು. ಮುನ್ನೆಚ್ಚರಿಕೆಯಾಗಿ ಮದ್ದೂರಿನಲ್ಲಿ ವರ್ತಕರು ಅಂಗಡಿ-ಮುಂಗ ಟ್ಟುಗಳನ್ನು ಬಂದ್ ಮಾಡಿದ್ದರು. ಸ್ವಾಮಿ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರಣದ ಹಿಂದೆ ಸ್ವಾಮಿ ಎಂಬಾತನ ಕೈವಾ ಡ ವಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ತೊಪ್ಪನಹಳ್ಳಿಜೋ ಡಿ ಕೊಲೆ ಪ್ರಕರಣದಲ್ಲಿ 19 ಆರೋಪಿಗಳಲ್ಲಿ ಜಾಮೀನು ಪಡೆ ದು ಕೊಂಡಿ ರುವ 17 ಮಂದಿ ಪೈಕಿ ಸ್ವಾಮಿ ಕೂಡ ಒಬ್ಬ ನಾ ಗಿ ದ್ದಾನೆ. ಈತ ಪ್ರಕಾಶ್ ಕೊಲೆ ಮಾಡಲು ಹಂತ ಕ ರಿ ಗೆ ಸುಪಾರಿ ಕೊಟ್ಟಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ತೊಪ್ಪನಹಳ್ಳಿಗೆ ಸಿಎಂ ಬರುವಂತೆ ಗ್ರಾಮಸ್ಥರ ಪಟ್ಟು ಜೆಡಿ ಎಸ್ ಮುಖಂಡ ಪ್ರಕಾಶ್ ಹತ್ಯೆ ಪ್ರಕರ ಣ ಖಂಡಿಸಿ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮಸ್ತರು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಮುಖ್ಯ ಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಸ್ಥಳಕ್ಕೆ ಆಗಮಿಸುವಂತೆ ಬಿಗಿ ಪಟ್ಟು ಹಿಡಿದು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಈ ಹಿಂದೆ ತೊಪ್ಪನಹಳ್ಳಿ ಯಲ್ಲಿ ಜೋಡಿ ಕೊಲೆಯಾಗಿತ್ತು. ಆಗಲೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಈಗ ಜೆಡಿಎಸ್ ಮುಖಂಡನ ಹತ್ಯೆಯಾಗಲು ಪೊಲೀಸ್ ಇಲಾಖೆ ನಿರ್ಲಕ್ಷ್ಯವೇ ಕಾರಣ. ತಕ್ಷ ಣವೇ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಂಸದ ಶಿವರಾಮೇಗೌಡರಿಗೆ ಘೇರಾವ್
ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣದ ಸುದ್ದಿ ತಿಳಿದು ಸಂಸದ ಎಲ್.ಆರ್.ಶಿವರಾಮೇಗೌಡ ಕಾರಿ ನಲ್ಲಿ ತೆರ ಳಲು ಮುಂದಾದಾಗ ಜೆಡಿಎಸ್ ಕಾರ್ಯ ಕ ರ್ತರು ಅವ ರನ್ನು ಅಡ್ಡ ಗಟ್ಟಿ ಘೇರಾವ್ ಹಾಕಿ ಪ್ರತಿಭಟನೆಗೆ ಕರೆ ತಂದ ಘಟನೆಯೂ ನಡೆ ಯಿತು. ಖಾಸಗಿ ಕಾರ್ಯ ಕ್ರ ಮವೊಂದರಲ್ಲಿ ಭಾಗವಹಿಸಿ ಬೆಂಗಳೂರಿಗೆ ಕಾರಿನಲ್ಲಿ ವಾಪಸ್ ತೆರಳುತ್ತಿದ್ದ ಎಲ್.ಆರ್.ಶಿವರಾಮೇಗೌಡರನ್ನು ಕಂಡು ಅಡ್ಡಗಟ್ಟಿದ ಜೆಡಿಎಸ್ ಕಾರ್ಯಕರ್ತರು, ಪಕ್ಷದ ಮುಖಂಡರೊಬ್ಬರು ಕೊಲೆ ಯಾಗಿರುವುದನ್ನು ಕಂಡೂ ಕಾಣದವರಂತೆ ಹೋಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು. ಕಾರ್ಯ ಕ ರ್ತರ ಒತ್ತಡಕ್ಕೆ ಮಣಿದ ಸಂಸದ ಶಿವ ರಾಮೇಗೌಡರು ಪ್ರತಿಭಟನೆಗೆ ಹಾಜರಾದರು. ಬಳಿಕ ಬೆಂಗಳೂರಿಗೆ ತೆರಳಲಾಗದೆ ಪ್ರವಾಸಿ ಮಂದಿರಕ್ಕೆ ಬಂದು ಕುಳಿ ತರು. ಶಾಂತಿ ಕಾಪಾಡಲು ಸಚಿವ ತಮ್ಮಣ್ಣ ಮನವಿ
ಜೆಡಿಎಸ್ ಕಾರ್ಯಕರ್ತರು ಹಾಗೂ ಪ್ರಕಾಶ್ ಬೆಂಬಲಿಗರು ದಯಮಾಡಿ ಶಾಂತಿಯುತ ವಾಗಿರುವಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮನವಿ ಮಾಡಿದ್ದಾರೆ. ಮಂಗಳವಾರ(ಡಿ.25) ಮುಖ್ಯಮಂತ್ರಿ ಕುಮಾರಸ್ವಾಮಿ ಮದ್ದೂರಿಗೆ ಆಗಮಿಸಲಿದ್ದು, ಇದನ್ನೇ ದ್ವೇಷ ಕಟ್ಟಿಕೊಂಡು ಮುಂದುವರಿಸುವುದು ಬೇಡ ಎಂದು ಕೋರಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂದು ನಾವೂ ತಪ್ಪು ಮಾಡಬಾರದು. ಯಾರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ, ದಯಮಾಡಿ ಎಲ್ಲರೂ ಶಾಂತಿಯುತವಾಗಿರಿ. ಈಗಾಗಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ತಪ್ಪಿತಸ್ಥರು ಯಾರೇ ಆದರೂ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.