Advertisement

ಶಕ್ತಿ ಇದ್ದರೆ ನಾನೇ ಸಿಎಂ ಆಗುವೆ ಎಂದು ಬಹಿರಂಗವಾಗಿ ಹೇಳಲಿ

02:57 PM Jun 16, 2021 | Team Udayavani

ಧಾರವಾಡ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಕ್ಷೇತ್ರ ಜನರ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸಬೇಕಾದ ಶಾಸಕ ಅರವಿಂದ ಬೆಲ್ಲದ ಸಿಎಂ ಆಗಲು ದೆಹಲಿ ಸುತ್ತಾಟ ಕೈಗೊಂಡಿರುವುದು ದುರದೃಷ್ಟಕರ ಸಂಗತಿ. ಒಂದು ವೇಳೆ ಅವರಿಗೆ ಶಕ್ತಿ ಇದ್ದರೆ ನಾನೇ ಸಿಎಂ ಆಗುವುದಾಗಿ ಬಹಿರಂಗವಾಗಿ ಹೇಳಲಿ ಎಂದು ಜೆಡಿಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗಿದ್ದರೂ ನಾನು ಹೋಗಿಲ್ಲ ಎಂದು ಹೇಳುತ್ತ ಬೆಲ್ಲದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಮೊದಲೇ ಕ್ಷೇತ್ರದ ಜನರಿಗೆ ಸುಳ್ಳು ಹೇಳುತ್ತ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿಲ್ಲ. ಪಕ್ಷ‌ ಕಟ್ಟದೆ ಕಾರ್ಯಕರ್ತರನ್ನು ತುಳಿದು ಶಾಸಕರಾಗಿ ಇದೀಗ ಮುಖ್ಯಮಂತ್ರಿಯಾಗಲು ಹೊರಟಿರುವ ಬೆಲ್ಲದ ಅವರು ಪಾಲಿಕೆ ಆಯುಕ್ತರಿಗೆ ಹೇಳಿ ಒಂದು ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸದ್ಯ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಇದೆ. ಈ ಬಗ್ಗೆ ತಲೆಕೆಡಿಸಿಕೊಳ್ಳದ ಶಾಸಕ ಅರವಿಂದ ಬೆಲ್ಲದ ದೆಹಲಿ, ಬೆಂಗಳೂರು ಸುತ್ತಾಠ ಬಿಟ್ಟು ಕ್ಷೇತ್ರದ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ಶಾಂತವೀರ ಬೆಟಗೇರಿ, ರಾಜು ಅಂಬೋರೆ, ರಮಾನಾಥ ಶೆಣೈ, ಈರಣ್ಣ ಬಾರಕೇರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next