Advertisement

2023ರಲ್ಲಿ ಜೆಡಿಎಸ್‌ ಸರಕಾರ ನಿಶ್ಚಿತ; ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

05:10 PM Feb 11, 2021 | Team Udayavani |

ದೇವದುರ್ಗ: ಹೋರಾಟದ ಮೂಲಕ ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರುವ ಆತ್ಮವಿಶ್ವಾಸ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ
ಭರವಸೆ ವ್ಯಕ್ತಪಡಿಸಿದರು. ಪಟ್ಟಣದ ಬಸವ ಕಾಲೇಜು ಆವರಣದಲ್ಲಿ ಜೆಡಿಎಸ್‌ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಾಭಿಮಾನಿ ರೈತರ ಕಡೆ ಬೃಹತ್‌
ಸಮಾವೇಶ, ನೂತನ ಅಧ್ಯಕ್ಷರ ಪದಗ್ರಹಣ, ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ರೈತರ ಬದುಕು ಹಸನಾಗಿಸುವ
ಉದ್ದೇಶದಿಂದ ನಾರಾಯಣಪುರ ಬಲದಂಡೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ.

Advertisement

ಋಣ ತೀರುವ ಕೆಲಸ ರೈತ ಸಮುದಾಯದ ಜತೆ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡಬೇಕು. ರಾಜ್ಯದಲ್ಲಿ ಪಕ್ಷ ಸಂಘಟನೆ ಪ್ರಾರಂಭಗೊಂಡಿದ್ದು, 2023ರಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದು ಎಷ್ಟು ನಿಶ್ಚಿತವೋ  ಅಷ್ಟೇ ಈ ಕ್ಷೇತ್ರದಲ್ಲಿ ಕರೆಮ್ಮ ಗೋಪಾಲಕೃಷ್ಣ ನಾಯಕ ಗೆಲುವು ಕೂಡ ಖಚಿತವಾಗಿದೆ. ಬಡತನ ಮತ್ತು ಕೃಷಿ ಕುಟುಂಬದಿಂದ ಬಂದಿರುವ ನನಗೆ ತುಂಬಾ ಅನುಭವವಿದೆ. ಕೃಷ್ಣೆ, ಕಾವೇರಿ ಮತ್ತು ಮಹದಾಯಿ ನದಿಗಳ ಮೂಲಕ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ನನ್ನ ಸಂಕಲ್ಪ. ಈ ಯೋಜನೆಗಳಿಗೆ, ಮೂಲ ಉದ್ದೇಶಕ್ಕೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ ಎಂದರು.

ಜೆಡಿಎಸ್‌ ಪಕ್ಷದಿಂದಲೇ ರಾಜಕಾರಣಕ್ಕೆ ಬಂದು, ಇಳಿವಯಸ್ಸಿನಲ್ಲೂ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ರಾಜ್ಯದಲ್ಲಿ ನಮ್ಮ
ಪಕ್ಷವನ್ನು ಮುಗಿಸುವ ಶಕ್ತಿ ಯಾರಿಗೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಕಾಂಗ್ರೆಸ್‌ ಸರ್ಕಾರ ಹಿಂದೆ ನಾರಾಯಣಪುರ ಬಲದಂಡೆ ನಾಲಾ ಯೋಜನೆಯನ್ನು ಬದಲಿಸಿ ಕೇವಲ ಬೇಬಿ ಕೆನಾಲ ಮಾಡುವ ಹುನ್ನಾರ ನಡೆಸಿತ್ತು. ಇಲ್ಲಿಯ ಸಮಾವೇಶದಲ್ಲಿ ರೈತರಿಗೆ ಮಾತು ಕೊಟ್ಟಂತೆ ಅಧಿ ಕಾರಕ್ಕೆ ಬಂದ ವಾರದಲ್ಲಿಯೇ ಯೋಜನೆಯನ್ನು ಜಾರಿಗೊಳಿಸಿ ಸಮಗ್ರ ಮತ್ತು ಸಮರ್ಪಕ ನೀರಾವರಿಗೆ ಕ್ರಮ ಕೈಗೊಂಡಿದ್ದೆ ಎಂದರು.

ಶಾಸಕ ವೆಂಕಟಪ್ಪ ನಾಯಕ ಮಾನ್ವಿ, ಬಂಡೆಪ್ಪ ಕಾಶೆಂಪೂರ, ಮಾಜಿ ಸಚಿವರಾದ ವೆಂಕಟರಾವ್‌ ನಾಡಗೌಡ, ವೈಎಸ್‌ವಿ ದತ್ತ, ಮಾಜಿ ಶಾಸಕ ಕೋನರಡ್ಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ. ವಿರುಪಾಕ್ಷಿ, ತಾಲೂಕಾಧ್ಯಕ್ಷ ಬುಡ್ಡನಗೌಡ ಜಾಗಟಕಲ್‌, ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ ನಾಯಕ ಮಾತನಾಡಿದರು. ಸಿದ್ದು ಬಂಡಿ, ಮುದುಕಪ್ಪ ನಾಯಕ, ಶಿವಶಂಕರ ವಕೀಲರು, ಯುಸೂಫ್‌ ಖಾನ್‌, ಶರಣಪ್ಪ ಬಳೆ, ಅಮರೇಶ ಪಾಟೀಲ್‌, ಈಸಾಕ್‌ ಮೇಸ್ತ್ರಿ, ವೀರೇಶ ಪಾಟೀಲ್‌, ಡಿ.ನಿರ್ಮಲಾನಾಯಕ, ಪವನಕುಮಾರ, ಪುರಸಭೆ ಅಧ್ಯಕ್ಷ ಹನುಮಗೌಡ ಶಂಕರಬಂಡಿ, ಶಾಲಂ ಉದ್ದಾರ, ಶೇಖ್‌ ಮುನ್ನಾಭೆ„ ಇದ್ದರು.

ಸೇರ್ಪಡೆ: ಕರ್ನಲ್‌ ವೆಂಕಟೇಶ ನಾಯಕ, ಬಿಎಸ್‌ಪಿ ಮುಖಂಡ ವೆಂಕನಗೌಡ ವಕೀಲರು ಕೆ., ಇರಬಗೇರಾ ಸೇರಿದಂತೆ ಹಲವಾರು ಕಾರ್ಯಕರ್ತರು, ಮುಖಂಡರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

Advertisement

ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ
ಅಭಿಮಾನದಿಂದ ನನ್ನ ಪುತ್ತಳಿ ನಿರ್ಮಿಸಿರುವ ರೈತ ಪ್ರಭುರೆಡ್ಡಿ ಮನೆಗೆ ಕೃತಜ್ಞತೆ ಸಲ್ಲಿಸಲು ಹೋಗುತ್ತಿದ್ದೇನೆ. ಓರ್ವ ಮಹಿಳೆ ಸೋತರೂ, ಒಮ್ಮೆ ಟಿಕೆಟ್‌ ಅವಕಾಶದಿಂದ ವಂಚಿತಗೊಂಡಿದ್ದರೂ ಧೃತಿಗೆಡದೆ ಪಕ್ಷದ ಸಂಘಟನೆ ಮತ್ತು ಬಡವರಿಗೆ ನೆರವು ಒದಗಿಸಲು ಹೋರಾಡುತ್ತಿರುವ ಕರೆಮ್ಮ ಗೋಪಾಲಕೃಷ್ಣ ನಾಯಕ ಅವರ ಯತ್ನ ಇತರರಿಗೆ ಮಾದರಿಯಾಗಿದೆ. ಈ ಸಮಾವೇಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುವುದಲ್ಲದೇ, ಹೊಸ ಸಂದೇಶ ರವಾನಿಸಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next