ಬೆಂಗಳೂರು: ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲು ಸಿದ್ದವಾಗಿದೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತಣಾಡಿದ ಸಚಿವ ಡಿ.ಕೆ.ಶಿವ ಕುಮಾರ್ ಜೆಡಿಎಸ್ ವರಿಷ್ಠರು ಮುಕ್ತ ಕಂಠದಿಂದ ನಮಗೆ ಸಿಎಂ ಆಫರ್ ನೀಡಿರುವುದು ನಿಜ. ನಮಗೆ ವಿಶ್ವಾಸವಿದೆ. ನಾವು ಸರ್ಕಾರವನ್ನು ಉಳಿಸಿ ಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ವರಿಷ್ಠರ ಜೊತೆ ಜೆಡಿಎಸ್ ನಾಯಕರು ಚರ್ಚೆ ನಡೆಸಿದ್ದಾರೆ. ನೀವು ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡಿ ಎಂದಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ನನ್ನ ಹೆಸರನ್ನು ಜೆಡಿಎಸ್ ನಾಯಕರು ಸೂಚಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮುಂಬೈನಲ್ಲಿರುವ ಕಾಂಗ್ರೆಸ್ ಜೆಡಿಎಸ್ ಅತೃಪ್ತ ಶಾಸಕರ ಬಗ್ಗೆ ಮಾತನಾಡಿದ ಡಿಕೆಶಿ, “ಮುಂಬೈನಲ್ಲಿರುವ ಅತೃಪ್ತರು ವಾಪಾಸ್ ಬರುತ್ತಾರೆ. ಅವರನ್ನು ನಾವು ಕೂಡಿ ಹಾಕಲು ಸಾಧ್ಯವಿಲ್ಲ. ಕೂಡಿ ಹಾಕಲು ಅವರೇನು ಮಕ್ಕಳಲ್ಲ” ಎಂದರು.