Advertisement

ಜುಲೈ 21 ರಂದು ಜೆಡಿಎಸ್‌ ರೈತ ಸಮಾವೇಶ

03:45 AM Jul 04, 2017 | Team Udayavani |

ಬೆಂಗಳೂರು: ನರಗುಂದ-ನವಲಗುಂದ ರೈತರು ಹುತಾತ್ಮರಾದ ದಿನದ ಅಂಗವಾಗಿ ಜುಲೈ 21 ರಂದು  ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್‌ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ 224 ವಿಧಾನಸಭೆ ಕ್ಷೇತ್ರಗಳ ಜೆಡಿಎಸ್‌ ಘಟಕಗಳ ಅಧ್ಯಕ್ಷರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,  ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಅಥವಾ ಬಿಜಾಪುರದಲ್ಲಿ ಸಮಾವೇಶ ನಡೆಯಲಿದ್ದು,  ರಾಜ್ಯದ ರೈತರಿಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ಮುಂದೆ ಪ್ರತಿ ವಾರ ಒದೊಂದು ವಿಧಾನಸಭೆ ಕ್ಷೇತ್ರದ ಸಭೆ ನಡೆಸಿ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಯ ಡಿಸೆಂಬರ್‌ಗೆ ಬರಲಿ ಅಥವಾ ಮುಂದಿನ ಏಪ್ರಿಲ್‌ನಲ್ಲೇ ನಡೆಯಲಿ. ನಾವು  ಈಗಿನಿಂದಲೇ ಸಜ್ಜಾಗುತ್ತೇವೆ ಎಂದು ಹೇಳಿದರು.

ಶ್ರಾವಣ ಮಾಸದಲ್ಲಿ ಪಟ್ಟಿ
ಆಷಾಡ ಕಳೆದ ನಂತರ ಶ್ರಾವಣ ಮಾಸದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಪಟ್ಟಿಗೆ ದೇವೇಗೌಡರ ಅನುಮತಿ ದೊರೆತಿದೆ. ಜೆಡಿಎಸ್‌ ಅಭ್ಯರ್ಥಿಗಳಾರು ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಇಂದು ವಿಶ್ವನಾಥ್‌ ಜೆಡಿಎಸ್‌ಗೆ 
ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿರುವ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಮಂಗಳವಾರ ಜೆಡಿಎಸ್‌ ಸೇರ್ಪಡೆಯಾಗಲಿದ್ದು, ಅವರನ್ನು ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳಲು ಪಕ್ಷದಲ್ಲಿ ಉನ್ನತ ಹುದ್ದೆ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಕಾರ್ಯಾಧ್ಯಕ್ಷ, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.  ಪಕ್ಷ ಸೇರ್ಪಡೆ ನಂತರ ವಿಶ್ವನಾಥ್‌ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿರುವ ಹುಣಸೂರಿನಲ್ಲಿ ಮಾಸಾಂತ್ಯದೊಳಗೆ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next