ಅರಸೀಕೆರೆ: ಜೆಡಿಎಸ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬದಲಿಗೆ ತಮ್ಮ ಕುಟುಂಬ ಪರಿವಾರದ ಸದಸ್ಯರನ್ನೇ ಸ್ಪರ್ಧೆಯ ಕಣದಲ್ಲಿ ಇಳಿಸುವ ಮೂಲಕ ಅವರ ಕುಟುಂಬವೇ ಪಕ್ಷದ ಪರಿವಾರ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರವಾಗಿ ಪ್ರಚಾರ ಭಾಷಣ ಮಾಡಿ, ಅವರು ಮಾತನಾಡಿ, ಜೆಡಿಎಸ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆಇಳಿಸುವ ಬದಲಿಗೆ ತಮ್ಮ ಕುಟುಂಬ ಪರಿವಾರದ ಸದಸ್ಯರನ್ನೇ ಸ್ಪರ್ಧೆಯ ಕಣದಲ್ಲಿ ಇಳಿಸುವ ಮೂಲಕ ಅವರ ಕುಟುಂಬವೇ ಪಕ್ಷದ ಪರಿವಾರ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಚಿಂತನೆ ಮಾಡುವ ಮೂಲಕ
ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು. ಆ ಮೂಲಕ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಬೆಂಬಲಿಸಿ ಮತ ನೀಡಬೇಕು ಎಂದರು.
ಬಲಿಷ್ಠ ಭಾರತ ನಿರ್ಮಾಣ ಕಾರ್ಯಕ್ಕೆ ಬದಟಛಿರಾಗಿರುವ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು. ಇದಕ್ಕಾಗಿ ಪ್ರತಿಯೊಬ್ಬ ದೇಶಪ್ರೇಮಿಯೂ ಅವರನ್ನು ಬೆಂಬಲಿಸಬೇಕು.
ಕಳೆದ 5 ವರ್ಷಗಳ ಹಿಂದೆ ದೇಶದಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ 5 ವರ್ಷಗಳ ಅವಧಿಯಲ್ಲಿ ಯಾವುದೇ ಹಗರಣವನ್ನು ಮಾಡದೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ ಎಂದು ಶ್ಲಾಘಿಸಿದರು.
ದೇಶದಲ್ಲಿನ ವಿವಿಧ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನೊಂದಿಗೆ ಕೈ ಜೋಡಿಸುವ ಮೂಲಕ ಮಹಾಘಟಬಂಧನ್ ರೂಪಿಸಿಕೊಂಡಿದ್ದಾರೆ. ಆದರೆ, ಮಹಾಘಟ ಬಂಧನ್ ನಾಯಕರು ಯಾರು ಎನ್ನುವ ಪ್ರಶ್ನೆಗೆ ಅವರ ಬಳಿಯಲ್ಲಿ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕುತ್ತಿಲ್ಲ. ಆದರೆ, ಬಿಜೆಪಿ ಪರಿವಾರಕ್ಕೆ ಸ್ಪಷ್ಟ ಗುರಿ ಇದೆ ಎಂದರು.