Advertisement

ಹೊನ್ನಾಳಿ ತಾಲೂಕು ಕಚೇರಿಎದುರು ಜೆಡಿಎಸ್‌ ಧರಣಿ

12:50 PM Mar 07, 2017 | Team Udayavani |

ಹೊನ್ನಾಳಿ: ಪೊಲೀಸರ ವೇತನ ಪರಿಷ್ಕರಣೆ ಮತ್ತು ಸುಧಾರಣೆಗಾಗಿ ರಚಿಸಿದ್ದ ಎಡಿಜಿಪಿ ಔರಾದ್ಕರ್‌ ನೇತೃತ್ವದ ಸಮಿತಿಯು ನೀಡಿದ ವರದಿಯ ಶಿಫಾರಸ್ಸುಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಯಥಾವತ್‌ ಅನುಷ್ಠಾನಗೊಳಿಸಿ ಪೊಲೀಸರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರ ಜೆಡಿಎಸ್‌ ತಾಲೂಕು ಯುವ ಘಟಕದ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗದಲ್ಲಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನಧರಣಿ ನಡೆಸಿದರು. 

Advertisement

ಜೆಡಿಎಸ್‌ ಯುವ ಘಟಕದ ತಾಲೂಕು ಅಧ್ಯಕ್ಷ ಗುರುಪಾದಯ್ಯಮಠದ್‌ ಮಾತನಾಡಿ, ಸಮಿತಿ ಮಾಡಿದ ಶಿಫಾರಸ್ಸುಗಳಲ್ಲಿ ಅರ್ಧದಷ್ಟನ್ನಾದರೂ ಈಡೇರಿಸಿದ್ದರೆ ಪೊಲೀಸರಿಗೆ ಕನಿಷ್ಠ 5 ರಿಂದ 6 ಸಾವಿರ ವೇತನ ಹೆಚ್ಚಾಗುತ್ತಿತ್ತು. ಆದರೆ ತಾವೇ ರಚಿಸಿದ ಸಮಿತಿಯು ನೀಡಿದ ವರದಿಯನ್ನು ಅನುಷ್ಠಾನಗೊಳಿಸದೇ ಕೇವಲ ರೂ.2000 ಭತ್ಯೆ ಹೆಚ್ಚಿಸಲಾಗಿದೆ ಎಂದರು. 

ಮೂಲ ವೇತನ ಹೆಚ್ಚಿಸದೇ ಕೇವಲ ಭತ್ಯೆ ಮಾತ್ರ ಹೆಚ್ಚಿಸುವ ಮೂಲಕ ಕೆಳ ಹಂತದ ಪೊಲೀಸ್‌ ಸಿಬ್ಬಂದಿಗೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಪಕ್ಷದ ಮುಖಂಡರಾದ ರಾಜುಕಣಗಣ್ಣಾರ, ಮಾಜಿ ಸೈನಿಕ ವಾಸಪ್ಪ, ನ್ಯಾಮತಿ ವಿಜೇಂದ್ರಮಹೇಂದ್ರಕರ್‌,

ಕೊಟ್ರೇಶ್‌, ಬೇಲಿಮಲ್ಲೂರು, ಪ್ರವೀಣ್‌, ಎಚ್‌.ಕೆ.ಸಿದ್ದಪ್ಪ, ಸಿ.ಪರಮೇಶ್ವರಪ್ಪ, ಎಚ್‌.ಎಸ್‌.ಚಂದ್ರಶೇಖರ್‌, ಎನ್‌.ಎಚ್‌.ಹರೀಶ್‌, ಎ.ಕೆ. ರಾಜಪ್ಪ, ಹಿರೇಗೋಣಿಗೆರೆಯ ಬಾಷಾ, ಇನಾಯತ್‌, ಹುಣಸಘಟ್ಟದ ಹಾಲಸ್ವಾಮಿ, ವೆಂಕಟೇಶ್‌, ನಂಜುಂಡ ಮಡಿವಾಳ್‌ ಇದ್ದರು. ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next