Advertisement

ಬಾರ್‌ ಲೈಸೆನ್ಸ್‌ ರದ್ದತಿಗೆ ಜೆಡಿಎಸ್‌ ಆಗ್ರಹ

02:42 PM Apr 07, 2020 | Suhan S |

ಹಾಸನ: ಲಾಕ್‌ಡೌನ್‌ ಅವಧಿಯಲ್ಲಿ 144 ಸೆಕ್ಷನ್‌ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ನಗರದ ಕ್ವಾಲಿಟಿ ಬಾರ್‌ ಲೈಸೆನ್ಸ್‌ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯ ಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸುವ ಸಂದರ್ಭದಲ್ಲಿಯೇ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಅವಕಾಶ ನೀಡಲು ನಿರಾಕರಿಸಿದ ಪೊಲೀಸರು 144 ಸೆಕ್ಷನ್‌ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ. ಡೀಸಿ ಕಚೇರಿ ಆವರಣದಿಂದ ಹೊರ ಹೋಗುವಂತೆ ಪ್ರತಿಭಟನಾಕಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಮಾತನಾಡಿ 144 ಸೆಕ್ಷನ್‌ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳದ ನೀವು ಪ್ರತಿಭಟನೆ ಮಾಡಲು ಮುಂದಾದಾಗ 144 ಸೆಕ್ಷನ್‌ ಪಾಲಿಸಿ ಎಂದು ಏಕೆ ಹೇಳುತ್ತಿದ್ದೀರಿ ಎಂದು ಪಶ್ನಿಸಿದರು. ಸಂಸದರು ಮತ್ತು ಜೆಡಿಎಸ್‌ ಕಾರ್ಯಕರ್ತರನ್ನು ಎಎಸ್ಪಿ ಸಮಾಧಾನಪಡಿಸಿ ಕಳುಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next