Advertisement

ಜಂಟಿ ಪ್ರಚಾರಕ್ಕೆ ತಂತ್ರ

11:50 PM Mar 26, 2019 | Team Udayavani |

ಬೆಂಗಳೂರು : ಮೊದಲ ಹಂತದ ಚುನಾವಣೆಯ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯು ತ್ತಿದ್ದಂತೆಯೇ ಈಗ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆೆಡಿಎಸ್‌ ನಾಯ ಕರು ತಂತಮ್ಮ ನಡುವಿನ ಅತೃಪ್ತಿ, ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ.

Advertisement

ಒಂದೆಡೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿಗಳು ದೇವೇ ಗೌಡ ಅವರ ಮನೆಗೆ ತೆರಳಿ ಆಶೀರ್ವಾದ ಬಯಸಿದರೆ, ಇನ್ನೊಂದೆಡೆ ಇದೇ 31ರಂದು ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಮಿತ್ರಪಕ್ಷಗಳ ರ್ಯಾಲಿಗೆ ಸಿದ್ಧತೆ ಆರಂಭ ವಾಗಿದೆ. ಎರಡೂ ಪಕ್ಷಗಳ ನಾಯ ಕರು ಬುಧವಾರ ಚರ್ಚೆ ನಡೆಸಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇ ಗೌಡ ಸಹಿತ ಎರಡೂ ಪಕ್ಷಗಳ ನಾಯಕರು ಸಮಾ ವೇಶ ದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಈ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ನಡೆಸಲು ಎರಡೂ ಪಕ್ಷಗಳು ತೀರ್ಮಾನಿಸಿವೆ.

ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹೊಂದಾಣಿಕೆಯಿಂದ ಅಸಮಾಧಾನ ಗೊಂಡು ದೇವೇ ಗೌಡ ವಿರುದ್ಧ ಕಣಕ್ಕಿಳಿದಿರುವ ತುಮ ಕೂರಿನ ಹಾಲಿ ಸಂಸದ ಮುದ್ದ ಹನುಮೇ ಗೌಡ, ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿ ದ್ದಾರೆ. ಅವರ ಮನ ವೊಲಿಸಿ ನಾಮ ಪತ್ರ ವಾಪಸ್‌ ತೆಗೆಸುವ ಹೊಣೆಗಾರಿಕೆ ದಿನೇಶ್‌ಗುಂಡೂ ರಾವ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡುತ್ತಿರುವುದರಿಂದ ಅಂತಹ ನಾಯಕರಿಗೆ ಎಚ್ಚರಿಕೆ ನೀಡಿ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿ ಗಣಿಸುವುದಾಗಿ ತಾಕೀತು ನೀಡಲು ತೀರ್ಮಾನಿಸಲಾಗಿದೆ.

ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ತಿಪ್ಪೇಸ್ವಾಮಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಮಾಜಿ ಸಚಿವ ರೋಶನ್‌ಬೇಗ್‌ ಮತ್ತು ಮಾಜಿ ಸಂಸದ ಸಾಂಗ್ಲಿಯಾನ ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದಾರೆ. ಅವರ ಮನವೊಲಿಕೆಗೂ ಪ್ರಯತ್ನ ನಡೆದಿದೆ.

ಬಿಜೆಪಿಯಲ್ಲೂ ಶಮನ ಕಾರ್ಯ
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಬಿಜೆಪಿಯ ಅಭ್ಯರ್ಥಿ ಯಾಗಿ ಕೊನೇ ಕ್ಷಣದಲ್ಲಿ ಅಚ್ಚರಿ ಅಭ್ಯರ್ಥಿಯಾಗಿದ್ದರಿಂದ ಆಕಾಂಕ್ಷಿ ಯಾಗಿದ್ದ ತೇಜಸ್ವಿನಿ ಅನಂತ ಕುಮಾರ್‌ ಬೇಸರಗೊಂಡಿದ್ದು ನಾಮ ಪತ್ರ ಸಲ್ಲಿಕೆಯಿಂದ ದೂರ ಉಳಿದಿದ್ದರು. ಆದರೆ ಪಕ್ಷದ ತೀರ್ಮಾನದ ವಿರುದ್ಧ ಮಾತನಾಡಿಲ್ಲವಾದರೂ ಅವರ ಮನ ವೊಲಿಸಿ ಪ್ರಚಾರಕ್ಕೆ ಕರೆತರಲು ನಾಯಕರು ಮುಂದಾಗಿದ್ದಾರೆ. ಕೋಲಾರದಲ್ಲಿ ಬಿಜೆಪಿಯಿಂದ ಟಿಕೆಟ್‌ ವಂಚಿತ ಡಿ.ಎಸ್‌.ವೀರಯ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರ ಮನವೊಲಿಸಲು ರಾಜ್ಯ ನಾಯಕರು ಯತ್ನಿಸುತ್ತಿದ್ದಾರೆ.

Advertisement

ಓ ಮೈ ಗಾಡ್‌ ಎಂದ ತೇಜಸ್ವಿ
ಬೆಂಗಳೂರು: ಕರ್ನಾಟಕದಲ್ಲಿನ ಹೈಪ್ರೊಫೈಲ್‌ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೊನೆಯ ಹಂತದಲ್ಲಿ ಸ್ಪರ್ಧೆಗೆ ಆಯ್ಕೆಯಾದದ್ದು ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ. ಆಯ್ಕೆಯ ವಿಷಯ ತಿಳಿಯುತ್ತಲೇ ಟ್ವೀಟ್‌ನಲ್ಲಿ
ಓ ಮೈಗಾಡ್‌ ಅಂದಿದ್ದರು.

“ಓ ಮೈ ಗಾಡ್‌, ಓ ಮೈ ಗಾಡ್‌. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಮೋದಿಯವರು ನನಗೆ ಈ ಅವಕಾಶ ನೀಡಿದ್ದಾರೆ. ಇಂಥ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಾನು ವಿನೀತನಾಗಿದ್ದೇನೆ. ಧನ್ಯವಾದ ಹೇಳಿದರೆ ಮಾತ್ರ ಸಾಲುವುದಿಲ್ಲ. ಕೊನೆಯುಸಿರು ಇರುವವರೆಗೆ ದೇಶಕ್ಕಾಗಿ ದುಡಿವೆ. ಈ ಮೂಲಕ ಮಾತ್ರ ಋಣ ತೀರಿಸಲು ಸಾಧ್ಯ ಮತ್ತು ಕೃತಜ್ಞತೆ ಸಲ್ಲಿಸಲು ಸಾಧ್ಯ. ಧನ್ಯವಾದಗಳು’ ಎಂದು ಟ್ವೀಟಿಸಿದ್ದಾರೆ.

ತೇಜಸ್ವಿನಿ ಹೆಸರೇ ನೀಡಲಾಗಿತ್ತು: ಬಿಎಸ್‌ವೈ
ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದ ಟಿಕೆಟ್‌ಗೆ ತೇಜಸ್ವಿನಿ ಅನಂತಕುಮಾರ್‌ ಅವರೊಬ್ಬರ ಹೆಸರನ್ನು ಕೇಂದ್ರ ಚುನಾವಣ ಸಮಿತಿಗೆ ಕಳುಹಿಸಲಾಗಿತ್ತು. ಆದರೆ ಕೇಂದ್ರ ದಲ್ಲಿ ಏನಾಯಿತೋ ಗೊತ್ತಿಲ್ಲ, ತೇಜಸ್ವಿ ಸೂರ್ಯ ಅವರ ಹೆಸರು ಅಂತಿಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅಚ್ಚರಿ ವ್ಯಕ್ತಪಡಿಸಿದರು. ಚಿತ್ರದುರ್ಗ ದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ವತಿ ಯಿಂದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರಿಗೆ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಹುರಿಯಾಳುಗಳ ನಾಮಪತ್ರ
ಬೆಂಗಳೂರು: ಮೊದಲದ ಹಂತದಲ್ಲಿ ನಡೆಯಲಿರುವ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮಂಗಳವಾರ ಮುಕ್ತಾಯವಾಗಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ 340 ಅಭ್ಯರ್ಥಿಗಳಿಂದ 452 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಿಜೆಪಿಯಿಂದ ವಿ. ಶ್ರೀನಿವಾಸಪ್ರಸಾದ್‌, ಶೋಭಾ ಕರಂದ್ಲಾಜೆ, ತುಮಕೂರು ಕ್ಷೇತ್ರದಿಂದ ಬಸವರಾಜು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ, ಚಿತ್ರದುರ್ಗದಿಂದ ಮಾಜಿ ಸಚಿವ ಎ.ನಾರಾಯಣಸ್ವಾವಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿ.ಕೆ.ಹರಿಪ್ರಸಾದ್‌, ಬೆಂಗಳೂರು ಉತ್ತರ ಕ್ಷೇತ್ರದಿಂದ ಸಚಿವ ಕೃಷ್ಣ ಬೈರೇಗೌಡ, ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದರು.

ಬೆಳಗಾವಿಯಲ್ಲಿ 100 ಮಂದಿ ಸ್ಪರ್ಧೆ
ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು 100 ಮಂದಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿ ಸಲು ಮುಂದಾಗಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ ಬೇಕು ಎಂಬ ಬೇಡಿಕೆಯನ್ನೇ ಪ್ರಧಾನವಾಗಿಟ್ಟು ಕೊಂಡು ರಾಷ್ಟ್ರದ ಗಮನ ಸೆಳೆಯಲು ಸಮಿತಿ ಸದಸ್ಯರು ಈ ತೀರ್ಮಾನ ಕೈಗೊಂಡಿದ್ದಾರೆ. ಇದರ ಜತೆಗೆ ಗಡಿ ವಿವಾದವನ್ನು ಇದೇ ಸಂದರ್ಭದಲ್ಲಿ ಕೆದಕಿ, ಗದ್ದಲ ಎಬ್ಬಿಸುವುದೇ ಅವರ ತಂತ್ರಗಾರಿಕೆ.
1996ರಲ್ಲಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಂಇಎಸ್‌ಗೆ ಭಾರೀ ಮುಖಭಂಗವಾಗಿತ್ತು. ಎಲ್ಲ ಅಭ್ಯರ್ಥಿ  ಗಳ ಠೇವಣಿ ಜಪ್ತಿ ಆಗಿತ್ತು. ಈಗ ಮತ್ತೆ ಅಂತದೇ ದುಸ್ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದೆ. ಅಭ್ಯರ್ಥಿಗೆ ಚುನಾವಣ ಆಯೋಗ ಈ ಸಲ 25 ಸಾವಿರ ರೂ. ಠೇವಣಿ ನಿಗದಿ ಮಾಡಿದೆ. ಅದರಂತೆ 100 ಅಭ್ಯರ್ಥಿಗಳಿಗೆ ತಲಾ 25 ಸಾವಿರ ರೂ.ಗಳಂತೆ 25 ಲಕ್ಷ ರೂ. ಆಗು ತ್ತದೆ. ಈ ಮೊಬಲಗನ್ನು ಮಹಾ ರಾಷ್ಟ್ರದ ನಾಯಕರಿಂದ ಪಡೆದು ಕೊಳ್ಳಲು ಎಂಇಎಸ್‌ ಮುಂದಾಗಿದೆ. ಇದರ ಜತೆಗೆ ಮಹಾರಾಷ್ಟ್ರಕ್ಕೆ ಹೊಂದಿ ಕೊಂಡಂತೆ ಇರುವ ಪ್ರದೇಶ ಗಳಲ್ಲಿ ಮತ ಬ್ಯಾಂಕ್‌ ವೃದ್ಧಿಯ ಆಲೋಚನೆಯೂ ಎಂಇಎಸ್‌ನದ್ದು.

Advertisement

Udayavani is now on Telegram. Click here to join our channel and stay updated with the latest news.

Next