ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ ತಾವು ಅಂದುಕೊಂಡಂತೆ ನಡೆದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲು ದಳ ನಾಯಕರು ಮುಂದಾಗಿದ್ದಾರೆಯೇ? ಇಂತಹ ಮಾತುಗಳಿಗೆ ಕಾರಣ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಓಪನ್ ಆಫರ್.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್ ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೇ ನಮ್ಮ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ. ನನ್ನ ಮೊದಲನೇ ಅಜೆಂಡಾ ಇರುವುದು ಬಿಜೆಪಿ ಸೋಲಬೇಕೆನ್ನುವುದು. ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಗೆ ಹೊಸ ಆಫರ್ ನೀಡಿದರು.
2023 ಚುನಾವಣೆ ವೇಳೆ ಕೈ- ತೆನೆ ಮೈತ್ರಿ ಬಗ್ಗೆ ಸುಳಿವು ನೀಡಿದ ಕುಮಾರಸ್ವಾಮಿ, ಸೆಕ್ಯೂಲರಿಸ ಉಳಿಸಬೇಕೆಂದರೆ ನೀವು ನಮ್ಮ ಜೊತೆ ಬನ್ನಿ. ಮುಂದೆ ನೀವು ಚುನಾವಣೆಯಲ್ಲಿ ಪಡೆಯುವುದು 70 ರಿಂದ 80 ಸ್ಥಾನ ಮಾತ್ರ. ಬಿಜೆಪಿ ದೂರ ಇಡಬೇಕೆಂಬ ಮನಸ್ಸಿದ್ದರೆ ನಮಗೆ ಸಹಕಾರ ಕೊಡಿ ಎಂದರು.
ಇದನ್ನೂ ಓದಿ:ಕಾಶ್ಮೀರದಲ್ಲಿ ಕಲ್ಲು ತೂರಿ ಪರಾರಿಯಾಗಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
Related Articles
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಎಚ್ ಡಿಕೆ, ಇವತ್ತಿನ ಪಾಪದ ಸರ್ಕಾರದ ಜನಕ ಸಿದ್ದರಾಮಯ್ಯ. ವಿಪಕ್ಷ ನಾಯಕನಾಗಿ, ಗೂಟದ ಕಾರಿನಲ್ಲಿ ಓಡಾಡಲು ಅವತ್ತಿನ ಸರ್ಕಾರ ತೆಗೆದರು. ಮಾತುಕಥೆಗೆ ಸಿದ್ದರಾಮಯ್ಯ ಒಬ್ಬರೇ ಒಪ್ಪದಿರುವುದು, ಉಳಿದೆಲ್ಲರೂ ಒಪ್ಪಿದ್ದಾರೆ ಎಂದರು.
ಸಿದ್ದು-ಬಿಎಸ್ ವೈ ಭೇಟಿಯ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಯಾವ ಉದ್ದೇಶಕ್ಕಾಗಿ ನಿನ್ನೆ ಭೇಟಿ ಮಾಡಿದ್ದಿರಿ? ಅದು ವಿಐಪಿ ಕೊಠಡಿ. ಅಲ್ಲಿ ಬೇರೆ ಯಾರೂ ಹೋಗಲು ಸಾಧ್ಯವಿಲ್ಲ. ನಿಮ್ಮ ಹಿಂಬಾಲಕರ ಮೂಲಕವೇ ಪೋಟೋ ವಿಡಿಯೋ ಬಿಡುಗಡೆ ಮಾಡಿಸಿದ್ದಿರಿ. ಇದು ಆತ್ಮಸಾಕ್ಷಿಯ ಮತ ಪಡೆಯುವ ಉದ್ದೇಶವೇ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.