Advertisement

ಕೈ-ಜೆಡಿಎಸ್‌ ತಂತ್ರಗಾರಿಕೆಗೆ ಯಶಸ್ಸು

06:00 AM May 16, 2018 | |

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಐದು ಬಾರಿ ಗೆದ್ದು ಒಂದು ಬಾರಿ ಸೋತು ಏಳನೇ ಬಾರಿಗೆ ಸ್ಪರ್ಧಿಸಿದ್ದ “ಸೈನಿಕ” ಸಿ.ಪಿ.ಯೋಗೇಶ್ವರ್‌ ತಮ್ಮ ರಾಜಕೀಯ ಜೀವನದಲ್ಲಿ 2ನೇ ಸೋಲು ಅನುಭವಿಸಿದ್ದಾರೆ. ತೀವ್ರ ಜಿದ್ದಾಜಿದ್ದಿಗೆ ಬಿದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.

Advertisement

ಸಿ.ಪಿ.ಯೋಗೇಶ್ವರ್‌ರನ್ನು ಸೋಲಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ವಿಚಾರದಲ್ಲಿ ಸಫ‌ಲವಾಗಿದೆ. ಆದರೆ ಚನ್ನಪಟ್ಟಣ ಕ್ಷೇತ್ರದ ಚುಕ್ಕಾಣಿ ಹಿಡಿಯುವ ವಿಚಾರದಲ್ಲಿ ಕಾಂಗ್ರೆಸ್‌ ನ ಆಶಯ ಈಡೇರಲಿಲ್ಲ. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ ಕುಮಾರಸ್ವಾಮಿ 21,530 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಿ.ಪಿ.ವೈ ಸೋಲಿಗೆ ಕಾರಣ ಏನು?: ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್‌ ಸೋಲಿಗೆ ಕಾಂಗ್ರೆಸ್‌ನ ತಂತ್ರಗಾರಿಕೆ ಪ್ರಮುಖ ಕಾರಣವಾಗಿದೆ. ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದು ಇನ್ನೊಂದು ಕಾರಣ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದು ಮಗದೊಂದು ಕಾರಣ.
ಸಿ.ಪಿ.ಯೋಗೇಶ್ವರ್‌ ಬಿಜೆಪಿ ಸೇರಿದ್ದರಿಂದ ಅವರಿಗೆ ಅಲ್ಪಸಂಖ್ಯಾತರ ಮತಗಳು ದೂರವಾಗಿತ್ತು. ಆದರೆ ದಲಿತ ಮತ್ತು ಹಿಂದುಳಿದ ವರ್ಗಗಳ ಬಹುತೇಕ ಮತದಾರರು ಅವರ ಬೆಂಬಲಕ್ಕಿದ್ದರು. ಇದೇ ಆಶಯದ ಮೇಲೆ ಸಿ.ಪಿ.ಯೋಗೇಶ್ವರ್‌ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದಾಗಿ ಒಕ್ಕಲಿಗರ ಮತಗಳು ಚದುರಿ ಹೋದವು.

ಸ್ವತಃ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರೂ, ಸಿ.ಪಿ.ಯೋಗೇಶ್ವರ್‌ ಪರ ದಲಿತ ಮತ್ತು ಹಿಂದುಳಿದ ಮತದಾರರ ಬೆಂಬಲ ಇದ್ದಿದ್ದರಿಂದ ಕಾಂಗ್ರೆಸ್‌ ಎಂಟ್ರಿ ಕೊಟ್ಟು ಹಿಂದುಳಿದ ವರ್ಗಗಳ ಮುಖಂಡ ಎಚ್‌. ಎಂ.ರೇವಣ್ಣರನ್ನು ಕಣಕ್ಕಿಳಿಸಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಬಹುತೇಕ ಮತಗಳನ್ನು ಕಾಂಗ್ರೆಸ್‌ ಬಾಚಿಕೊಂಡಿದ್ದರಿಂದ ಸಿ.ಪಿ.ಯೋಗೇಶ್ವರ್‌ ಸೋಲು ಕಂಡಿದ್ದಾರೆ ಎನ್ನಲಾಗಿದೆ.

ಸೋಲುವ ನಿರೀಕ್ಷೆ ಇತ್ತು: ಫ‌ಲಿತಾಂಶ ಹೊರಬರುವ ಮುನ್ನಾದಿನವೇ ಸಿ.ಪಿ.ಯೋಗೇಶ್ವರ್‌ ತಾವು ಮತ್ತು ತಮ್ಮ ಬೆಂಬಲಿಗರು ಸೋಲಿಗೆ ಮಾನಸಿಕವಾಗಿ ಸಿದ್ಧತೆ ನಡೆಸಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದರು. ಸೋಲುವ ಅವರ ನಿರೀಕ್ಷೆ ನಿಜವಾಗಿದೆ.

Advertisement

ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next