ಕೊರಟಗೆರೆ: ತುಮಕೂರು ಗ್ರಾಮಾಂತರ ಕ್ಷೇತ್ರದ ಇತ್ತೀಚಿನ ಜೆಡಿಎಸ್ ಹಾಗೂ ಬಿಜೆಪಿ ವಾಕ್ ಸಮರಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು ಸುರೇಶ್ ಗೌಡರ ದೂರವಾಣಿ ಸಂಭಾಷಣೆಯ ತುಣುಕಿನ ವಿರುದ್ಧ ಮಾಜಿ ಸಚಿವ ಸಿ.ಚೆನ್ನಗಪ್ಪನವರ ಹಿರಿಯ ಪುತ್ರ ಅರುಣ್ ಕುಮಾರ್ ಕಿಡಿಕಾರಿದ್ದಾರೆ.
ತುಮಕೂರಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಾಡಾಗಿದ್ದು, ಇತ್ತೀಚಿಗೆ ಬಿಜೆಪಿ ಸುರೇಶ್ ಗೌಡ, ಹಾಲಿ ಶಾಸಕ ಡಿಸಿ ಗೌರಿಶಂಕರ್ ವಿರುದ್ಧ ಕೊಲೆಗೆ ಸುಪಾರಿ ವಿಚಾರದೊಡ್ಡ ಮಟ್ಟದ ಸುದ್ದಿಯಾಗಿ ನ್ಯಾಯಾಂಗ ಮೆಟ್ಟಿಲೇರಿದ ಪ್ರಕರಣ ಈಗ ದೂರವಾಣಿ ಸಂಭಾಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿ ಗೌರಿಶಂಕರ್ ಅಣ್ಣ ಅರುಣ್ ಕುಮಾರ್ ಸುರೇಶ್ ಗೌಡರ ವಿರುದ್ಧ ಹರಿಹಾಯ್ದಿದ್ದಾರೆ.
ರಾಜಕಾರಣದಲ್ಲಿ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವುದು ಸಹಜ, ಆದರೆ ಸುರೇಶ್ ಗೌಡ ಹೇಳಿಕೆ ರೀತಿಯಲ್ಲಿ ನಮ್ಮ ಸಂಸ್ಕೃತಿ ಇಲ್ಲ, ಸುಸಂಸ್ಕೃತ ಮನೆತನದಿಂದ ಬಂದವರು ನೂರಾರು ಜನರಿಗೆ ಅನ್ನ ಹಾಕಿದ ಕುಟುಂಬ ನಮ್ಮದು, ಕೊಲೆ ಸುಪಾರಿ ಕೊಟ್ಟು ಮತ್ತೊಬ್ಬರ ಜೀವ ಕಳೆಯುವ ಸಂಸ್ಕೃತಿ ನಮ್ಮದಲ್ಲ, ಎಚ್ಚರಿಕೆಯಿಂದ ಮಾಜಿ ಶಾಸಕರು ಮಾತನಾಡಬೇಕು, ಜೊತೆಗೆ ರಾಜಕಾರಣ ವಿಚಾರ ಬಂದಲ್ಲಿ ಅವರು ಇಬ್ಬರಲ್ಲಿ ಜಟಾಪಟಿ ನಡೆಯಲಿ ಆದರೆ ಕುಟುಂಬಸ್ಥರ ಹೆಸರನ್ನು ತಾಳೆ ಹಾಕಿದರೆ ಪರಿಸ್ಥಿತಿ ಸರಿ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಯಿಯ ಬಗ್ಗೆ ಅವಹೇಳನ ಖಂಡನೆ
Related Articles
ತುಮಕೂರು ಗ್ರಾಮಾಂತರ ರಾಜಕಾರಣಕ್ಕೆ ಸಂಬಂಧಿಸಿದಂತೆ ಡಿ ಸಿ ಗೌರಿಶಂಕರ್ ಹಾಗೂ ಸುರೇಶ್ ಗೌಡ ಏನಾದರೂ ಮಾತನಾಡಿಕೊಳ್ಳಲಿ ಆದರೆ ನಮ್ಮ ಕುಟುಂಬಕ್ಕೆ ಕೈ ಹಾಕಿದರೆ ನಾವು ಸುಮ್ಮನಿರೋದಿಲ್ಲ, ನೀನು ನನ್ನ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀಯ, ಇದನ್ನ ನಾವು ಸಹಿಸುವುದಿಲ್ಲ. ಕ್ಷಮೆ ಕೇಳದಿದ್ದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಡಾ. ಜಿ ಪರಮೇಶ್ವರ ದೊರಕಿರುವುದೇ ಮತದಾರರ ಪುಣ್ಯ, ಯಾವುದೇ ಆಸೆ ಆಕಾಂಕ್ಷೆ ಇಲ್ಲದ ಮತದಾರರ ಶ್ರೇಯೋಭಿವೃದ್ಧಿ ಬಯಸುವ ಅದರಲ್ಲೂ ಕ್ಷೇತ್ರದ ಮತದಾರರಿಗೆ ತಮ್ಮ ಸಿದ್ದಾರ್ಥ ಆಸ್ಪತ್ರೆಯಲ್ಲಿ ಉಚಿತ ಸೇವೆ ಕಲ್ಪಿಸುವ ಇಂಥ ವ್ಯಕ್ತಿಗೆ ಮತ ಹಾಕದಿದ್ದರೆ ಮತದಾರರು ಮುಂದಿನ ದಿನದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಹುತನಹಳ್ಳಿ ಮಲ್ಲಿಕ್, ಚಿನ್ನಹಳ್ಳಿ ಈಶ್ವರ್, ಮಧು, ಹರೀಶ್ ಬಾಬು, ವಡ್ಡಗೆರೆ ಗಂಗಣ್ಣ, ಗುಂಡನಪಾಳ್ಯದ ನಟರಾಜು, ಮಂಜುಳಮ್ಮ,ಜಯಲಕ್ಷ್ಮಮ್ಮ, ವಿಜಯ ಲಕ್ಷ್ಮಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.