Advertisement

ಹದಗೆಟ್ಟ ರಸ್ತೆಗಳ ದುರಸ್ತಿಗೆ ಜೆಡಿಎಸ್‌ ಕಾರ್ಯಕರ್ತರ ಆಗ್ರಹ

06:54 PM Jul 31, 2022 | Shwetha M |

ಇಂಡಿ: ತಾಲೂಕಿನದ್ಯಂತ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಹರ ಸಾಹಸಪಟ್ಟರು. ಪೊಲೀಸ್‌ ಇಲಾಖೆಯವರು ಹೆದ್ದಾರಿ ಬಂದ್‌ ಮಾಡಲು ಅವಕಾಶ ಕೊಡಲಿಲ್ಲ. ತದ ನಂತರ ಪ್ರತಿಭಟನಾಕಾರರು ಇಂಡಿ ಮತ್ತು ಚಡಚಣ ರಸ್ತೆ ತಡೆದು ಕೆಲ ಕಾಲ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜಿ. ಪಾಟೀಲ ಹಲಸಂಗಿ ಮಾತನಾಡಿ, ಕಳೆದ 4-5 ವರ್ಷಗಳಿಂದ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿವೆ. ಸರ್ಕಾರ ಮತ್ತು ಜನಪ್ರತಿನಿ ಧಿಗಳು ಸಾಮಾನ್ಯ ಜನರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇದು ಪ್ರಜಾಪ್ರಭುತ್ವದ ದುರ್ದೈವ. ಗಾಂಧಿ àಜಿಯವರು ಈ ದೇಶಕ್ಕೆ ಹೋರಾಟ ಮತ್ತು ಸತ್ಯಾಗ್ರಹ ಮೂಲಕ ಸ್ವಾತಂತ್ರÂ ತಂದು ಕೊಟ್ಟಿದ್ದಾರೆ. ಸಾರ್ವಜನಿಕರು ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದರು.

ಜೆಡಿಎಸ್‌ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಶೇ. 90 ರಸ್ತೆಗಳು ಹಾಳಾಗಿದ್ದು ಕೂಡಲೇ ಸರ್ಕಾರ ರಸ್ತೆ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಬೇಕಾಗುತ್ತದೆ. ನಾವು ಕಾನೂನು ರಿತೀಯಲ್ಲಿ ಹೋರಾಟ ಮಾಡುತ್ತಿದ್ದು. ಹೋರಾಟದಲ್ಲಿ ನನ್ನ ಪ್ರಾಣ ಹೋದರು ಚಿಂತೆಯಿಲ್ಲ. ತಾಲೂಕಿನ ಜನತೆಗೆ ಮೂಲ ಸೌಕರ್ಯ ಒದಗಿಸಿಕೊಡಲು ಸದಾ ಸಿದ್ಧ. ಆದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ವಿನಃ ಹಿಂದೆ ಸರಿಯುವುದಿಲ್ಲ. ಜನರು ತಾಳ್ಮೆ ಕಳೆದುಕೊಳ್ಳುವ ಮೊದಲು ಹೋರಾಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದರು.

ಹೋರಾಟದಲ್ಲಿ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಮರೆಪ್ಪ ಗಿರಣಿವಡ್ಡರ, ಬಸವರಾಜ ಹಂಜಗಿ, ಮಹಿಬೂಬ ಬೇವನೂರ, ಸಿದ್ದು ಡಂಗಾ, ಅಯೂಬ ನಾಟೀಕಾರ, ಸಿದ್ದಣಗೌಡ ಬಿರಾದಾರ, ಬಸಗೊಂಡ ಪಾಟೀಲ, ಅರವಿಂದ ಪಾಟೀಲ, ಸಂತೋಷ ಬಿರಾದಾರ, ರವಿ ಕೆಂಗೆರಿ, ಮಾಳಪ್ಪ ಉಮರಾಣಿ, ಬೀರಪ್ಪ ಸಗಾಯಿ, ನಿಯಾಝ್ ಅಗರಖೇಡ, ಇರ್ಫಾನ್‌ ಪಠಾಣ, ರಾಜು ಮುಲ್ಲಾ, ಬಸವರಾಜ ಹಂಜಗಿ ರವಿ ಪಾಟೀಲ (ಬದಾಮಿ), ಸಂಜು ಫಾಯಕಾರ, ಮನೋಹರ ನಾವಿ, ಬಾಲಕೃಷ್ಣ ಭೋಸಲೆ ಸೇರಿದಂತೆ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next