Advertisement
ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಸ್ ಅಭ್ಯರ್ಥಿಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳು ಬಂದಿವೆ.ಈ ಮೂಲಕ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಸಾಬೀತು ಮಾಡಿದ್ದಾರೆ ಎಂದರು.
Related Articles
Advertisement
ಕುಂಕುಮ ಕೊಟ್ಟರು, ದುಡ್ಡು ಕೊಟ್ಟರು ಅಂತಾ ನಮ್ಮ ಶಾಸಕರೇ ಹೇಳಿದ್ದಾರೆ.ಹಾಗಾದರೆ ನೀವೇನೂ ಕಳ್ಳೆಪುರಿ ಕೊಟ್ರಾ? ಜೆಡಿಎಸ್ ಗೆ ಯಾರು ಅನಿವಾರ್ಯ ವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ನಮಗೆ ಈಗಲೂ ನಿಮ್ಮ ಮೇಲೆ ಗೌರವವಿದೆ. ಈಗಲೂ ನಮಗೆ ಅವರೇ ನಾಯಕರು. ಎಷ್ಟೆಲ್ಲಾ ನೋವು ಕೊಟ್ಟಿದ್ದಾರೆ. ಆದರೂ ಅವರನ್ನು ನಾಯಕರು ಅಂತಾ ಒಪ್ಪಿಕೊಂಡಿದ್ದೇವೆ. ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರೋದು. ನಿಮ್ಮ ಅವಧಿ ಮುಗಿಯುವವರೆಗಾದರೂ ನೀವು ಪಕ್ಷದ ಪರವಾಗಿ ಇರಿ ಎಂದು ಜಿ ಟಿ ದೇವೇಗೌಡ ಹೆಸರು ಹೇಳದೆ ತಿರುಗೇಟು ಕೊಟ್ಟರು.
ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ಜೆಡಿಎಸ್ ಮುಗಿಸುವ ಕೆಲಸ ಮಾಡುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಇಬ್ಬರಿಗೂ ನಾವೇ ಅನಿವಾರ್ಯ ಅನ್ನುವುದು ಗೊತ್ತಾಗಿದೆ. ನಾವು ಯಾರನ್ನು ಬೆಂಬಲಿಸುತ್ತೇವೋ ಅವರಿಗೆ ಬಹುಮತ ಸಿಗಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಇದೆ ರೀತಿ ಆಗಲಿದೆ. ಆದರೆ ನಾವು ಯಾರ ಜೊತೆಯೂ ಹೋಗುವುದಿಲ್ಲ. ಇಬ್ಬರಿಂದಲೂ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.
ಹಿಂದೆ ನಡೆದ ಚುನಾವಣೆಗಳು, ಈಗ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಇದ್ದುಕೊಂಡು ನಮ್ಮ ವಿರುದ್ಧವೇ ಕೆಲಸ ಮಾಡಿದ್ದಾರೆ. ಇದನ್ನು ಪಕ್ಷ ಪರಿಗಣಿಸಿದೆ. ಈಗಾಗಲೇ ಪಕ್ಷದ ವರಿಷ್ಠರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಆ ತೀರ್ಮಾನ ಏನು ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.ಇದುವರೆಗೂ ಅವರನ್ನು ನಮ್ಮ ನಾಯಕರು ಅನ್ನುತ್ತಿದ್ದೆ.ಈಗ ಶಾಸಕರು ಅನ್ನುತ್ತೇನೆ. ಎಂದು ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಶಿಸ್ತುಕ್ರಮದ ಕುರಿತು ಸಾ ರಾ ಮಹೇಶ್. ಸುಳಿವು ನೀಡಿದರು.
ವಿಜೇತ ಅಭ್ಯರ್ಥಿ ಸಿ ಎನ್ ಮಂಜೇಗೌಡ ಪಕ್ಷದ ವರಿಷ್ಠರನ್ನು ಭೇಟಿಯಾಗಲಿದ್ದಾರೆ.ಚುನಾವಣೆಯ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.