Advertisement

ಗುಡಿಸಲು ಮುಕ್ತಿಗಾಗಿ ಶ್ರಮಿಸುವವರಿಗೆ ಮತ ನೀಡಿ

03:27 PM Nov 24, 2021 | Team Udayavani |

ಗುರುಮಠಕಲ್‌: ಮತಕ್ಷೇತ್ರದ ಗ್ರಾಪಂನಲ್ಲಿ ಯಾರು ಗುಡಿಸಲು ಮುಕ್ತಿಗಾಗಿ ಶ್ರಮಿಸುತ್ತಾರೋ ಅಂಥ ನಾಯಕನಿಗೆ ನಮ್ಮ ಮತ ನೀಡೋಣ ಎಂದು ಮತದಾರರಿಗೆ ಜೆಡಿಎಸ್‌ ಯುವ ನಾಯಕ ಶರಣುಗೌಡ ಕಂದಕೂರು ಕರೆ ನೀಡಿದರು.

Advertisement

ಯಾದಗಿರಿ-ಕಲಬುರ್ಗಿ ಜಿಲ್ಲೆಯ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೀರಾ ಗಾರ್ಡನ್‌ನಲ್ಲಿ ಜೆಡಿಎಸ್‌ ಪಕ್ಷದಿಂದ ಆಯೋಜಿಸಿದ್ದ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪುರಸಭೆ ಅಧ್ಯಕ್ಷ ಮತ್ತು ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್‌ ಪಕ್ಷದ ಅಭ್ಯರ್ಥಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೂ ಮತದಾನದ ಹಕ್ಕು ಚಲಾಯಿಸಬೇಕು. ನಮ್ಮ ಮತದಾನ ಮತಕ್ಷೇತ್ರದ ಅಭಿವೃದ್ಧಿಗಾಗಿ ಇರಬೇಕು. ಪಕ್ಷದ ಹೈಕಮಾಂಡ್‌ ಆದೇಶದಂತೆ ಮತವನ್ನು ಯಾರಿಗೆ ಚಲಾಯಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಅದಕ್ಕೆ ಮತದಾರರು ಬದ್ಧರಾಗಿರಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಕ್ಷದ ಮುಖಂಡರಾದ ಬಸಣ್ಣ ದೇವರಹಳ್ಳಿ, ಆನಂತಪ್ಪ ಬೋಯಿನ್‌, ಅಮರೇಶ ರಾಠೊಡ್‌, ಸುರೇಶ ಚಿನ್ನರಾಠೊಡ, ತಾಲೂಕು ಘಟಕ ಯುವ ಅಧ್ಯಕ್ಷ ಜ್ಞಾನೇಶ್ವರರೆಡ್ಡಿ, ನರಸಪ್ಪ ಕೌಡಿ ಮಾತನಾಡಿದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next