Advertisement

ಜಯಶ್ರೀ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ತೆರೆ

10:47 AM Oct 14, 2021 | Team Udayavani |

ಮೈಸೂರು: ಖ್ಯಾತ ಗಾಯಕಿ, ಹಿರಿಯ ಕಲಾವಿದೆ ಡಾ. ಬಿ.ಜಯಶ್ರೀ ಅವರ ಗಾಯನದೊಂದಿಗೆ 7 ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ತೆರೆಕಂಡಿತು. ತಮ್ಮ ಕಂಚಿನ ಕಂಠದಿಂದ ಕಂಪನಿ, ಹವ್ಯಾಸಿ ನಾಟಕಗಳ ಹಲವು ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದ ಹಿರಿಯ ಕಲಾವಿದೆ ಜಯಶ್ರೀ ಅವರು, ಶರಣು… ಶರಣೆಂದು ಸಭಿಕರಿಗೆ ನಮಿಸುತ್ತ ಅರಮನೆ ವೇದಿಕೆ ಆಗಮಿಸಿದಾಗ ಸಭಿಕರಿಂದ ಕರಡಾತನ ಮೊಳಗಿತು.

Advertisement

ಲಕ್ಷ್ಮೀಪತಿ ರಾಜನ ಕತೆ ಆಧಾರಿತ ನಾಟದಕ ನಾಂದಿ ಗೀತೆ ಶ್ರೀಗಣರಾಯ ಪಾರ್ವತಿ ತನಯ ಶರಣು ಶರಣು ನಿನಗೆ.. ಗೀತೆಯೊಂದಿಗೆ ರಂಗ ಸಂಗೀತಕ್ಕೆ ಮುಂದಡಿಯಿಟ್ಟರು. ಬಳಿಕ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕದ ಬಿ.ವಿ.ಕಾರಂತರ ಸಂಗೀತ ಸಂಯೋ ಜನೆಯ ಶರಣು ಹೇಳವಿ ಸ್ವಾಮಿ ನಾವು ನಿಮಗೆ, ಸದ್ದು ಗದ್ದಲ ಮಾಡಬ್ಯಾಡಿ ಆಟದೊಳಗೆ ಗೀತೆ ಮೂಲಕ ಪ್ರೇಕ್ಷಕರನ್ನು ರಂಗ ಸಂಗೀತ ಲೋಕಕ್ಕೆ ಕರೆದೊಯ್ದರು.

ಇದನ್ನೂ ಓದಿ;- ಸಚಿವರಿಂದ ಟಾಂಗಾದಲ್ಲಿ ನಗರ ಪ್ರದಕ್ಷಿಣೆ

ಸತ್ತವರು ನೆರಳು ನಾಟಕದ ಶಾಸ್ತ್ರೀಯ ಬದ್ಧವಾದ ಪುರಂದರ ದಾಸರ ಕೃತಿಯ ಮುಂದಿನ ವಾರ ಶುಭವಾರ, ಮುಂದಿನ ತಾರೆ ಶುಭತಾರೆ ಹಾಡಿನ ಮೂಲಕ ನಾಡಿನ ಜನರಿಗೆ ಶುಭ ಕೋರಿದರು. ಕೃಷ್ಣಲೀಲಾ ನಾಟಕದ ವಸಂತೋತ್ಸವಕ್ಕೆ ಮೊಸರು ಹಾಲು ತಕೊಂಡು ಕೃಷ್ಣನನ್ನು ನೋಡಲು ಹೊರಟ ಗೋಪಿಕೆಯರು ಹಾಡುವ ಗೋಕುಲ ಸುಖ ಸಂತೋಷ ಸುಧೆಯೋ ನಿಧಿಯೋ ಹಾಡಿನ ಮೂಲಕ ರಂಜಿಸಿದರು.

ಗಿರೀಶ್‌ ಕಾರ್ನಾಡರ ನಾಗಮಂಡಲ ನಾಟಕದ ಸಿ.ಅಶ್ವಥ್‌ ಸಂಗೀತ ಸಂಯೋಜನೆ ಹೀಗಿದ್ದಳು ಒಬ್ಬಳು ಹುಡುಗಿ ಗೀತೆಯ ಮೂಲಕ ಸಭಿಕರನ್ನು ನಕ್ಕು ನಲಿಸಿದರು. ಜಯಶ್ರೀ ಅವರ ಕಂಠಸಿರಿಯಿಂದ ಬುಧವಾರದ ಸಂಗೀತ ಸಂಜೆ ಶ್ರೀಮಂತಗೊಂಡಿತು. ಇದಕ್ಕೂ ಮುನ್ನ ಪಂಡಿತ್‌ ಜಯತೀರ್ಥ ಮತ್ತು ತಂಡದ ಹಿಂದೂಸ್ತಾನಿ ಗಾಯನ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚನೆಯ ಬೆಟ್ಟದ ತಾಯಿ ಚಾಮುಂಡಿ ಕಷ್ಟವ ಹರಿಸೇ ನಮ್ಮಮ್ಮ ಹಾಡಿದಾಗ ಶ್ರೋತೃಗಳು ಭಕ್ತಿಭಾವದಲ್ಲಿ ಪರವಶರಾದರು. ಕೊನೆಯದಾಗಿ ಮೈಸೂರಿನ ಶ್ರೀಧರ್‌ ಜೈನ್‌ ಮತ್ತು ತಂಡದವರ ನೃತ್ಯರೂಪಕದ ಮೂಲಕ 2021ರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ತೆರೆಬಿದ್ದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next