Advertisement

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

06:19 PM Oct 02, 2024 | Team Udayavani |

ಗಂಗಾವತಿ: ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಕಾಲ ಬದಲಾದಂತೆ ಜನರೂ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಅವರವರ ಹವ್ಯಾಸಗಳೂ ಬದಲಾಗುತ್ತಿವೆ.

Advertisement

ಇಂದಿನ ಯುವ ಪೀಳಿಗೆ ಸಿನೆಮಾ, ಕ್ರಿಕೆಟ್ ತಾರೆಯರ ಭಾವಚಿತ್ರ ಸಂಗ್ರಹಿಸುವ ಹವ್ಯಾಸ ಇಟ್ಟುಕೊಳ್ಳುತ್ತಾರೆಯೇ ಹೊರತು, ಐತಿಹಾಸಿಕ ಚಿತ್ರಗಳನ್ನಲ್ಲ. ಅವುಗಳನ್ನು ಸಂಗ್ರಹಿಸುವ, ಜೋಪಾನವಾಗಿ ಎತ್ತಿಡುವ ಕೆಲಸ ಮಾಡುವ ಯುವಕರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ.

ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಕ್ರೀಡಾಪಟು ಜಯಂತ್ ಕುಮಾರ್ ಶಾಲಾ ದಿನಗಳಲ್ಲಿ ರಾಷ್ಟ್ರಪೀತ ಮಹಾತ್ಮ ಗಾಂಧೀಜಿಯವರ ಭಾಷಣದ ಪ್ರೇರಣೆಯಿಂದ ಪ್ರೇರೆಪಿತರಾಗಿ ಮಹಾತ್ಮ ಗಾಂಧೀಜಿಯವರ ಅಮೂಲ್ಯವಾದ ನಾಣ್ಯ, ನೋಟ್, ಸ್ಟ್ಯಾಂಪ್‌ಗಳು ಹಾಗೂ ವಿಶೇಷವಾದ ಲೇಖನಗಳ ಸಂಗ್ರಹ ಅವರಲ್ಲಿ ಭದ್ರವಾಗಿ ಸಂರಕ್ಷಿಸಿ ಇಟ್ಟಿರುವುದು ಇಂದಿನ ಪೀಳಿಗೆಗೆ ಒಂದು ಮಾದರಿ ಎಂದು ಹೇಳಬಹುದು.

ಅವರ ಸಂಗ್ರಹದ ಒಂದು ನೋಟ

Advertisement

ನಾಣ್ಯಗಳು: ಗಾಂಧೀಜಿ ಶತಮಾನೋತ್ಸವ ಅಂಗಾವಾಗಿ 1969ರಲ್ಲಿ ಆರ್.ಬಿ.ಐ. ಬಿಡುಗಡೆ ಮಾಡಿರುವ ಅಪರೂಪದ 20 ಪೈಸೆ, 50 ಪೈಸೆ, 1 ರೂಪಾಯಿ, 10 ರೂಪಾಯಿ ಬೆಳ್ಳಿ ನಾಣ್ಯ ಹಾಗೂ ಇತ್ತೀಚೆಗೆ ದಂಡಿ ಯಾತ್ರೆಯ 75 ವರ್ಷದ ನೆನಪಿನ ಅಂಗವಾಗಿ ಬಿಡುಗಡೆಯಾದ 5 ರೂಪಾಯಿಯ ನಾಣ್ಯ, 50 ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬಿಡುಗಡೆಗೊಂಡ 50 ಪೈಸೆಯ ನಾಣ್ಯಗಳ ಸಂಗ್ರಹ.

ನೋಟ್‌ಗಳು: ಅತ್ಯಂತ ಅಮೂಲ್ಯವಾದ ಗಾಂಧೀಜೀ ಅವರ ಶತಮಾನೋತ್ಸವದಲ್ಲಿ ಬಿಡುಗಡೆಗೊಂಡ ಕುಳಿತುಕೊಂಡು ಭಗವದ್ಗೀತೆ ಓದುತ್ತಿರುವ ಗಾಂಧೀಜಿಯ 2, 5 , 10 ರೂಪಾಯಿ ಮತ್ತು 1 ರೂಪಾಯಿ ನೋಟ್‌ಗಳು ಹಾಗೂ 1996ರಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿರುವ 5, 10, 20, 50, 100, 500, 1000 ಮುಖ ಬೆಲೆಯ ರೂಪಾಯಿ ಚಿತ್ರಗಳು ಇರುವ ನೋಟ್ ಗುಚ್ಚಗಳ ಸಂಗ್ರಹ.

ಸ್ಟ್ಯಾಂಪ್‌ಗಳು: ಭಾರತ ಅಂಚೆ ಇಲಾಖೆ 2011 ನಾಸಿಕ್‌ನಲ್ಲಿ ಮುದ್ರಿಸಿದ ಪ್ರಂಪಚದ ಮೊಟ್ಟ ಮೊದಲ 100 ರೂಪಾಯಿ ಮುಖ ಬೆಲೆಯ ಅಪರೂಪದ ಖಾದಿ ಗಾಂಧೀಜಿ ಸ್ಟ್ಯಾಂಪ್‌ ಹಾಗೂ 25, 50, 100 (ಕೆಂಪು, ಹಸಿರು ಬಣ್ಣದ) ಪೈಸೆಯ ಸ್ಟ್ಯಾಂಪ್‌, 250, 500 (ಕೆಂಪು, ನೀಲಿ ಬಣ್ಣದ), ಸತ್ಯಾಗ್ರಹ ನೆನಪಿನ ಅಂಗವಾಗಿ ಬಿಡುಗಡೆಗೊಂಡ 500 ಪೈಸೆ, 60 ವರ್ಷದ ಮಾನವ ಹಕ್ಕು ಅಯೋಗ ಅಧಿಕಾರಕ್ಕೆ ಬಂದ ನೆನಪಿನ ಅಂಗವಾಗಿ 500 ಪೈಸೆ ಒಳಗೊಂಡ ವಿವಿಧ ರೀತಿಯ 9 ಗಾಂಧೀಜಿ ಸ್ಟ್ಯಾಂಪ್‌ಗಳು ಇವರು ಸಂಗ್ರಹದಲ್ಲಿವೆ.

ಲೇಖನ ಹಾಗೂ ವ್ಯಂಗ್ಯಚಿತ್ರ: ಕೂತೂಹಲಕರವಾದ ಕನ್ನಡ, ತೆಲುಗು, ಇಂಗ್ಲೀಷ್ ಮೊದಲಾದ ದಿನಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಬಂದಿರುವ ಅಪರೂಪದ ಅಂಕಣ, ವ್ಯಂಗ್ಯಚಿತ್ರ, ಛಾಯಾಚಿತ್ರ, ಲೇಖನಗಳಾದ ಗಾಂಧೀಗೂ ಒಬ್ಬ ಪ್ರೇಯಿಸಿ ಇದ್ದಳೂ!, ಪಂಚಕೋನ ಕ್ರಿಕೆಟ್ ನಿಲ್ಲಿಸಿದ ಗಾಂಧೀಜಿ, ಗಾಂಧೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಲು ಅವರ ಮಗ ನಿರಾಕರಿಸಿದ್ಧ!, ಗಾಂಧೀಜಿ ವಂಶ ವೃಕ್ಷ, ಹೆಂಗಿದ್ರು ಹೆಂಗಾದ್ರು ಗೊತ್ತಾ(ವ್ಯಂಗ್ಯಚಿತ್ರ), ಗಾಂಧಿ ಹತ್ಯೆಗೆ ಐದು ಬಾರಿ ಯತ್ನ, ಗಾಂಧೀಜಿಯವರ ಹನ್ನೊಂದು ವ್ರತಗಳು, ಪತ್ರಕರ್ತರಾಗಿ ಗಾಂಧೀಜಿ, ʼಬೀದಿ ನಾಯಿಗಳನ್ನು ಕೊಲ್ಲಿ’ ಎಂದ್ದಿದರು ಗಾಂಧೀಜಿ ಹಾಗೂ ವಿವಿಧ ಲೇಖನಗಳ ಪರಿವಿಡಿಯನ್ನು ಪುಸ್ತಕದ ರೂಪದಲ್ಲಿ ಅಚ್ಚು ಕಟ್ಟಾಗಿ ಇಟ್ಟಿರುವುದು ನೋಡುಗರಿಗೆ ಕೂತುಹಲ ಮೂಡಿಸುತ್ತದೆ.

ಚಿಕ್ಕ ಹುಡುಗನಾಗಿದ್ದಾಗಲೇ ಹವ್ಯಾಸವನ್ನು ರೂಢಿಸಿಕೊಂಡಿರುವುದರಿಂದ ತಮ್ಮಲ್ಲಿ ಈಗ ದೊಡ್ಡ ಸಂಗ್ರಹವೇ ಇರುವುದರಿಂದ ಆಸಕ್ತರಿಗೆ ಇವುಗಳನ್ನು ತೋರಿಸಿ ಖುಷಿ ಪಡುತ್ತಾರೆ ಕ್ರೀಡಾಪಟು ಜಯಂತ್ ಕುಮಾರ್.

ಒಟ್ಟಾರೆ ಇತಿಹಾಸವನ್ನೇ ಮರೆಯುತ್ತಿರುವ ಈ ಕಾಲದಲ್ಲಿ ಗಾಂಧಿ ಜಯಂತಿ ದಿನದಂದಾದರೂ ನಾವು ದಿನನಿತ್ಯ ಉಪಯೋಗಿಸುವ ರೂಪಾಯಿ ನೋಟ್‌ಗಳಲ್ಲದೆ ಅಪರೂಪದ ಸಂಗ್ರಹ ನೋಟ್, ನಾಣ್ಯ, ಸ್ಟ್ಯಾಂಪ್, ಲೇಖನಗಳನ್ನು ನೋಡಿ ಬಾಪೂಜಿಯವರನ್ನು  ಸ್ಮರಿಸೋಣ.

-ಕೆ.ನಿಂಗಜ್ಜ

 

Advertisement

Udayavani is now on Telegram. Click here to join our channel and stay updated with the latest news.

Next