Advertisement

ಜಯಾ ಸಾವು: ಸಿಎಂ ಉತ್ತರ ಪಡೆದ್ರೆ 10000 ಬಹುಮಾನ

03:20 AM Jul 17, 2017 | Team Udayavani |

ತಿರುವಾರೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮೃತಪಟ್ಟಿದ್ದು ಹೇಗೆ ಮತ್ತು ಆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತಾರಾ ಎಂದು ಪ್ರಶ್ನೆ ಕೇಳಿ ಸಿಎಂ ಕೆ. ಪಳನಿಸ್ವಾಮಿ ಅವರಿಂದ ನೇರ ಉತ್ತರ ಪಡೆದವರಿಗೆ 10 ಸಾವಿರ ರೂ ನಗದು ಬಹುಮಾನ ಸಿಗಲಿದೆ! ಈ ಬಹುಮಾನ ಘೋಷಿಸಿರುವುದು ಬೇರಾರೂ ಅಲ್ಲ. ಜಯಾ ಅವರ ಆಪ್ತರಾಗಿದ್ದ, ಮಾಜಿ ಸಿಎಂ ಪನ್ನೀರ್‌ ಸೆಲ್ವಂ. ಜಯಾ ಸಾವಿನ ಹಿಂದಿನ ನಿಜವಾದ ರಹಸ್ಯ ಹೊರಬರುವವರೆಗೆ ನಮ್ಮ ಧರ್ಮ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಅವರು ಮತ್ತೂಮ್ಮೆ ಶಪಥ ಮಾಡಿದ್ದಾರೆ. ಕುಟುಂಬ ರಾಜಕಾರಣ ಬಯಸುವ ಶಶಿಕಲಾ ಅವರನ್ನು ಜಯಾ ಮತ್ತು ಎಂಜಿಆರ್‌ ಅವರ ರಾಜಕೀಯ ಜೀವನಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದೂ ಟಾಂಗ್‌ ಕೊಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next