Advertisement

ಜಯಲಲಿತಾ ಸಾವಿನ ತನಿಖೆ: ಶಶಿಕಲಾ, ಅಪೋಲೊ ಆಸ್ಪತ್ರೆಗೆ ಸಮನ್ಸ್‌

12:36 PM Dec 23, 2017 | udayavani editorial |

ಚೆನ್ನೈ : ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ| ಜೆ ಜಯಲಲಿತಾ ಅವರ ಶಂಕಾಸ್ಪದ ಸಾವಿನ ಏಕ ಸದಸ್ಯ ತನಿಖಾ ಆಯೋಗ, ಬೆಂಗಳೂರು ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ  ಜಯಲಲಿತಾ ಅವರು ನಿಕಟವರ್ತಿ ವಿ ಕೆ ಶಶಿಕಲಾ ಮತ್ತು ಅಪೋಲೊ ಅಸ್ಪತ್ರೆ ಅಧ್ಯಕ್ಷ ಪ್ರತಾಪ್‌ ಸಿ ರೆಡ್ಡಿ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. 

Advertisement

ಜಯಲಲಿತಾ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೇರಿಸಿದಾಗಿನಿಂದ ಆಕೆಯ ಸಾವಿನ ತನಕ ಆಕೆಗೆ ನೀಡಲಾಗಿರುವ ವೈದ್ಯಕೀಯ ಚಿಕಿತ್ಸೆ ಬಗೆಗಿನ ಮಾಹಿತಿಗಳನ್ನು ಸಲ್ಲಿಸುವಂತೆ ಸಮನ್ಸ್‌ನಲ್ಲಿ ಆದೇಶಿಸಲಾಗಿದೆ. ಇದಕ್ಕೆ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. 

ಜಯಲಲಿತಾ ಅವರನ್ನು ಕಳೆದ ವರ್ಷ ಸೆ.22ರಂದು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಿ.5ರಂದು ಆಕೆಯ ಸಾವು ಸಂಭವಿಸಿತ್ತು. 

ಜಸ್ಟಿಸ್‌ ಎ ಅರುಮುಘಸ್ವಾಮಿ ಆಯೋಗವು ಜಯಲಲಿತಾ ಅವರ ಶಂಕಾಸ್ಪದ ಸಾವಿನ ತನಿಖೆಯನ್ನು ನಡೆಸುತ್ತಿದೆ. 

ಈಗ ಜೈಲಿನಲ್ಲಿರುವ ಶಶಿಕಲಾ ಅವರು ತಮ್ಮ ಸಾಕ್ಷ್ಯವನ್ನು ವಕೀಲರ ಮೂಲಕ ಇಲ್ಲವೇ ಖುದ್ದು ಹಾಜರಾಗುವ ಮೂಲಕ ಸಲ್ಲಿಸಬಹುದು ಎಂದು ಪಿಟಿಐ ಮೂಲಗಳು ತಿಳಿಸಿವೆ. 

Advertisement

ಶಶಿಕಲಾ ಅವರ ಸೋದರ ಸಂಬಂಧಿ ಮತ್ತು ಈಗ ಬದಿಗೆ ಒತ್ತಲ್ಪಟ್ಟಿರುವ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್‌ ಅವರು ಜಯಲಲಿತಾ ಅವರು ಆಸ್ಪತ್ರೆಯಲ್ಲಿ ತಮ್ಮ ಕೊನೆಗಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿತ್ರಿಸಲಾಗಿದ್ದ ವಿಡಿಯೋ ತುಣುಕೊಂದನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎರಡು ದಿನಗಳ ತರುವಾಯ ಆಯೋಗವು, ಶಶಿಕಲಾ ಮತ್ತು ಅಪೋಲೋ ಆಸ್ಪತ್ರೆ ಅಧ್ಯಕ್ಷರಿಗೆ ಸಮನ್ಸ್‌ ಜಾರಿ ಮಾಡಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next