Advertisement

ಮೀಸಲು ಸಿಗೋವರೆಗೂ ಹೋರಾಟ

08:19 PM Mar 31, 2021 | Team Udayavani |

ಹಿರೇಕೆರೂರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಬಿಟ್ಟಿಲ್ಲ, ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ಭವನದಲ್ಲಿ ಏರ್ಪಡಿಸಿದ್ದ ಶರಣು ಶರಣಾರ್ಥಿ ಸಂದೇಶ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು. ಪಂಚಮಸಾಲಿ ಸಮಾಜ ಸ್ವಾರ್ಥವನ್ನು ಬಯಸದೇ, ತ್ಯಾಗದ ಪ್ರತೀಕವಾಗಿ ನೆಲೆ ನಿಂತಿರುವ ಸಮಾಜವಾಗಿದೆ. ಹೋರಾಟದ ಕಿಚ್ಚು ರಕ್ತಗತವಾಗಿ ಪೂರ್ವಜರಿಂದ ಬಂದಿದ್ದು, ಯಾವಾಗಲು ಶ್ರಮ ಜೀವಿಗಳು ಮತ್ತು ಸದಾ ಪರಿಸರದೊಂದಿಗೆ ಅವಿನಾಭಾವ ಸಂಭಂದ ಹೊಂದಿರುವ ಸಮಾಜವಾಗಿದೆ ಎಂದರು.

ಮುಖ್ಯ ಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು, ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದೇವೆ. ಯೂಡಿಯೂರಪ್ಪನವರು ಮುಖ್ಯ ಮಂತ್ರಿಯಾಗಲು ಪಂಚಮಸಾಲಿ ಸಮಾಜ ಹಗಲಿರುಳು ದುಡಿದಿದೆ. ಮೀಸಲಾತಿ ಕೇಳುವದು ನಮ್ಮ ಹಕ್ಕು ಅದಕ್ಕಾಗಿ ಕೇಳುತಿದ್ದೇವೆ. ಕೊಟ್ಟರೆ ಸ್ವಾಗತ ಇಲ್ಲದಿದ್ದರೆ, ಮೀಸಲಾತಿ ಸಿಗುವ ವರೆಗೂ ಹೋರಾಟ ಇರುತ್ತದೆ ಎಂದರು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ರಾಜಕೀಯ ಬೇಕಾದರೆ ಬಿಡುತ್ತೇನೆ ಆದರೆ ಮೀಸಲಾತಿ ಹೋರಾಟ ಮಾತ್ರ ಬಿಡುವದಿಲ್ಲ ಸರ್ಕಾರ ಮನಸ್ಸು ಮಾಡಿದರೆ ಯಾವುದು ಸಾಧ್ಯವಿಲ್ಲ ಅನ್ನುವ ಮಾತಿಲ್ಲ. ಆದರೆ ಪಂಚಮಸಾಲಿ ಸಮಾಜದವರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ನಮ್ಮ ತಾಳ್ಮೆಯ ಕಟ್ಟೆ ಒಡೆದು ಮತ್ತೂಮ್ಮೆ ಹೋರಾಟಕ್ಕೆ ದುಮುಕುವ ಮುನ್ನ ಮೀಸಲಾತಿ ನೀಡಬೇಕು ಎಂದರು.

ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ಎಸ್‌.ಆರ್‌.ಅಂಗಡಿ, ತಾಲೂಕು ಅಧ್ಯಕ್ಷ ನಿಂಗಪ್ಪ ಚಳಗೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿಗೆ ಸದಸ್ಯರಾಗಿ ನೇಮಕಗೊಂಡ ಜೆ.ವಿ.ಅಂಗಡಿ ಮತ್ತು ಸರ್ವಜ` ಪ್ರಾ ಕಾರಕ್ಕೆ ಸದಸ್ಯರಾಗಿ ಆಯ್ಕೆಯಾದ ಎಂ.ಎಚ್‌. ಹರವಿಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಪಂಚ ಲಕ್ಷ ಹೆಜ್ಜೆಗಳ ರಾಜ್ಯಾಧ್ಯಕ್ಷ ಬಿ.ಎಸ್‌.ಪಾಟೀಲ, ಯುವ ಮುಖಂಡ ದಿಗ್ವಿಜಯ ಹತ್ತಿ, ಪಿ.ಡಿ.ಬಸನಗೌಡ್ರ, ಆರ್‌. ಎಸ್‌. ಹುಲ್ಮನಿ, ವೀರನಗೌಡ್ರ ಪ್ಯಾಟಿಗೌಡ್ರ, ಕಂಠಾಧರ ಅಂಗಡಿ, ಬಸಮ್ಮ ಅಬಲೂರ, ಕರಬಸಪ್ಪ ವಡೇಯನಪುರ, ಶೋಭಾ ಅಂಗಡಿ, ಪರಮೇಶಪ್ಪ ಹಲಗೇರಿ, ಈರಣ್ಣ ಕುಡುಪಲಿ, ಸತೀಶ ಕೋರಿಗೌಡ್ರ, ರಮೇಶ ಯಡಂಗಳಿ, ಕುಮಾರ ಪೂಜಾರ, ಮಾಲತೇಶ ಬೆಳಕೇರಿ, ಪ್ರವೀಣ ಅಬಲೂರ ಸೇರಿದಂತೆ ಹಿರೇಕೆರೂರ ಮತ್ತು ರಟ್ಟಿàಹಳ್ಳಿ ತಾಲೂಕಿನ ಪಂಚಮಸಾಲಿ ಸಮುದಾಯದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next