Advertisement

ದೇಶಭಕ್ತಿ ಬಿಂಬಿಸುವ ಜಯ ಹೇ..

12:05 PM Jan 15, 2022 | Team Udayavani |

ಕನ್ನಡದಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಮ್ಯೂಸಿಕ್‌ ಆಲ್ಬಂಗಳ ಸಂಖ್ಯೆ ಕಡಿಮೆ ಎಂಬ ಮಾತುಗಳ ನಡುವೆಯೇ ಯುವ ಗಾಯಕ ಆದರ್ಶ್‌ ಅಯ್ಯಂಗಾರ್‌, “ಜಯ ಹೇ…’ ಎಂಬ ದೇಶಭಕ್ತಿ ಮ್ಯೂಸಿಕ್‌ ಆಲ್ಬಂ ಅನ್ನು ನಾಡಿನ ಮನೆ-ಮನಗಳಿಗೆ ತಲುಪಿಸಲು ಮುಂದಾಗಿದ್ದಾರೆ.

Advertisement

ಆದರ್ಶ್‌ ಅಯ್ಯಂಗಾರ್‌ ಮಾಡಿರುವ ಈ “ಜಯ ಹೇ…’ ಮ್ಯೂಸಿಕ್‌ ಆಲ್ಬಂ ವಿಂಗ್‌ ಕಮಾಂಡರ್‌ ಸುದರ್ಶನ್‌, ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ರಾಮ್‌ ದಾಸ್‌ ಜಿ. ಎನ್‌, ನಟ ವಿರಾಟ್‌ ಸೇರಿದಂತೆ ಅನೇಕರ ಸಮ್ಮುಖದಲ್ಲಿ ಬಿಡುಗಡೆಯಾಯಿತು.

ಸದ್ಯ ಶಿವಮೊಗ್ಗ ಮೂಲದ ಆದರ್ಶ್‌ ಅಯ್ಯಂಗಾರ್‌ ಅಮೆರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಯೇ ತಮ್ಮದೊಂದು ಸ್ಟುಡಿಯೋ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಅನೇಕ ಸಂಗೀತ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ. ಈ ಹಿಂದೆ ತಮ್ಮ “ಶ್ರೀಕೃಷ್ಣ ಪೊಡಕ್ಷನ್‌’ ಮೂಲಕ “ಮೈ ಫ್ರೆಂಡ್‌’ ಎಂಬ ವಿಡಿಯೋ ಹಾಡನ್ನು ಭಾರತ ಮತ್ತು ಅಮೆರಿಕಾ ಎರಡು ಕಡೆ ಚಿತ್ರೀಕರಿಸಿದ್ದ ಆದರ್ಶ್‌, ಇದೀಗ ಭಾರತದ ಸೈನಿಕರಿಗೆ ಅರ್ಪಿಸುವುದಕ್ಕಾಗಿಯೇ “ಜಯ ಹೇ…’ ಮ್ಯೂಸಿಕ್‌ ಆಲ್ಬಂ ನಿರ್ಮಿಸಿದ್ದಾರೆ.

ಇದನ್ನೂ ಓದಿ:ಇನ್‌ಸ್ಟ್ರಾಗ್ರಾಂ ಮೂಲಕ ಮಹಿಳೆ ಸೇರಿ ಇಬ್ಬರ ಖಾತೆಯಿಂದ 7 ಲಕ್ಷ ರೂ ವಂಚನೆ

ಇನ್ನು “ಜಯ ಹೇ…’ ಹಾಡನ್ನು ತೀರ್ಥಹಳ್ಳಿಯ ಸುತ್ತಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಈ ಹಾಡನ್ನು ಚಿತ್ರಿಸಲಾಗಿದೆ. ರಾಕ್‌-ಪಾಪ್‌ ಜಾನರ್‌ನಲ್ಲಿ ಮೂಡಿ ಬಂದಿರುವ “ಜಯ ಹೇ…’ ಎಂಬ ಹಾಡಿಗೆ ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್‌ ಜೋಯಿಸ್‌ ಸಂಗೀತ ಸಂಯೋಜಿಸಿದ್ದಾರೆ.

Advertisement

ಇನ್ನು ಈ ಗೀತೆಗೆ ಆದರ್ಶ್‌ ಅಯ್ಯಂಗಾರ್‌ ಹಾಡಿಗೆ ಧ್ವನಿಯಾಗುವುದರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್‌ ಜೋಯಿಸ್‌, ಗುರುಪ್ರಸಾದ್‌ ಬಡಿಗೇರ್‌, ದರ್ಶನ್‌ ಕುಮಾರ್‌, ಶ್ರೀಹರ್ಷ ಕುಮಾರ್‌ ಮೊದಲಾದವರು ನಟಿಸಿದ್ದಾರೆ. ಗೀತೆಗೆ ರಕ್ಷಿತ್‌ ತೀರ್ಥಹಳ್ಳಿ ನಿರ್ದೇಶನ, ಗುರುಪ್ರಸಾದ್‌ ನರ್ನಾಡ್‌ ಛಾಯಾಗ್ರಹಣ, ಸುಧೀರ್‌ ಎಸ್‌. ಜೆ ಸಂಕಲನವಿದೆ. ಸದ್ಯ ಗಾಯಕ ಆದರ್ಶ್‌ ಅಯ್ಯಂಗಾರ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿರುವ ಈ ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next