Advertisement

ಹಿಮವನ್ನೂ ಲೆಕ್ಕಿಸದ ಯೋಧನಿಗೆ ಸಲಾಂ-ವೀಡಿಯೋ ವೈರಲ್‌

10:50 PM Jan 08, 2022 | Team Udayavani |

ಭಾರತದೊಳಗೆ ಬೆಚ್ಚಗೆ ಕುಳಿತಿರುವ ನಾವುಗಳು ಚೂರು ಚಳಿಯಾದರೂ ನಡು ಗಲಾರಂಭಿಸಿಬಿಡುತ್ತೇವೆ. ಆದರೆ ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಸ್ಥಿತಿ ಹೇಳತೀರದು.

Advertisement

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಬಳಿ ಉಷ್ಣಾಂಶ ಮೈನಸ್‌ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿದೆ.

ಭಾರೀ ಪ್ರಮಾಣದಲ್ಲಿ ಹಿಮವರ್ಷವೂ ಸುರಿಯುತ್ತಿದೆ. ಆದರೂ ಜಗ್ಗದ ಯೋಧರು ಸದಾ ಕಾಲ ಶಸ್ತ್ರಸಜ್ಜಿತರಾಗಿ ನಿಂತು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಯೋಧನೊಬ್ಬ ಮೊಣಕಾಲಿನ ವರೆಗೂ ಮುಚ್ಚಿರುವ ಹಿಮದ ನಡುವೆಯೇ ಶಸ್ತ್ರಾಸ್ತ್ರದೊಂದಿಗೆ ನಿಂತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅತಿಯಾದ ಹಿಮವರ್ಷದ ನಡುವೆಯೇ ಜಗ್ಗದೇ ಭಾರತಾಂಬೆಯನ್ನು ರಕ್ಷಿಸುತ್ತಿರುವ ಯೋಧನ ವೀಡಿಯೋಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next