ನವದೆಹಲಿ: ಹಾಸ್ಟೆಲ್ ಶುಲ್ಕ ಹೆಚ್ಚಳ ಪ್ರತಿಭಟಿಸಿ ಹಾಗೂ ಈ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ‘ಸಂಸತ್ ಚಲೋ’ ಪ್ರತಿಭಟನಾ ಜಾಥಾವನ್ನು ಇದೀಗ ಪೊಲೀಸರು ಅರ್ಧದಲ್ಲೇ ತಡಿಹಿಡಿದಿದ್ದಾರೆ.
ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿರುವುದರಿಂದ ದೆಹಲಿಯ ಕೆಲವು ಪ್ರಮುಖ ಭಾಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಮೋತಿ ಭಾಗ್, ಹ್ಯಾತ್ ಹೊಟೇಲ್, ಏಮ್ಸ್, ಸಫ್ದರ್ ಜಂಗ್ ರಸ್ತೆ ಮತ್ತು ಅರಬಿಂದೋ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಜೆ.ಎನ್.ಯು. ವಿದ್ಯಾರ್ಥಿಗಳ ಪ್ರತಿಭಟನೆಯ ಬಿಸಿ ದೆಹಲಿ ಮೆಟ್ರೋ ಸಂಚಾರಕ್ಕೂ ತಟ್ಟಿದ್ದು ಸದ್ಯದ ಮಾಹಿತಿಯಂತೆ, ಉದ್ಯೋಗ ಭವನ, ಲೋಕ ಕಲ್ಯಾಣ ಮಾರ್ಗ ಮತ್ತು ಪಟೇಲ್ ಚೌಕಗಳಲ್ಲಿ ಮೆಟ್ರೋ ರೈಲುಗಳ ನಿಲುಗಡೆಯನ್ನು ರದ್ದುಪಡಿಸಲಾಗಿದೆ. ಉದ್ಯೋಗ ಭವನ, ಪಟೇಲ್ ಚೌಕ ಮತ್ತು ಸೆಂಟ್ರಲ್ ಸೆಕ್ರೆಟೇರಿಯೆಟ್ ಭಾಗಗಳಿಗೆ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈತನ್ಮಧ್ಯೆ ಪ್ರತಿಭಟನಾ ನಿರತ ಜೆ.ಎನ್.ಯು. ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
Delhi Metro Rail Corporation: As advised by Delhi Police, trains are not halting at Udyog Bhawan and Patel Chowk. Exit/Entry Gates for Udyog Bhawan, Patel Chowk and Central Secretariat have been closed temporarily. #jnuprotest pic.twitter.com/z2iUJmV5n9
ಜೆ.ಎನ್.ಯು. ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯುವಂತಾಗಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ಕಂಡುಕೊಂಡು ಸಲಹೆ ನೀಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಇಂದು ಮೂವರು ಸದಸ್ಯರ ಸಮಿತಿಯೊಂದನ್ನು ನೇಮಕ ಮಾಡಿದೆ. ಈ ಸಮಿತಿಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ತನ್ನ ಸಲಹೆ ಸೂಚನೆಗಳನ್ನು ಶೀಘ್ರವೇ ನೀಡಲಿದೆ ಎಂದು ತಿಳಿದುಬಂದಿದೆ.
Related Articles
ಹಾಸ್ಟೆಲ್ ಶುಲ್ಕ ಹೆಚ್ಚಳ, ಡ್ರೆಸ್ ಕೋಡ್ ಮತ್ತು ಕರ್ಫ್ಯೂ ಸಮಯ ಸೇರಿದಂತೆ ಇನ್ನಿತರ ಪ್ರಸ್ತಾವನೆಯನ್ನು ಒಳಗೊಂಡಿರುವ ಹಾಸ್ಟೆಲ್ ನೀತಿ ನಿಯಮ ಕೈಪಿಡಿಯ ವಿರುದ್ಧ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಳೆದ ಮೂರು ವಾರಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.