Advertisement

ವಸತಿ ನಿಲಯ ಬಾಗಿಲು ಇನ್ನೂ ತೆರೆದಿಲ್ಲ

11:04 AM Oct 26, 2019 | |

„ವಿಜಯಕುಮಾರ ಕಲ್ಲಾ
ಜೇವರ್ಗಿ:
ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ಭವ್ಯವಾದ ವಸತಿ ನಿಲಯ ನಿರ್ಮಿಸಲಾಗಿದ್ದರೂ ಇಲ್ಲಿನ ಮಕ್ಕಳಿಗೆ ಕುಡಿಯುವ ನೀರು, ಊಟ, ಉಪಹಾರ ಸೇರಿದಂತೆ ಯಾವುದೇ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ.

Advertisement

ದಸರಾ ರಜೆ ಮುಗಿದು ಐದಾರು ದಿನಗಳು ಕಳೆದರೂ ತಾಲೂಕಿನ ಆಂದೋಲಾ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದ ಬಾಗಿಲು ಇನ್ನೂ ತೆರೆದಿಲ್ಲ.

ಇದರಿಂದ ಬಡ ವಿದ್ಯಾರ್ಥಿಗಳು ಊಟ, ವಸತಿಗಾಗಿ ಪರದಾಡುವಂತೆ ಆಗಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು  ಸ್ತೀರ್ಣಾಧಿಕಾರಿ ಹಾಗೂ ಮೇಲ್ವಿಚಾರಕರನ್ನು ಸಂಪರ್ಕಿಸಿದರೆ ಉಡಾಫೆಯಿಂದ ಮಾತನಾಡುತ್ತಾರೆ.

ಈ ಇಲಾಖೆಯ ತಾಲೂಕು ಅಧಿಕಾರಿಗಳು ಸ್ಥಳೀಯರಾಗಿರುವುದರಿಂದ ರಾಜಕೀಯ ಪ್ರಭಾವ ಬೆಳೆಸಿ ಕಳೆದ ಎರಡು ದಶಕಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಎದುರಾಗಿದೆ.

ತಾಲೂಕಿನಲ್ಲಿ ಆಡಳಿತಯಂತ್ರ ಸಂಪೂರ್ಣ ಕುಸಿದಿದೆ ಎಂದು ವಿದ್ಯಾರ್ಥಿಗಳು, ಪಾಲಕರು ಆರೋಪಿಸುತ್ತಿದ್ದಾರೆ. ಆಂದೋಲಾ ಗ್ರಾಮದ ಈ ವಸತಿ ನಿಲಯಕ್ಕೆ ವಾರಕ್ಕೊಮ್ಮೆ ಮೇಲ್ವಿಚಾರಕರು ಬಂದು ಹೋಗುವುದರಿಂದ ಮಕ್ಕಳಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಆಂದೋಲಾ ಸೇರಿದಂತೆ ಜೈನಾಪುರ, ಕೆಲ್ಲೂರ, ಬಿರಾಳ, ಮಲ್ಲಾ.ಕೆ, ಮಲ್ಲಾ ಬಿ. ಗ್ರಾಮದ ನೂರು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಕನಿಷ್ಠ ಸೌಲಭ್ಯಗಳು ಮಕ್ಕಳಿಗೆ ತಲುಪುತ್ತಿಲ್ಲ.

Advertisement

ಸಮಯಕ್ಕೆ ಸಿಗದ ಊಟ, ಸಂಜೆ ನೀಡುವ ಅಲ್ಪ ಉಪಹಾರವೂ ಕಟ್‌, ಮೊಟ್ಟೆ ಬಾಳೆಹಣ್ಣು ಸಿಗದೇ ಇಲ್ಲಿನ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಸರಕಾರದಿಂದ ಸಿಗಬೇಕಾದ ಅಲ್ಪ ಉಪಹಾರವನ್ನು ವಸತಿ ನಿಲಯ ಮೇಲ್ವಿಚಾರಕರು ನೀಡುತ್ತಿಲ್ಲ. ಅಲ್ಲದೇ ಪ್ರತಿ ರವಿವಾರ ಮೊಟ್ಟೆ , ಬಾಳೆಹಣ್ಣು ವಿತರಣೆ ಮಾಡಬೇಕು. ಆದರೆ ಈ ವಸತಿ ನಿಲಯದ ವಿದ್ಯಾರ್ಥಿಗಳು ಅಲ್ಪ ಉಪಹಾರ, ಸಿಹಿ ಊಟದಿಂದ ವಂಚಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next