Advertisement

ಉದ್ದೀಪನ ಸೇವನೆ: ಜಾವೆಲಿನ್‌ ಸ್ಪರ್ಧಿ ದಾವೀಂದರ್‌ ಅಮಾನತು 

06:05 AM Mar 01, 2018 | |

ನವದೆಹಲಿ: ಭಾರತದ ಭರವಸೆಯ ಜಾವೆಲಿನ್‌ ತಾರೆ ದಾವಿಂದರ್‌ ಸಿಂಗ್‌ ಕಾಂಗ್‌ ಉದ್ದೀಪನ ಸೇವೆನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

Advertisement

ಕೆಲವು ದಿನಗಳ ಹಿಂದೆಯಷ್ಟೇ ದಾವಿಂದರ್‌ ಸಿಂಗ್‌ ಕಾಂಗ್‌ ಉದ್ದೀಪನ ಪರೀಕ್ಷೆಗೆ ಒಳಪಟ್ಟಿದ್ದರು. ಅದರ ವರದಿ ಈಗಷ್ಟೇ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಕೈ ಸೇರಿದೆ. ಪರೀಕ್ಷೆ ವರದಿಯಲ್ಲಿ ದಾವಿಂದರ್‌ ಸ್ಟೆರಾಯಿಡ್‌ ಸೇವಿಸಿರುವುದು ದೃಢಪಟ್ಟಿದೆ. ಹೀಗೆ ಸಿಕ್ಕಿಬಿದ್ದ ಅವರನ್ನು ಪಟಿಯಾಲದಲ್ಲಿ ನಡೆಯುತ್ತಿರುವ ಇಂಡಿಯನ್‌ ಗ್ರ್ಯಾನ್‌ ಫ್ರಿ ನಿಂದ ಅಥ್ಲೆಟಿಕ್ಸ್‌ ಕೂಟದಿಂದ ತಕ್ಷಣಕ್ಕೆ ಜಾರಿಯಾಗುವಂತೆ ಹೊರಹಾಕಲಾಗಿದೆ.

ಆಜೀವ ನಿಷೇಧ ಭೀತಿ?: ದಾವಿಂದರ್‌ ಸಿಂಗ್‌ಗೆ ಸದ್ಯ 29 ವರ್ಷ. ಸಿಂಗ್‌ ಆರೋಪ ದೃಢಪಟ್ಟಿದ್ದರೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟ (ಐಎಎಎಫ್) ಇದುವರೆಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ 4 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲ ಕೆಲವರು ಹೇಳುವ ಪ್ರಕಾರ ಆಜೀವ ನಿಷೇಧ ಎದುರಾದರೂ ಅಚ್ಚರಿಯೇನಿಲ್ಲ ಎನ್ನಲಾಗಿದೆ. ಒಂದು ವೇಳೆ ಆಜೀವ ನಿಷೇಧವಾದರೆ ದಾವಿಂದರ್‌ ಸಿಂಗ್‌ ಬಹುತೇಕ ಕ್ರೀಡಾ ಜೀವನವೇ ಬಹುತೇಕ ಕೊನೆಗೊಳ್ಳುವ ಸಾಧ್ಯತೆ ಇದೆ.

ಕನಸು ಭಗ್ನ: ಕಳೆದ ವರ್ಷ ಇಂಡಿಯನ್‌ ಗ್ರ್ಯಾನ್‌ ಫ್ರಿ ಅಥ್ಲೆಟಿಕ್ಸ್‌ ಕೂಟದ ವೇಳೆ ಇಂತಹುದೇ ಒಂದು ಘಟನೆ ನಡೆದಿತ್ತು. ಉದ್ದೀಪನ ಸೇವಿಸಿ ಅಥ್ಲೀಟ್‌ವೊಬ್ಬರು ಸಿಕ್ಕಿಬಿದ್ದಿದ್ದರು. ಇದೀಗ ಮತ್ತೂಂದು ಅಂತಹುದೇ ಘಟನೆ ನಡೆದಿರುವುದು ವಿಷಾದಕರ ಸಂಗತಿ. ವಿವಾದದಿಂದಾಗಿ ಕಾಂಗ್‌ ಮುಂಬರುವ ಕಾಮನ್ವೆಲ್ತ್‌ ,ಏಷ್ಯಾಡ್‌ ಕೂಟವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಅಷ್ಟೇ ಅಲ್ಲ ಅವರ ಮುಂದಿನ ಕ್ರೀಡಾ ಜೀವನ ಕೂಡ ತೂಗುಯ್ನಾಲೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next