Advertisement

ಜಂಬೂ ನೇರಳೆ ಹಣ್ಣಿಗೆ ಬೇಡಿಕೆ ಹೆಚ್ಚಳ

03:11 PM Jun 08, 2022 | Team Udayavani |

ಮಾಗಡಿ: ಇತ್ತೀಚಿನ ದಿನಗಳಲ್ಲಿ ಜಂಬೂ ನೇರಳೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಇದು ವರ್ಷಕ್ಕೊಮ್ಮೆ ಸಿಗುವ ಅಪರೂಪ ಹಣ್ಣು. ಜಂಬೂ ನೇರಳೆ ತಿನ್ನುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದ್ದು, ಔಷಧಿ ಗುಣ ಹೆಚ್ಚಿದೆ ಎಂಬ ಹಿನ್ನೆಲೆಯಲ್ಲಿ ಭಾರಿ ಬೇಡಿಕೆ ಕಂಡು ಬಂದಿದೆ.

Advertisement

ಒಂದು ಕೆ.ಜಿ ಜಂಬೂ ನೇರಳೆ ಹಣ್ಣು ಸುಮಾರು 150ರಿಂದ 200 ರೂ.ಗೆ ಮಾರಾಟವಾಗುತ್ತಿದೆ. ನೇರಳೆ ಹಣ್ಣಿ ಸುಗ್ಗಿ ಆರಂಭ: ಈಗ ಮಾರುಕಟ್ಟೆಯಲ್ಲಿ ಜಂಬೂ ನೇರಳೆಗೆ ಭಾರಿ ಬೇಡಿಕೆ ಕಂಡು ಬಂದಿದ್ದು, ಮಾವಿನ ಫ‌ಸಲಿನ ಜೊತೆ ನೇರಳೆ ಹಣ್ಣಿಗೂ ಬೇಡಿಕೆ ಹೆಚ್ಚಾಗಿದ್ದು, ನೇರಳೆ ಹಣ್ಣಿ ಸುಗ್ಗಿ ಆರಂಭವಾಗಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ.

ಸಾಮಾಜಿಕ ಅರಣ್ಯ ಇಲಾಖೆಯವರು ತಾಲೂಕಿನ ಪ್ರಮುಖ ರಸ್ತೆ ಬದಿ ಮತ್ತು ಸಾವನದುರ್ಗ ಅರಣ್ಯ ಪ್ರದೇಶದಲ್ಲೂ ಜಂಬೂ ನೇರಳೆ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ, ಕೆಲವು ಕೃಷಿಕರು ತಮ್ಮ ಜಮೀನಿನಲ್ಲಿ ಉತ್ತಮ ಕಸಿಯ ನೇರಳೆ ಗಿಡಗಳನ್ನು ಹಾಕಿದ್ದು, 3 ವರ್ಷಕ್ಕೆ ಫ‌ಸಲು ಬಿಡಲು ಆರಂಭವಾಗಿರುವುದರಿಂದ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಮೊದಲು ಉಚಿತವಾಗಿ ಹಣ್ಣುಗಳು ಸಿಗುತ್ತಿತ್ತು. ಈಗ ಔಷಧಿ ಗುಣ ಇರುವುದು ಪತ್ತೆಯಾಗಿರುವುದರಿಂದ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.

ಮಾವು, ಹುಣಸೆಗೆ ಪರ್ಯಾಯ ಬೆಳೆ: ನೇರಳೆ ಹಣ್ಣು ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಫ‌ಸಲು ಖರೀದಿಸಿ, ಹಗಲು ರಾತ್ರಿ ಕಾವಲಿದ್ದು, ಉದ್ದನೆಯ ಬಿದಿರಿನ ಸಹಾಯದಿಂದ ಮರ ಹತ್ತಿ ಹಣ್ಣು ಬಿಡಿಸಿ ಮಾರುಕಟ್ಟೆಗೆ ಕೊಂಡೋಯ್ದು ಮಾರಾಟ ಮಾಡುತ್ತಾರೆ. ದೊಡ್ಡ ಗಾತ್ರದ ಒಂದು ಮರದ ಫ‌ಸಲು 60ರಿಂದ 80 ಸಾವಿರ ರೂ.ಗೆ ಮಾರಾಟವಾಗಿದ್ದು, ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬೂ ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ.

ಅಪರೂಪದ ನೇರಳೆ ಹಣ್ಣನ್ನು ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ. ಜ್ಯೂಸ್‌ ತಯಾರಿಕೆಯಲ್ಲೂ ನೇರಳೆ ಹಣ್ಣನ್ನು ಬಳಸಲಾಗುತ್ತದೆ. ಔಷಧಿ ಗುಣ ಹೆಚ್ಚಾಗಿರುವುದರಿಂದ ಮಧುಮೇಹ ಇರುವವರು ಈ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಮಾಗಡಿ ಮಾರುಕಟ್ಟೆಯಲ್ಲಿ ನೇರಳೆ ಹಣ್ಣು ಭರ್ಜರಿಯಾಗಿ ವ್ಯಾಪಾರವಾಗುತ್ತಿದ್ದು, ದಿನದಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ

Advertisement

. ಜಂಬೂ ನೇರಳೆಗೆ ಸಾಕಷ್ಟು ಬೇಡಿಕೆಯಿದ್ದು, ಕಳೆದ 3 ವರ್ಷದಿಂದ ನೇರಳೆಯ ವಿವಿಧ ತಳಿಯ ಕಸಿ ಗಿಡಗಳನ್ನು ಸಾಕಷ್ಟು ರೈತರಿಗೆ ನೀಡಿ, ತೋಟಗಳಲ್ಲಿ ಬೆಳೆಸಲಾಗುತ್ತಿದೆ.  ಮುಂದಿನ ವರ್ಷ ನಮ್ಮ ತಾಲೂಕಿನಲ್ಲಿ ಸಾಕಷ್ಟು ಫ‌ಸಲುಗಳನ್ನು ಕಾಣಬಹುದು. ರೈತರಿಗೆ ಜಂಬೂ ನೇರಳೆ ವರದಾನವಾಗಿದ್ದು, ಸಾಕಷ್ಟು ಹಣ ಗಳಿಸಲು ಉತ್ತಮ ಬೆಳೆಯಾಗಿದೆ. ಮಾರುಕಟ್ಟೆಯಲ್ಲೂ ಜಂಬೂ ನೇರಳೆ ಹಣ್ಣಿಗೆ ಬೇಡಿಕೆಯಿದೆ. –ಕನ್ನಡ ಕುಮಾರ್‌, ರಾಜ್ಯ ಶ್ರೀಗಂಧ ಮತ್ತು ರಕ್ತ ಚಂದನ ಬೆಳೆಗಾರರ ವ್ಯವಸ್ಥಾಪಕ ನಿರ್ದೇಶಕ

ಮಳೆಗಾಲದಲ್ಲಿ ಗಿಡ ನೆಟ್ಟು ಜಾನುವಾರ ಬಾಯಿ ಹಾಕದಂತೆ ನೋಡಿಕೊಂಡರೆ 2-3 ವರ್ಷದಲ್ಲಿ ಬೆಳೆಯುತ್ತದೆ. ವರ್ಷದಿಂದ ವರ್ಷಕ್ಕೆ ಫ‌ಸಲು ಕೂಡ ಹೆಚ್ಚಾಗುತ್ತದೆ. ಹುಳು ಬಾಧೆಗೆ ಒಂದೆರಡು ಸಲ ಔಷಧಿ ಸಿಂಪಡಿಸಿದರೆ ಸಾಕು ಉತ್ತಮ ಬೆಳೆ ಬರುತ್ತದೆ. –ನಾಗರಾಜು, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next