Advertisement

ಬಾಯಲ್ಲಿ ನೀರೂರಿಸುವ ನೇರಳೆ ಹಣ್ಣು

03:44 PM Jun 15, 2022 | Team Udayavani |

ಉಡುಪಿ: ಪ್ರತೀ ವರ್ಷದಂತೆ ಈ ಬಾರಿಯೂ ನಗರದಲ್ಲಿ ನೇರಳೆ ಹಣ್ಣು ಲಗ್ಗೆ ಇಟ್ಟಿದೆ. ಕೆಲವು ದಿನಗಳಿಂದ ನಗರದ ಹೃದಯ ಭಾಗದಲ್ಲಿ ಎಸ್‌ವಿಸಿ ಬ್ಯಾಂಕ್‌ ಮತ್ತು ಯೂನಿಯನ್‌ ಬ್ಯಾಂಕ್‌ ಸಮೀಪ ತಳ್ಳು ಗಾಡಿಯಲ್ಲಿ ವ್ಯಾಪಾರಿಗಳು ನೇರಳೆ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ದುಂಡನೆ ರುಚಿಕರವಾಗಿರುವ ಹಣ್ಣು ಬಾಯಲ್ಲಿ ನಿರೂರಿಸುವಂತಿದೆ.

Advertisement

ಮೇ, ಜೂನ್‌ನಲ್ಲಿ ಹೆಚ್ಚಾಗಿ ಮಾರು ಕಟ್ಟೆಯಲ್ಲಿ ದೊರೆಯುವ ಈ ಹಣ್ಣಿಗೆ ಗ್ರಾಹಕರು ಮುಗಿಬೀಳುತ್ತಾರೆ. ಆದರೆ ಈ ಬಾರಿ ವ್ಯಾಪಾರ ಕಡಿಮೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ನೇರಳೆ ಹಣ್ಣು ಒಂದೆಡೆ ಕೆ.ಜಿ.ಗೆ 200ರಿಂದ 250 ರೂ. ವರೆಗೆ ಮಾರಾಟವಾಗುತ್ತಿದೆ. ನಗರದ ತರಕಾರಿ, ಹಣ್ಣು ಮಾರಾಟದ ಕೆಲವು ಮಳಿಗೆಗಳಲ್ಲೂ ನೇರಳೆ ಹಣ್ಣು ಮಾರಾಟವಾಗುತ್ತಿದೆ.

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಶರೀರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ನೇರಳೆ ಹಣ್ಣಿನ ಸೇವನೆ ಉಪಯುಕ್ತ. ರಕ್ತದ ಶುದ್ಧೀಕರಣಕ್ಕೂ ಇದು ಸಹಕಾರಿ. ಔಷಧ ಗುಣ ಎಂದ ಮಾತ್ರಕ್ಕೆ ಒಮ್ಮೆಲೇ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಆಯುರ್ವೇದ ವೈದ್ಯರು.

ಬೆಳಗಾವಿಯಲ್ಲಿ ಬೆಳೆದ ನೇರಳೆ ಹಣ್ಣು ಇದಾಗಿದೆ. ನಾವು ಬೆಳೆಗಾರರಿಂದ ಖರೀದಿಸಿ ಕಳೆದ ಹದಿನೈದು ದಿನಗಳಿಂದ ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಉಡುಪಿ ಜನರು ನೇರಳೆ ಹಣ್ಣು ಪ್ರಿಯರಾಗಿದ್ದಾರೆ. ಕಳೆದ ವರ್ಷ ವ್ಯಾಪಾರ ಉತ್ತಮವಾಗಿತ್ತು, ನೇರಳೆ ಹಣ್ಣು ಇಳುವರಿ ಕಡಿಮೆ ಮತ್ತು ಬೇಡಿಕೆಯೂ ಹೆಚ್ಚಿದ್ದರಿಂದ ಬೆಲೆ ಹೆಚ್ಚಳವಾಗಿತ್ತು. ಈ ವರ್ಷ ಹೇಳುವಷ್ಟು ದರ ಹೆಚ್ಚಳಗೊಂಡಿಲ್ಲ. -ಬಸವರಾಜ್‌, ಹಣ್ಣು ವ್ಯಾಪಾರಿ, ಉಡುಪಿ

ನೇರಳೆಯಲ್ಲಿ ಕಷಾಯದ ಒಗರು ರಸ ಇರುತ್ತದೆ, ಮಧುಮೇಹಕ್ಕೆ ಒಳ್ಳೆಯದು ಎಂದು ಪ್ರಸಿದ್ದಿ ಪಡೆದಿದೆ. ಮಧುಮೇಹಕ್ಕೆ ಹೊರತಾಗಿಯೂ ನೇರಳೆ ಹಲವು ಔಷಧ ಗುಣಗಳನ್ನು ಹೊಂದಿದೆ. ಶುದ್ಧ ಭಾರತೀಯ ಫ‌ಲವಾಗಿರುವ ನೇರಳೆಯನ್ನು ಭಾರತದ ಕರ್ಜೂರ ಎಂದು ಕರೆಯುತ್ತಾರೆ. ಕರ್ಜೂರಕ್ಕೆ ಸಮನಾಗಿರುವ ಎಲ್ಲ ಅಂಶಗಳನ್ನು ನೇರಳೆ ಹೊಂದಿರುವುದೇ ಇದಕ್ಕೆ ಕಾರ ಣ. ಇದರ ಬೀಜವನ್ನು ಒಣಗಿಸಿ ಪುಡಿ ಮಾಡಿ ಬಿಸಿ ನೀರಿನಲ್ಲಿ ಸೇವಿಸಿದರೆ ಜಂತು ಹುಳ ನಿಯಂತ್ರಣಕ್ಕೆ ಒಳ್ಳೆಯದು. ಯಾವುದೇ ಫ‌ಲವಾದರೂ ಮಿತ ಸೇವನೆ ಒಳ್ಳೆಯದು. – ಡಾ| ಕೆ. ಜಯರಾಮ ಭಟ್‌, ಆಯುರ್ವೇದ ವೈದ್ಯರು, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next