*ಗೂರೂಜಿ, ನನ್ನ ಮಗಳಿಗೆ ಯಾರೋ ಕೃತ್ರಿಮ ನಡೆಸಿ ವಾಮಾಚಾರ ಗೈದಿದ್ದಾರೆ. ಗೆಲುವಾಗಿಯೇ ಇದ್ದವಳು ಈಗ 6 ತಿಂಗಳಿನಿಂದ ಮಂಕಾಗಿದ್ದಾಳೆ. ಏಕೆ ಬದುಕು, ಏಕೆ ಬದುಕಿರಬೇಕು ಎಂದು ಪ್ರಶ್ನಿಸುತ್ತಾಳೆ. ಏನು ತೊಂದರೆಯಾಗಿರಬಹುದು? ಏಕೆ ಮಂಕಾಗಿದ್ದಾಳೆ? ಮದುವೆ ಮಾಡಲು ಸಾಧ್ಯವೇ?
Advertisement
ನಿಮ್ಮ ಮಗಳಿಗೆ ಯಾವುದೇ ರೀತಿಯಲ್ಲೂ ವಾಮಾಚಾರಾದ ವಿಚಾರಗಳು ಬಾಧೆಯನ್ನು ಉಂಟು ಮಾಡಲು ಸಾಧ್ಯವಲೇ ಇಲ್ಲ. ಅಭಿಚಾರ ದೋಷಗಳು ನಡೆಯಲಾರವು. ಮುಖ್ಯವಾಗಿ ಕಳತ್ರ ಸ್ಥಾನ ದೋಷವಿದೆ. ಬಾಳ ಸಂಗಾತಿಯ ವಿಚಾರದಲ್ಲಿ ಮಾನಸಿಕ ವಿಪ್ಲವಗಳಿಗೆ ಅವಕಾಶವಿದೆ. ಮೊದಲು ಸೂಕ್ಷ್ಮವಾಗಿ ಮಗಳ ಕೆಲ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಪ್ರೇಮ ಭಂಗವಾಗಿರುವ ಸಾಧ್ಯತೆ ಹೇರಳವಾಗಿದೆ. ಹೀಗಾಗಿ ಆತ್ಮೀಯ ಹಾಗೂ ಧೈರ್ಯ ತುಂಬುವ ಮಾತುಗಳ ಮೂಲಕ ಅಸಲೀ ವಿಷಯ ತಿಳಿದುಕೊಳ್ಳಿ. ಕನ್ನಿಕಾಪರಮೇಶ್ವರಿ ಅಷ್ಟೋತ್ತರ ಓದಿಸಿ.
*ನನೆಗ ಈಗ ನಾಲ್ಕು ತಿಂಗಳಿಗಳಿಂದ ಹೊಟ್ಟೆ ನೋವಿನ ದೊಡ್ಡ ಸಮಸ್ಯೆ ತಲೆದೋರಿದೆ. ಊಟ ಸೇರುತ್ತಿಲ್ಲ. ವೈದ್ಯಕೀಯ ಪರೀಕ್ಷೆಗಳೆಲ್ಲ ನಡೆದವು. ಸ್ಕ್ಯಾನಿಂಗ್ ಕೂಡ ಆಯಿತು. ಏನೇನೋ ಮಾತ್ರೆ, ದ್ರಾವಣಗಳನ್ನು ಸೇವಿಸಿದ್ದಾಯೆ¤à ವಿನಾ ನೋವಿನಿಂದ ಬಿಡುಗಡೆಯಾಗಿಲ್ಲ. ದಯಮಾಡಿ ತೊಂದರೆ ಏನೆಂಬದನ್ನು ತಿಳಿಸುವಿರಾ? ನಿಮ್ಮ ಜಾತಕ ಪರಿಶೀಲಿಸಲಾಗಿ ಅದರಲ್ಲಿ ಕಂಡ ದೋಷಗಳು ಚಂದ್ರ ಹಾಗೂ ಶನಿಯತ್ತ ಬೆರಳು ತೋರಿಸುತ್ತಿವೆ. ಪ್ರತಿ ದಿನದ ಮಲ ವಿಸರ್ಜನೆಯೇ ತೊಂದರೆಗಳು ಹೇಗಿವೆ? ಒಮ್ಮೆ ಲಿವರ್ ಹಾಗೂ ಮಲಧ್ವಾರದ ಸುತ್ತಮುತ್ತಲ ವಿಚಾರಗಳನ್ನು ಕೇಂದ್ರೀಕರಿಸಿ ಕೆಲ ಸ್ಕ್ಯಾನಿಂಗ್‌ಗಳಿಗೆ ವೈದ್ಯರ ಬಳಿ ಪ್ರಸ್ತಾಪ ಎತ್ತಿ. ಪ್ರತಿ ದಿನ ಕಾಲಭೈರವ ಅಷ್ಟೋತ್ತರ ಹಾಗೂ ಪ್ರತಿ ಮಂಗಳವಾರ ಗಕಾರ ಪೂರ್ವಕ ಗಣೇಶ ಸಹಸ್ರನಾಮಾವಳಿ ಪಠಿಸಿ. ಒಳ್ಳೆದಾಗಲಿದೆ.
Related Articles
*ನನ್ನ ಮಗಳ ಮದುವೆಗಾಗಿ ಅನೇಕ ಪ್ರಯತ್ನಗಳನ್ನು ನಡೆಸಿದಾಗ್ಯೂ ಫಲ ಸಿಗುತ್ತಿಲ್ಲ. ಮದುವೆ ಯೋಗವಿದೆಯೇ? ಪರಿಹಾರ ತಿಳಿಸುತ್ತೀರಾ?
ಮೇ.23ನೇ ತಾರೀಖೀನ ನಂತರದಲ್ಲಿ ಅಕ್ಟೋಬರ್ ಅಂತ್ಯದೊಳಗೆ ಈ ವರ್ಷ ಮಗಳ ಮದುವೆ ನೆರವೇರುತ್ತದೆ. ಸರ್ವಾರ್ಥ ಸಾಧಿಕೆಯಾದ ಸನ್ಮಂಗಳೆ ಶ್ರೀ ದುರ್ಗಾಂಬಿಕಾ ಮೂಲ ಅಷ್ಟೋತ್ತರ ಸಿದ್ಧಿ ಮಂತ್ರ ಪಠಣ ಹಾಗೂ ಪ್ರಸನ್ನ ಗಣಪತಿ ಆರಾಧನೆ ಮಾಡಿ.
Advertisement
ಜ್ಯೋತಿಷ ಕುರಿತಾದ ಪ್ರಶ್ನೆಗಳನ್ನು ನಮ್ಮ ವಿಳಾಸಕ್ಕೆ ಅಥವಾ ಕೆಳಗಿನ ಇ-ಮೇಲ್‌ಗೆ ಕಳುಹಿಸಿ:Email: bahumukhi@manipalmedia.com