Advertisement

ರೈತ ಸಂಘದಿಂದ ಪೈವಳಿಕೆ ಅಂಚೆ ಕಚೇರಿಗೆ ಜಾಥಾ

03:50 AM Jul 07, 2017 | Harsha Rao |

ಪೈವಳಿಕೆ: ಜಾನುವಾರು ಮಾರಾಟ ನಿಷೇಧ ಹಿಂದೆಗೆಯಬೇಕು, ಕೃಷಿ ಉತ್ಪನ್ನಗಳಿಗೆ ನ್ಯಾಯ ಬೆಲೆ ನಿಗದಿಪಡಿಸಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು ಕೃಷಿ ಸಾಲ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುರುವಾರ ಬೆಳಗ್ಗೆ ಮಂಜೇಶ್ವರ ಏರಿಯಾ ರೈತ ಸಂಘದ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ಜಾಥಾ ನಡೆಯಿತು. 

Advertisement

ಜಾಥಾವನ್ನು ಜಿಲ್ಲಾ ರೈತ ಸಂಘದ ಎಕ್ಸಿಕ್ಯೂಟೀವ್‌ ವಿ.ನಾರಾಯಣನ್‌ ಉದ್ಘಾಟಿಸಿದರು. ಪುರುಷೋತ್ತಮ ಬಳ್ಳೂರು ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಹಿರಿಯ ಮುಖಂಡ ಎ.ಅಬೂಬಕ್ಕರ್‌, ಅಬ್ದುಲ್‌ ರಜಾಕ್‌ ಚಿಪ್ಪಾರು, ಗೀತಾ ಸಾಮಾನಿ, ರಮಣ ಮಾಸ್ತರ್‌, ನಾರಾಯಣ ಶೆಟ್ಟಿ, ಪ್ರಶಾಂತ್‌ ಕನಿಲ ನೇತೃತ್ವ ನೀಡಿದರು. 

ಮಂಜೇಶ್ವರ ರೈತ ಸಂಘದ ಏರಿಯಾ ಸಮಿತಿ ಕಾರ್ಯದರ್ಶಿ ಕೆ.ಆರ್‌.ಜಯಾನಂದ ಸ್ವಾಗತಿಸಿದರು. ಹುಸೈನ್‌ ಮಾಸ್ತರ್‌ ವಂದಿಸಿದರು. ಪೈವಳಿಕೆ ನಗರದಿಂದ ಅಂಚೆ ಕಚೇರಿ ತನಕ ಜಾಥಾ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next