ಉಡುಪಿ: ಬಯಲಾಟ ಯು.ಕೆ. ಹೆಸರಿನಲ್ಲಿ ಇಂಗ್ಲೆಂಡ್‌ನ ಮಿಲ್ಟನ್ ಕೀನ್ಸ್ ನಗರದಲ್ಲಿ ನ.27ರಂದು ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬ್ಯಾಲೆ “ಜಟಾಯು ಮೋಕ್ಷ’ ಪ್ರದರ್ಶನಗೊಂಡಿತು.
ಯಕ್ಷಗಾನ ಬ್ಯಾಲೆ ಜಟಾಯು ಮೋಕ್ಷದ ಪರಿಕಲ್ಪನೆ, ಭಾವರೂಪ, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವು ಉಡುಪಿ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ನಿರ್ದೇಶಕರೂ ಆದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರದ್ದಾಗಿದೆ.
ಅವರ ಮಗ ಶಿಶಿರ ಸುವರ್ಣ ಅವರು ಬಯಲಾಟ ಯು.ಕೆ.ಯ ಕಲಾವಿದರಿಗೆ ತರಬೇತಿ ನೀಡಿದರು. ಸ್ಕಾಟ್ಲಾಂಡಿನ ಆಬಾದೀìನಲ್ಲಿ ನೆಲೆಸಿರುವ ಮಂಗಳೂರು ಮೂಲದ ನವೀನ ಹಾಗೂ ನವ್ಯ ಕಿರೋಡಿಯನ್ ಅವರ ಪುತ್ರರಾದ ತನಿಷ್ ಮತ್ತು ರಿಯಾಂಶ ಬಾಲ ಗೋಪಾಲ ನೃತ್ಯ ಮಾಡಿದರು.
ಡಾ| ಗುರುಪ್ರಸಾದ್ ಪಟ್ವಾಲ್ ರಾವಣನಾಗಿ, ಗಿರೀಶ್ ಪ್ರಸಾದ್ ಜಟಾಯುವಾಗಿ, ಆಯುರ್ವೇದ ವೈದ್ಯೆ ಡಾ| ದೀಪಾ ಪಟ್ವಾಲ್ ಮಾಯಾ ಜಿಂಕೆಯಾಗಿ, ಉದ್ಯಮಿ ನಿರುಪಮಾ ಶ್ರೀನಾಥ್ ಸೀತೆಯಾಗಿ, ಶಿಶಿರ ಸುವರ್ಣ ಕಪಟ ಸನ್ಯಾಸಿಯಾಗಿ ಅಭಿನಯಿಸಿದರು. ಇದೇ ವೇಳೆ ಶಿಶಿರ ಸುವರ್ಣರನ್ನು ಸಮ್ಮಾನಿಸಲಾಯಿತು.