Advertisement

ಬಿಜೆಪಿ ತೊರೆದ ಜಸ್ವಂತ್‌ ಪುತ್ರ

06:00 AM Sep 23, 2018 | Team Udayavani |

ನವದೆಹಲಿ: ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವವೂ ಆರಂಭವಾಗಿದೆ. ಬಾರ್ಮರ್‌ ಜಿಲ್ಲೆಯಲ್ಲಿ ರ್ಯಾಲಿ ಆಯೋಜಿಸಿದ್ದ ಬಿಜೆಪಿ ಮುಖಂಡ ಜಸ್ವಂತ್‌ ಸಿಂಗ್‌ರ ಪುತ್ರ ಮಾನವೇಂದ್ರ ಸಿಂಗ್‌ ಬಿಜೆಪಿ ತೊರೆದಿದ್ದಾರೆ. ಕಮಲವನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ. 2014ರ ಚುನಾವಣೆಯಲ್ಲಿ ಬಾರ್ಮರ್‌ ಜೈಸಲ್ಮೇರ್‌ ಲೋಕಸಭೆ ಕ್ಷೇತ್ರಕ್ಕೆ ಜಸ್ವಂತ್‌ ಸಿಂಗ್‌ಗೆ ಟಿಕೆಟ್‌ ನಿರಾಕರಿಸಿದ್ದರಿಂದ, ಸ್ವತಂತ್ರ ಅಭ್ಯರ್ಥಿ ಯಾಗಿ ನಿಂತಿದ್ದ ತಂದೆಯನ್ನು ಬೆಂಬಲಿಸಿ ಮಾನವೇಂದ್ರ ಪ್ರಚಾರ ನಡೆಸಿದ್ದರು. ಹೀಗಾಗಿ ಮಾನವೇಂದ್ರರನ್ನು ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಆದರೂ ಅವರು ಶಿಯೋ ವಿಧಾನಸಭೆ ಕ್ಷೇತ್ರದ ಶಾಸಕರಾಗಿಯೇ ಮುಂದುವರಿದಿದ್ದರು. ಆದರೆ ಈಗ ಅವರು ಕಾಂಗ್ರೆಸ್‌ ಸೇರುತ್ತಾರೆಯೇ ಎಂಬುದನ್ನು ಖಚಿತಪಡಿಸಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next