Advertisement

ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ

04:20 PM Jul 02, 2022 | Team Udayavani |

ಬರ್ಮಿಂಗ್ ಹ್ಯಾಂ: ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಕಂಡು ಸುಸ್ತಾಗಿದ್ದ ಇಂಗ್ಲೆಂಡ್ ಆಟಗಾರರು ಎರಡನೇ ದಿನದಾಟದಲ್ಲಿ ಭಾರತೀಯ ನಾಯಕ ಜಸ್ಪ್ರೀತ್ ಬುಮ್ರಾ ಅವರ ಬ್ಯಾಟಂಗ್ ಕಂಡು ಬೆರಗಾದರು. ಬುಮ್ರಾ ಪರಾಕ್ರಮದಿಂದ ಇಂಗ್ಲೆಂಡ್ ನ ಹಿರಿಯ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಭರ್ಜರಿ 35 ರನ್ ಹರಿಬಂತು.

Advertisement

84 ನೇ ಓವರ್ ಎಸೆದ ಬ್ರಾಡ್ ಟೆಸ್ಟ್ ಕ್ರಿಕೆಟ್ ಇತಿಹಾಸ ಅತ್ಯಂತ ದುಬಾರಿ ಓವರ್ ಎಸೆದರು. (ಟಿ20 ಕ್ರಿಕೆಟ್ ನಲ್ಲೂ ಈ ಅನಗತ್ಯ ದಾಖಲೆ ಬ್ರಾಡ್ ಹೆಸರಿನಲ್ಲೇ ಇದೆ). ವೈಡ್ ಮತ್ತು ನೋ ಬಾಲ್ ಕಾರಣದಿಂದ 8 ಎಸೆತ ಹಾಕಿದ ಬ್ರಾಡ್ ಬಿಟ್ಟುಕೊಟ್ಟಿದ್ದು ಬರೋಬ್ಬರಿ 35 ರನ್.

4, 5 ವೈಡ್, ನೋ ಬಾಲ್ 6, 4, 4,4, 6, 1 ಹೀಗೆ ಸಾಗಿತ್ತು ಬ್ರಾಡ್ ಓವರ್.  ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ನಾಯಕನಾದ ಬುಮ್ರಾ 16 ಎಸತೆಗಳಲ್ಲಿ ಅಜೇಯ 31 ರನ್ ಗಳಿಸಿದರು.

ಟೆಸ್ಟ್ ಕ್ರಿಕೆಟಿನ ದುಬಾರಿ ಓವರ್ ಎಸೆದ ದಾಖಲೆ ಇದುವರೆಗೆ ದಕ್ಷಿಣ ಆಫ್ರಿಕಾದ ಪೀಟರ್ಸನ್ ಹೆಸರಲ್ಲಿತ್ತು. 2003ರಲ್ಲಿ ಬ್ರಯಾನ್ ಲಾರಾ ಒಂದೇ ಓವರ್ ನಲ್ಲಿ 28 ರನ್ ಬಾರಿಸಿದ್ದರು.

ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗೆ ಆಲೌಟಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next