Advertisement

Jason Roy: ಫ್ರಾಂಚೈಸಿ ಲೀಗ್ ಕ್ರಿಕೆಟ್ ಆಡಲು ಇಂಗ್ಲೆಂಡ್ ಒಪ್ಪಂದ ತೊರೆದ ಜೇಸನ್ ರಾಯ್

06:15 PM May 25, 2023 | Team Udayavani |

ಲಂಡನ್: ಇಂಗ್ಲೆಂಡ್‌ ನ ಆರಂಭಿಕ ಬ್ಯಾಟರ್, ಜೇಸನ್ ರಾಯ್ ಫ್ರಾಂಚೈಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಯೊಂದಿಗಿನ ತನ್ನ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಜೇಸನ್ ರಾಯ್ ಅವರು ನೈಟ್ ರೈಡರ್ಸ್ ಕ್ಲಬ್ ಸೇರಿಕೊಳ್ಳಲಿದ್ದಾರೆ.

Advertisement

ಜುಲೈ 13 ರಿಂದ ಜುಲೈ 30 ರವರೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್‌ ನ ಮುಂಬರುವ ಆವೃತ್ತಿಯಲ್ಲಿ ಬ್ಯಾಟರ್ ಲಾಸ್ ಏಂಜಲೀಸ್ ನೈಟ್ ರೈಡರ್ಸ್‌ಗೆ ಸೇರಲಿದ್ದಾರೆ. ವಿಶ್ವಕಪ್ ವಿಜೇತ ಬ್ಯಾಟರ್ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಅದರೊಂದಿಗೆ ಅವರು ವಿಶ್ವಕಪ್ 2023 ಗಾಗಿ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು.

ಡೈಲಿ ಮೇಲ್‌ನ ವರದಿಗಳ ಪ್ರಕಾರ, ಇಂಗ್ಲೆಂಡ್ ಬ್ಯಾಟರ್‌ ಜೇಸನ್ ರಾಯ್ ಗೆ 3.68 ಕೋಟಿ ರೂ ಮೌಲ್ಯದ ಒಪ್ಪಂದವನ್ನು ನೀಡಲಾಗಿದೆ.  ಭಾರತದಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು ಎಂಬ ವಾಸ್ತವದ ಹೊರತಾಗಿಯೂ ಅದನ್ನು ಮುಂದುವರಿಸಲು ಬಯಸುತ್ತಾರೆ. ರಾಯ್ ಅವರು ಪ್ರಸ್ತುತ ಇಸಿಬಿಯೊಂದಿಗೆ ಅಕ್ಟೋಬರ್ ವರೆಗೆ ಒಪ್ಪಂದದಲ್ಲಿದ್ದಾರೆ.

ಟಿ20 ಫ್ರಾಂಚೈಸಿಗೆ ಆಡಲು ಕೇಂದ್ರ ಒಪ್ಪಂದದಿಂದ ಹೊರ ನಡೆದ ಮೊದಲ ಇಂಗ್ಲೆಂಡ್ ಆಟಗಾರನಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next