ಮಂಗಳೂರು: ಕದ್ರಿಯ ಸಿಟಿ ಆಸ್ಪತ್ರೆ ಮುಂಭಾಗ ಸಿಟಿ ಟ್ರೇಡ್ ಸೆಂಟರ್ ಕಟ್ಟಡದಲ್ಲಿರುವ ಎಂ.ಎಸ್. ಪೈ ಆ್ಯಂಡ್ ಕೊ. ಸಂಸ್ಥೆಯಲ್ಲಿ ಜಾಕ್ವಾರ್ ಸಮೂಹದ ನೂತನ ಶೋರೂಂ ಗುರುವಾರ ಆರಂಭಗೊಂಡಿತು.
ಶೋರೂಂ ಉದ್ಘಾಟಿಸಿ ಮಾತ ನಾಡಿದ ಕೆಸಿಸಿಐ ಅಧ್ಯಕ್ಷ, ಭಾರತ್ ಬೀಡಿ ವರ್ಕ್ಸ್ ಪ್ರç.ಲಿ. ಕಾರ್ಯಕಾರಿ ನಿರ್ದೇಶಕ ಆನಂದ್ ಜಿ. ಪೈ, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಎಂ.ಎಸ್. ಪೈ ಸಂಸ್ಥೆಯ ಕೊಡುಗೆ ಅಪಾರ ಎಂದರು. ಏಳು ದಶಕಗಳಿಂದ ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡಿ ಮನೆ ಮಾತಾದ ಈ ಸಂಸ್ಥೆಯಲ್ಲಿ ಜಾಕ್ವಾರ್ ಸಮೂಹದ ಮಳಿಗೆ ಆರಂಭಗೊಳ್ಳುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ಜಾಕ್ವಾರ್ ಸಮೂಹದ ವಲಯ ಮುಖ್ಯಸ್ಥ ಎಂ.ಟಿ. ಹೆಗ್ಡೆ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವಲ್ಲಿ ಜಾಕ್ವಾರ್ ಸಂಸ್ಥೆ ಎಂದಿಗೂ ರಾಜಿ ಮಾಡಿಲ್ಲ. ಸ್ನಾನಗೃಹ ಸಾಮಗ್ರಿ, ಲೈಟಿಂಗ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಗುರು ತಿಸಿಕೊಂಡಿದೆ. 50ಕ್ಕೂ ಹೆಚ್ಚಿನ ದೇಶ ಗಳಲ್ಲಿ ಸಂಸ್ಥೆ ಅಸ್ತಿತ್ವದಲ್ಲಿದೆ. ಎಂ.ಎಸ್. ಪೈ ಆ್ಯಂಡ್ ಕೊ. ಸಂಸ್ಥೆಯ ಜತೆಗಿನ ಸಹಯೋಗದಿಂದ ಎರಡೂ ಸಂಸ್ಥೆ ಉನ್ನತಿ ಸಾಧಿಸಲಿ ಎಂದರು.
ಎಂ.ಎಸ್. ಪೈ ಆ್ಯಂಡ್ ಕೊ. ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಎಂ. ಪದ್ಮನಾಭ ಪೈ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯು 1953 ರಲ್ಲಿ ಸ್ಥಾಪನೆಗೊಂಡಿದ್ದು, ಐದು ದಶಕಗಳಿಂದ ಹಂತ ಹಂತವಾಗಿ ಬೆಳೆದು ಕಟ್ಟಡ ಸಾಮಗ್ರಿ ಉದ್ಯಮದಲ್ಲಿ ಮನೆ ಮಾತಾಗಿದೆ ಎಂದು ಹೇಳಿದರು. ಜಾಕ್ವಾರ್ ಸಂಸ್ಥೆಯೊಂದಿಗಿನ ಒಡಂಬಡಿಕೆಯಿಂದ ಗ್ರಾಹಕ ರಿಗೆ ಇನ್ನಷ್ಟು ಸೇವೆ ನೀಡಲು ಸಹಕಾರಿ ಯಾಗಲಿದೆ ಎಂದರು.
ಹ್ಯಾಂಗ್ಯೋ ಐಸ್ಕ್ರೀಂ ಪ್ರç.ಲಿ. ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ರೋಹನ್ ಕಾರ್ಪೊರೇಷನ್ ಚೇರ್ಮನ್ ರೋಹನ್ ಮೋಂತೆರೊ, ಇನ್ ಲ್ಯಾಂಡ್ ಗ್ರೂಪ್ ಚೇರ್ಮನ್ ಸಿರಾಜ್ ಅಹ್ಮದ್, ಎಂ.ಎಸ್. ಪೈ ಆ್ಯಂಡ್ ಕೊ. ಶೋರೂಂ ಮ್ಯಾನೇಜರ್ ಶ್ರೀಧರ್, ಜಾಕ್ವಾರ್ ಏರಿಯ ಸೇಲ್ಸ್ ಮ್ಯಾನೇಜರ್ ಲಕ್ಷ್ಮೀಕಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ನವೀಕೃತ ಶೋರೂಂ ಆರ್ಕಿಟೆಕ್ಟ್ ಆರ್ಷಿಕ ಅಮೀನ್ ಅವ ರನ್ನು ಗೌರವಿಸಲಾಯಿತು. ಎಂ.ಎಸ್. ಪೈ ಆ್ಯಂಡ್ ಕೊ. ನ ವ್ಯವಸ್ಥಾಪಕ ಪಾಲುದಾರ ಆದಿತ್ಯ ಪೈ ವಂದಿಸಿದರು.
ಗುಣಮಟ್ಟದ ಉತ್ಪನ್ನಗಳ ಅನಾವರಣ
ಪ್ರತಿಷ್ಠಿತ ಜಾಕ್ವಾರ್ ಶೋರೂಂನಲ್ಲಿ ವಿವಿಧ ನಮೂನೆಯ ನಳ್ಳಿ, ಶವರ್, ಥರ್ಮೋಸ್ಟಾಟಿಕ್ ಮಿಕ್ಸರ್, ಸ್ಯಾನಿಟರಿವೇರ್, ಫ್ಲಶ್ಶಿಂಗ್ ಸಿಸ್ಟಮ್, ವಾಟರ್ ಹೀಟರ್, ಬಾತ್ ಟಬ್, ಸ್ಪಾ, ಸ್ಟೀಮ್ ಬಾತ್ ಸೊಲ್ಯೂಷನ್, ಶವರ್ ಪ್ಯಾನಲ್ ಸಹಿತ ಬಿಡಿ ಭಾಗಗಳು ದೊರಕುತ್ತವೆ.