ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್‌ಆರ್‌ಆರ್ ಬಗ್ಗೆ ಜಗತ್ತಿನಾದ್ಯಂತ ಹೊಸ ಕ್ರೇಜ್ ಶುರುವಾಗಿದೆ. ಜತೆಗೆ ಎಲ್ಲೆಲ್ಲೂ ನಾಟು -ನಾಟು ಹಾಡಿಗೆ ಜನರು ಸ್ಪೆಪ್ ಹಾಕಿದ್ದು ಗೊತ್ತಿರುವ ವಿಚಾರ. ಇಷ್ಟಕ್ಕೇ ನಿಲ್ಲದ ಕ್ರೇಜ್, ಈಗ ಕಥಾ ಪುಸ್ತಕವಾಗಿಯೂ ಹೊರಹೊಮ್ಮಿದೆ.
Advertisement
7 ವರ್ಷದ ಪುಟ್ಟ ಮಗನಿಗೆ ಸಿನಿಮಾ ಕಥೆಯನ್ನು ತಿಳಿಸಲು ಜಪಾನಿನ ತಾಯಿಯೊಬ್ಬರು ಸಿನಿಮಾದ ದೃಶ್ಯಗಳನ್ನೇ ಪುಸ್ತಕದಲ್ಲಿ ಕಾರ್ಟೂನ್ ಗಳಾಗಿ ಚಿತ್ರಿಸಿಕೊಟ್ಟ ವಿಡಿಯೋ ಈಗ ವೈರಲ್ ಆಗಿದೆ.
ಆರ್‌ಆರ್‌ಆರ್ ಸಿನಿಮಾ ಪೇಜ್‌ನಲ್ಲಿ ಪುಸ್ತಕದ ವಿಡಿಯೋ ಶೇರ್ ಮಾಡಲಾಗಿದ್ದು,71 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.