ನಾಯಿ ಮೇಲಿನ ಪ್ರೀತಿಯಿಂದಾಗಿ ತಾನೂ ನಾಯಿಯಂತೆಯೇ ಆಗಬೇಕೆಂದು ಬಯಸಿದ ವ್ಯಕ್ತಿಯೊಬ್ಬ ಅದಕ್ಕೆಂದು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ್ದಾನೆ!
ಹೌದು. ಜಪಾನ್‌ನ ಟೋಕೊ ಹೆಸರಿನ ವ್ಯಕ್ತಿ ಈ ರೀತಿಯ ಸಾಹಸ ಮಾಡಿದ್ದಾನೆ. ಆತನಿಗೆ ಕೊಲ್ಲಿ ತಳಿಯ ನಾಯಿಯೆಂದರೆ ಹೆಚ್ಚು ಪ್ರೀತಿಯಂತೆ. ಹಾಗಾಗಿ ಜೆಪ್ಪೆಟ್ ಹೆಸರಿನ ವಸ್ತ್ರ ವಿನ್ಯಾಸ ಸಂಸ್ಥೆಯ ಬಳಿ ತನಗಾಗಿ ಕೊಲ್ಲಿಯ ಉಡುಗೆ ಮಾಡಿಕೊಡಿ ಎಂದು ಕೇಳಿದ್ದಾನೆ. ಅದರಂತೆ ಸಂಸ್ಥೆಯು ಬರೋಬ್ಬರಿ 40 ದಿನಗಳ ಕಾಲಾವಕಾಶ ತೆಗೆದುಕೊಂಡು 12 ಲಕ್ಷ ರೂ. ವೆಚ್ಚದಲ್ಲಿ ನಾಯಿ ರೀತಿಯ ಉಡುಗೆ ಮಾಡಿಕೊಟ್ಟಿದೆ.
ಅದನ್ನು ತೊಟ್ಟ ಟೋಕೊ ನಾಯಿಯ ರೀತಿಯಲ್ಲೇ ಕಾಲು ಆಡಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.