Advertisement

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

11:00 AM Mar 30, 2023 | Nagendra Trasi |

ಟೋಕಿಯೋ: ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ಅಪರಾಧ. ಆದರೆ ಬಹುತೇಕವಾಗಿ ಎಲ್ಲೆಡೆ ರಾಜಾರೋಷವಾಗಿ ಸಿಗರೇಟ್ ಸೇದುತ್ತಿರುವುದು ಸಾಮಾನ್ಯವಾಗಿದೆ. ಇಲ್ಲೊಂದು ಕುತೂಹಲಕಾರಿ ಪ್ರಸಂಗವಿದೆ…ನಾಗರಿಕ ಸೇವೆಯ ಅಧಿಕಾರಿಗಳು ತಮ್ಮ 14 ವರ್ಷದ ಕೆಲಸದ ಅವಧಿಯಲ್ಲಿ 4,500 ಬಾರಿ ಸಿಗರೇಟ್ ಸೇದಿದ್ದು, ಅದರ ಪರಿಣಾಮ ಆ ವ್ಯಕ್ತಿಗೆ ಬರೋಬ್ಬರಿ 11,000(ಅಂದಾಜು 9 ಲಕ್ಷ ರೂ.) ಡಾಲರ್ ದಂಡ ವಿಧಿಸಿರುವ ಘಟನೆ ಜಪಾನ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ಒಸಾಕಾದ ಅಧಿಕಾರಿಗಳು 61 ವರ್ಷದ ಉದ್ಯೋಗಿ ಮತ್ತು ಪ್ರಿಫೆಕ್ಚರ್ ನ ಹಣಕಾಸು ವಿಭಾಗದ ಇಬ್ಬರು ಸಹೋದ್ಯೋಗಿಗಳು ಸೇರಿಕೊಂಡು ಪದೇ, ಪದೇ ಧೂಮಪಾನ ಮಾಡಿದ್ದಕ್ಕೆ ಮೂವರಿಗೂ ಆರು ತಿಂಗಳವರೆಗೆ ಶೇ.10ರಷ್ಟು ವೇತನ ಕಡಿತಗೊಳಿಸಲಾಗಿತ್ತು.

ಕೆಲಸದ ಅವಧಿಯಲ್ಲಿ ಧೂಮಪಾನ ಮಾಡಬಾರದು ಎಂಬ ಹಲವು ಬಾರಿ ಎಚ್ಚರಿಕೆಯ ನಡುವೆಯೂ ಇವರು ಧೂಮಪಾನ ಚಟ ಮುಂದುವರಿಸಿರುವುದಾಗಿ ವರದಿ ವಿವರಿಸಿದೆ. ಏತನ್ಮಧ್ಯೆ 2022ರ ಸೆಪ್ಟೆಂಬರ್ ನಲ್ಲಿ ಮೂವರು ರಹಸ್ಯವಾಗಿ ತಂಬಾಕು ಸಂಗ್ರಹಿಸಿಟ್ಟಿರುವ ಮಾಹಿತಿ ಮಾನವ ಸಂಪನ್ಮೂಲ(ಎಚ್ ಆರ್ ಡಿಪಾರ್ಟ್ ಮೆಂಟ್) ಕಚೇರಿಗೆ ತಲುಪಿತ್ತು. ಆಗ ಹಿರಿಯ ಅಧಿಕಾರಿಗಳು ಮೂವರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೂ ಮೂವರು ಧೂಮಪಾನ ಮಾಡುವುದನ್ನು ಮುಂದುವರಿಸಿದ್ದರು.

ಜಗತ್ತಿನಲ್ಲಿ ಜಪಾನ್ ನ ಒಸಾಕಾ ನಗರ ಕಟ್ಟುನಿಟ್ಟಾದ ಧೂಮಪಾನ ನಿಗ್ರಹ ಕಾನೂನು ಜಾರಿಗೆ ತಂದಿದೆ. ಅದರನ್ವಯ ಸರ್ಕಾರಿ ಕಚೇರಿ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಸಂಪೂರ್ಣ ನಿಷೇಧಿಸಲಾಗಿದೆ. 2019ರಿಂದ ಸರ್ಕಾರಿ ಅಧಿಕಾರಿಗಳು ಕೆಲಸದ ಅವಧಿ ವೇಳೆ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

Advertisement

ವರದಿಯ ಪ್ರಕಾರ, ಇಬ್ಬರನ್ನು ಹೊರತುಪಡಿಸಿ 61ವರ್ಷದ ನಿರ್ದೇಶಕ ಮಟ್ಟದ ಉದ್ಯೋಗಿ ಸ್ಥಳೀಯ ಸಾರ್ವಜನಿಕ ಸೇವಾ ಕಾಯಿದೆಯಡಿ ಕಾನೂನು ಉಲ್ಲಂಘಿಸಿರುವುದಾಗಿ ಪರಿಗಣಿಸಿ, ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ವೇತನ ಕಡಿತದ ಜೊತೆಗೆ 1.44 ಮಿಲಿಯನ್ ಯೆನ್ ಹೆಚ್ಚುವರಿಯಾಗಿ ದಂಡ ತೆರುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದೆ.

ಈ ವ್ಯಕ್ತಿ ಕರ್ತವ್ಯದ ಅವಧಿಯಲ್ಲಿ 355 ಗಂಟೆ 19 ನಿಮಿಷಗಳ ಕಾಲ ಧೂಮಪಾನ ಮಾಡಿರುವುದಾಗಿ ಸರ್ಕಾರ ಬಹಿರಂಗಪಡಿಸಿದೆ. ಇದರ ಪರಿಣಾಮ ಬರೋಬ್ಬರಿ 11,000 ಡಾಲರ್ ದಂಡ ತೆರುವಂತಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next