Advertisement

ಟೋಕಿಯೋ ತೊರೆದರೆ ಸಿಗಲಿದೆ ಕುಟುಂಬದ ಪ್ರತಿ ಮಗುವಿಗೆ 6.34ಲಕ್ಷ ರೂ.!

08:06 PM Jan 03, 2023 | Team Udayavani |

ಟೋಕಿಯೋ: ಜಪಾನ್‌ನಲ್ಲಿ ಎದುರಾಗಿರುವ ಪ್ರಾಂತೀಯ ಜನಸಂಖ್ಯಾ ಅಸಮತೋಲನವನ್ನು ಸರಿದೂಗಿಸುವ ನಿಟ್ಟಿನಲ್ಲಿ ಜಪಾನ್‌ ಸರ್ಕಾರ ಹೊಸಕ್ರಮ ಕೈಗೊಂಡಿದ್ದು, ರಾಜಧಾನಿ ಟೋಕಿಯೋ ತೊರೆಯಲು ಮುಂದಾಗುವ ಕುಟುಂಬದ ಪ್ರತಿ ಮಗುವಿಗೆ 1 ದಶಲಕ್ಷ ಯೆನ್‌ (6.34 ಲಕ್ಷ ರೂ.) ನೀಡುವುದಾಗಿ ಘೋಷಿಸಿದೆ.

Advertisement

ಕಳೆದ ವರ್ಷ ಮೊದಲಬಾರಿಗೆ ಜಪಾನ್‌ನಲ್ಲಿ ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೋನಾ ಕಾರಣದಿಂದಾಗಿಯೇ ಜನಸಂಖ್ಯೆ ಕಡಿಮೆಯಾಗಿದೆ ಎಂದು ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ.

ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆ ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.90 ಲಕ್ಷ ರೂ.ಗಳ ಸಹಾಯಧನ ಒದಗಿಸುವುದಾಗಿ ಈ ಹಿಂದೆ ತಿಳಿಸಿತ್ತು. ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.34 ಲಕ್ಷ ರೂ. ನೀಡುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next