Advertisement

ಜ. 15, 16: ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ, ನೂತನ ಬಿಂಬ ಪ್ರತಿಷ್ಠೆ

11:22 AM Jan 12, 2023 | Team Udayavani |

ಉಡುಪಿ: ಅವಧೂತ ಪರಂಪರೆಯ ಪ್ರಮುಖ ಕೇಂದ್ರ ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಕಾರ್ಯಕ್ರಮ ಜ. 15 ಮತ್ತು 16ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

61 ವರ್ಷಗಳ ಹಿಂದೆ ಮಂದಿರವು ಸಾಧ್ವಿ ಸೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಿರ್ಮಾಣವಾಗಿತ್ತು. ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಬಾಲ ಭೋಜನ, ಸಾಧುಸಂತರಿಗೆ ಆಶ್ರಯ, ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿ ಸಿದ್ದ ಈ ಮಂದಿರ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದಾಗ ಮುಂಬಯಿ ಮೂಲದ ಉದ್ಯಮಿ ಕೆ.ಕೆ. ಆವರ್ಸೆಕರ್‌ ಸಹಕಾರದಲ್ಲಿ 4 ಕೋ.ರೂ. ವೆಚ್ಚ ದಲ್ಲಿ ಮರುನಿರ್ಮಾಣಗೊಂಡಿದೆ. ಮಂದಿರದ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲಿದೆ ಎಂದರು.

ವಿಗ್ರಹ ಮೆರವಣಿಗೆ ಜ. 15ರಂದು ಗಣೇಶ ಪುರಿಯಿಂದ ಆಗಮಿಸಿರುವ ನಿತ್ಯಾನಂದ ಸ್ವಾಮಿ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆ ವರೆಗೆ ವಾಹನ ಜಾಥಾದಲ್ಲಿ ತರಲಾಗುವುದು. ಜಾಥಾಕ್ಕೆ ಮಣಿಪಾಲ ಗ್ರೂಪ್‌ ಮುಖ್ಯಸ್ಥ ಡಾ| ರಂಜನ್‌ ಪೈ ಚಾಲನೆ ನೀಡಲಿದ್ದಾರೆ. ಜೋಡುಕಟ್ಟೆ ಯಿಂದ ಭವ್ಯ ಶೋಭಾಯಾತ್ರೆ ನಡೆಯಲಿದೆ.

6.30ಕ್ಕೆ ಸಭಾ ಕಾರ್ಯಕ್ರಮ ದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮೂಡು ಬಿದಿರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾ ನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ವಿನಯ ಗುರೂಜಿ ಆಶೀರ್ವಚನ ನೀಡಲಿದ್ದಾರೆ.

ಉದ್ಯಮಿ ಕೆ.ಕೆ. ಆವರ್ಸೆಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ರಘುಪತಿ ಭಟ್‌, ಉದ್ಯಮಿ ಡಾ| ಜಿ. ಶಂಕರ್‌, ನಿತ್ಯಾನಂದ ಖೋಡೆ, ಪುರುಷೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ.

Advertisement

ಕಾಂಞಂಗಾಡ್‌ನ‌ ನಿತ್ಯಾನಂದ ಗುರು ವಿದ್ಯಾಕೇಂದ್ರದ ವಿಶ್ವಸ್ತ ಮೋಹನ್‌ ನಂಬಿಯಾರ್‌, ಗೌರವಾಧ್ಯಕ್ಷರಾದ ಎ.ಪಿ. ಗಿರೀಶ್‌, ಎಂ.ಎಂ.ಪಡಿಯಾರ್‌, ಡಾ| ರಘುವೀರ್‌ ಪೈ, ಗೋವಾ ಸಂಚಾಲಕ ಶಶಿಕುಮಾರ್‌ ಶೆಟ್ಟಿ, ಸಂಚಾಲಕ ಮಹಾಬಲ ಕುಂದರ್‌, ಶ್ರೀಕಾಂತ್‌ ಶೆಟ್ಟಿ ಉಪಸ್ಥಿತರಿದ್ದರು.

ಜ. 16ರಂದು ಕಲಶಾಭಿಷೇಕ
ವೇ| ಮೂ| ಹಯಗ್ರೀವ ತಂತ್ರಿ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ಕಾರ್ಯ ನಡೆಯಲಿದ್ದು, ಬೆಳಗ್ಗೆ 7.50ಕ್ಕೆ ಭಗವಾನ್‌ ನಿತ್ಯಾನಂದ ಸ್ವಾಮಿಗಳ ಬಿಂಬ ಪುನಃ ಪ್ರತಿಷ್ಠೆ, ಜೀವ ಕಲಾಶಾಭಿಷೇಕ ಪ್ರಸನ್ನ ಪೂಜೆ, 9.30ಕ್ಕೆ ನಿತ್ಯಾನಂದ ಸ್ವಾಮಿಗೆ 108 ಕಲಶ ಸಹಿತ ಪ್ರಸನ್ನ ಪೂಜೆ, 11.30ಕ್ಕೆ ಮಹಾಪೂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಂತಸಮಾಗಮ, ರಾಷ್ಟ್ರೀಯ ಮಟ್ಟದ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಭಜನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next