Advertisement

ಜ.29 : ಸಪ್ತರಾಜ್ಯದ ಮಂಗಲ ಗೋಯಾತ್ರೆಯ ಮಹಾಮಂಗಲ

03:45 AM Jan 24, 2017 | Team Udayavani |

ಕೂಳೂರು: ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನ. 8ರಂದು ಆರಂಭಿಸಿದ ಮಂಗಲಗೋಯಾತ್ರೆ ಸಮಾರೋಪ ಸಮಾರಂಭ ಮಹಾಮಂಗಲ ಮಂಗಳೂರು ಸಮೀಪದ ಕೂಳೂರು ಗೋಲ್ಡ್‌ ಫಿಂಚ್‌ ಸಿಟಿ, ಮಂಗಲಭೂಮಿಯಲ್ಲಿ 2017ರ ಜ. 29ರಂದು ನಡೆಯಲಿದೆ. ಇದಕ್ಕಾಗಿ ಭಾರೀ ಸಿದ್ಧತೆ ನಡೆಯುತ್ತಿದೆ.

Advertisement

ದಾಖಲೆಯ ವೇದಿಕೆ: 300 ಅಡಿ ಉದ್ದ, 100 ಅಡಿ ಅಗಲದ ಅಂದರೆ 30 ಸಾವಿರ ಚದರ ಅಡಿ ವಿಸ್ತೀರ್ಣದ ವೇದಿಕೆ ನಿರ್ಮಾಣ ಹಂತದಲ್ಲಿದೆ. ಅಂದರೆ ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ಸುಮಾರು 1500 ಮಂದಿ ಸಂತರು ಆಸೀನರಾಗುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ವೇದಿಕೆಯಲ್ಲಿ ಆಹ್ವಾನಿತ ಗಣ್ಯರಿಗಾಗಿ 40 ಅಡಿ ಚೌಕಾಕಾರದ ಎರಡು ಚಿಕ್ಕ ವೇದಿಕೆ ಕೆಳಗೆ ನಿರ್ಮಾಣವಾಗುತ್ತಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶವಿದೆ. ದೇಶದಲ್ಲೇ ಈ ತನಕ ಇಷ್ಟು ದೊಡ್ಡ ವೇದಿಕೆ ನಿರ್ಮಿಸಿದ ದಾಖಲೆಯಿಲ್ಲ ಎನ್ನಲಾಗುತ್ತಿದೆ.

7 ಎಕ್ರೆ ಜಾಗದಲ್ಲಿ ಸಭಾಂಗಣ: ಸಭಾಂಗಣ 7 ಎಕ್ರೆ ವ್ಯಾಪ್ತಿ ಜಾಗದಲ್ಲಿದೆ. ಸುಮಾರು 2,50,000 ಚದರ ಅಡಿ ವಿಸ್ತೀರ್ಣದ ಸಭಾಂಗಣ ಇದು. ಅರ್ಧ ಎಕ್ರೆ ಜಾಗದಲ್ಲಿ ಯಾಗ ಶಾಲೆ,30000 ಚದರ ಅಡಿ ವಿಸ್ತೀರ್ಣದಲ್ಲಿ ಪಾಕಶಾಲೆ, 5 ಎಕ್ರೆ ಜಾಗದಲ್ಲಿ ಎರಡು ಕಡೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗುವುದು. 4 ಎಕ್ರೆ ಜಾಗದಲ್ಲಿ ಗೋ ಪ್ರದರ್ಶಿನಿ, ವಿವಿಧ ಪ್ರದರ್ಶಿನಿಗಳಿಗೆ, ಗೋಬರ್‌ ಗ್ಯಾಸ್‌ ಪ್ಲಾಂಟ್‌ ಅಳವಡಿಸಲಾಗುವುದು. ಪಾರ್ಕಿಂಗ್‌, ಕಾರ್ಯಕರ್ತರ ವ್ಯವಸ್ಥೆ, ಆರೋಗ್ಯ ಕೇಂದ್ರ, ಅಗ್ನಿಶಾಮಕದಳ ಮತ್ತು ಇತರ ವ್ಯವಸ್ಥೆಗಳಿಗೆ ಸೇರಿ ಒಟ್ಟು ಇಡೀ ಕಾರ್ಯಕ್ರಮ 70 ಎಕ್ರೆ ಜಾಗದಲ್ಲಿ ನಡೆಯಲಿದೆ.

31 ಗೋತಳಿಗಳು: 31 ವಿಧದ ದೇಸೀ ಗೋ ತಳಿಗಳನ್ನುಇಲ್ಲಿ ಪ್ರದರ್ಶನಕ್ಕಿಡ ಲಾಗುತ್ತದೆ. ಪೊನ್ವಾಲ್‌,  ಖೇಲಿಗಾರ್‌, ಗಂಗಾತೀರಲಾಲ್‌ಖಂದಾರಿ, ಅಮ್ಲಾಚೇರಿ, ಜನಾರಿ, ಸಿಂಧಿ,ಗೌಳವ್‌, ಮಾಳವಿ, ಸಾಹಿವಾಲ, ನಿಮಾರಿ, ಕಾಂಗಾಯಂ, ಕೆಂಕಾಥ, ವೆಚ್ಚಾರ್‌, ಡಾಂಗಿ, ದೇವನಿ, ನಾಗೋರಿ, ಓಂಗೋಲ್‌,ರಾಟಿ, ಹರ್ಯಾಣ, ಥಾರ್‌ಪಾರ್‌ಕರ್‌, ಕೃಷ್ಣಾ ತೀರ,ಹಳ್ಳಿಕಾರ್‌, ಅಮೃತಮಹಲ್‌, ಗೀರ್‌, ಕಾಂಕ್ರೀಜ್‌, ಮಲೆ ನಾಡು ಗಿಡ್ಡ, ಕಾಸರಗೋಡು, ಖೀಲಾರಿ, ಬರಗೂರು ಮತ್ತು ಇತ್ತೀಚೆಗೆ ಗುರುತಿಸಲ್ಪಟ್ಟ ಗೋವಾದ ಶ್ವೇತಕಪಿಲಾವನ್ನು ಇಲ್ಲಿ ಕಾಣಬಹುದು. ಅಲ್ಲದೇ ಸಾಂಪ್ರದಾಯಿಕವಾಗಿ ಕಬ್ಬಿನಹಾಲು ತೆಗೆದು ಬೆಲ್ಲ ತಯಾರಿಸುವ ಆಲೆಮನೆ ವೀಕ್ಷಿಸಬಹುದು.
 
11 ಸಾವಿರ ಕಿ.ಮೀ.: ಮಂಗಲಪಾಂಡೆಯ ನೆನಪಲ್ಲಿ ಸಪ್ತರಾಜ್ಯಗಳಲ್ಲಿ ಸಂಚಾರ ಮಾಡಿ ಉಡುಪಿ ತಲುಪಿದಾಗ 11 ಸಾವಿರ ಕಿ.ಮೀ. ಸಂಚರಿಸಿದಂತಾಗಿದೆ. ಆ ಬಳಿಕಕರಾವಳಿಯುದ್ದಕ್ಕೂ ಆ ಯಾತ್ರೆ ಆವಾಹನಾ ರಥ ಯಾತ್ರೆಯಾಗಿ ಇನ್ನೂ ಎರಡು ಸಾವಿರ ಕಿ.ಮೀ. ದೂರ ಸಂಚರಿಸಲಿದೆ. ವೈಭವದ ಯಾತ್ರೆ ಜ. 27ರಂದು ಮಂಗಳೂರು ಪುರ ಪ್ರವೇಶ ಮಾಡಲಿದ್ದು, ಗೋಧೂಳಿ ಲಗ್ನದಲ್ಲಿ ಗೋ ಜ್ಯೋತಿ ಬೆಳಗಲಿದೆ. ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. 28ರಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣವಿದೆ. ಸುರಭಿ ಸಂತ ವಾಣಿ, ಗೋ ಸಂಸತ್ತು, ಗೋಪ್ರದರ್ಶಿನಿ, ಗೋಚಿತ್ರ, ಗೋ ಉಪಾಸನೆ, ಗೋಸಂಸ್ಕೃತಿ, ಗೋಕಲಾ, ಗೋಯಾನ, ಗೋಶಕ್ತಿ, ಗವ್ಯಾಮೃತ, ಗವ್ಯಪಾಕೋತ್ಸವ, ಗೋದರ್ಶನ, ಗೋತುಲಾಭಾರಗಳು ನಡೆಯಲಿವೆ.
 

Advertisement

Udayavani is now on Telegram. Click here to join our channel and stay updated with the latest news.

Next