Advertisement
ಹೇಗೆ ಕಾರ್ಯನಿರ್ವಹಿಸುತ್ತದೆರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫೀಕೇಶನ್ (ಆರ್‌ಎಫ್ಐಡಿ) ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಪುಟ್ಟ ಸ್ಟಿಕ್ಕರ್‌ಗಳನ್ನು 4 ಚಕ್ರ ಅಥವಾ ಅದಕ್ಕೂ ಮೀರಿದ ಯಾವುದೇ ವಾಹನಗಳ ಮುಂಭಾಗದ ಗಾಜಿನ ಬಳಿ ಅಳವಡಿಸಲಾಗುತ್ತದೆ.
ದೇಶದ ಎಲ್ಲಾ ಟೋಲ್‌ಗಳಲ್ಲಿ ಫಾಸ್ಟಾಗ್ ಲೇನ್‌ಗಳನ್ನು ಅಳವಡಿಸಲಾಗುತ್ತದೆ. ಅದರ ಮೂಲಕವೇ ವಾಹನಗಳು ಸಂಚರಿಸಬೇಕಾಗಿದ್ದು, ಟೋಲ್ ವೆಚ್ಚವನ್ನು ಫಾಸ್ಟಾಗ್ ಮೂಲಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟಾಗ್ ವ್ಯವಸ್ಥೆ ಅಳವಡಿಸದೇ ಇದ್ದ ವಾಹನವಾದರೆ ಟೋಲ್ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಟೋಲ್‌ನ ಒಂದು ಕಡೆ ಮಾತ್ರ ಫಾಸ್ಟಾಗ್ ಮತ್ತು ಇತರ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಇಲ್ಲಿ ಫಾಸ್ಟಾಗ್ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿ ಬರುತ್ತದೆ. ಉಳಿದ ಎಲ್ಲಾ ಲೇನ್ ಗಳಲ್ಲಿ (ಪಥ) ಫಾಸ್ಟಾಗ್‌ಗಳು ಮಾತ್ರ ಇರಲಿವೆ.
Related Articles
ಈ ಫಾಸ್ಟಾಗ್ ವ್ಯವಸ್ಥೆಯ ಮೂಲ ಉದ್ದೇಶವೇ ಟೋಲ್‌ಗಳಲ್ಲಿ ಕ್ಯಾಶ್‌ಲೆಸ್ ಪೇಮೆಂಟ್ ಅನ್ನು ಉತ್ತೇಜಿಸುವುದು. ವಾಹನ ದಟ್ಟನೆಯನ್ನು ಕಡಿತಗೊಳಿಸುವುದು ಇದರ ಮತ್ತೂಂದು ಉದ್ದೇಶವಾಗಿದೆ. ಸರಕಾರ ಫಾಸ್ಟಾಗ್ ವಾಹನಗಳಿಗೆ ಶೇ. 2.5 ರಿಯಾಯಿತಿಯನ್ನು ನೀಡುತ್ತದೆ.
Advertisement
ಫಾಸ್ಟಾಗ್ ಎಂಬುದಕ್ಕೆ ನೀವು ರಿಚಾರ್ಜ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಏಕೆಂದರೆ ಇದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದರಿಂದ ನಿಮ್ಮ ಖಾತೆಯಿಂದಲೇ ಹಣ ಸಂದಾಯವಾಗುತ್ತದೆ. ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಕಾಯ್ದುಕೊಂಡರೆ ಸಾಕು.
ಆದರೆ ನೀವು ನಿಮ್ಮ ಫಾಸ್ಟಾಗ್ ಅನ್ನು ಎನ್‌ಎಚ್‌ಐನ ವ್ಯಾಲೆಟ್‌ಗೆ ಲಿಂಕ್ ಮಾಡಿದ್ದರೆ ನೀವು ಆ ವ್ಯಾಲೆಟ್ ಅನ್ನು ಇತರ ಪೇಮೆಂಟ್ ವ್ಯವಸ್ಥೆಯ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಪ್ರತಿಯೊಂದು ವ್ಯವಹಾರ ಹಾಗೂ ಬ್ಯಾಲೆನ್ಸ್ ಕಡಿಮೆಯಾದಾಗ ಗ್ರಾಹಕರಿಗೆ ಮೊಬೈಲ್ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ.
ಫಾಸ್ಟಾಗ್ ಕಡ್ಡಾಯದ ಗಡುವು ವಿಸ್ತರಣೆಯಾಗಿದ್ದು, ಜನರು ಟೋಲ್ ಕೇಂದ್ರಗಳಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಇದೀಗ ಡಿಸೆಂಬರ್ 15ರ ಗಡುವು ದಾಟಿದ ಬಳಿಕ ಯಾವುದೇ ರಿಯಾಯಿತಿಗಳು ಇರುವುದಿಲ್ಲ, ಮಾತ್ರವಲ್ಲದೇ ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ.