Advertisement

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

06:48 PM Jan 28, 2023 | Team Udayavani |

ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಜನ ಸಂಕಲ್ಪಯಾತ್ರೆ ಬೃಹತ್ ಸಮಾವೇಶಕ್ಕೆ‌ ಜನಸಾಗರವೇ ಹರಿದು ಬಂದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ವೇದಿಕೆಗೆ ಬರುತ್ತಿದ್ದಂತೆ ಜಯಘೋಷ ಹಾಗೂ ಕರತಾಡನ ಮುಗಿಲು ಮುಟ್ಟಿತು.

Advertisement

ಎಂ.ಕೆ.‌ಹುಬ್ಬಳ್ಳಿಯ ಮೈದಾನದಲ್ಲಿ ವೇದಿಕೆ ಪಕ್ಕದಲ್ಲಿ ಹೆಪ್ಯಾಡ್ ನಲ್ಲಿ ಇಳಿದ ಅಮಿತ್ ಶಾ ನೇರವಾಗಿ ವೇದಿಕೆಗೆ ಬಂದರು. ಅಮಿತ್ ಶಾ ಬರುತ್ತಿದ್ದಂತೆ ನೆರೆದ ಜನರು ಎದ್ದು ನಿಂತು ಚಪ್ಪಾಳೆ‌ ತಟ್ಟಿ, ಜಯಘೋಷ ಮೊಳಗಿಸಿ ಸ್ವಾಗತಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ‌ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಶಶಿಕಲಾ ಜೊಲ್ಲೆ, ಗೋವಿಂದ‌ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡಗೌಡ್ರ, ಪಿ.‌ರಾಜೀವ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಪ, ಅನಿಲ್ ಬೆನಕೆ, ಲಕ್ಷ್ಮಣ ಸವದಿ‌‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next