Advertisement

ಜನಸಾಹಿತ್ಯ ಸಮ್ಮೇಳನ ಸರಿಯಲ್ಲ: ನಟ ಚೇತನ್‌

11:15 PM Jan 07, 2023 | Team Udayavani |

ಹರಪನಹಳ್ಳಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಪಕ್ಷಕ್ಕೆ ಸೀಮಿತವಾಗಿದೆ ಎಂದು ಅದನ್ನು ವಿರೋಧಿಸುವ ಪ್ರಯತ್ನದಲ್ಲಿ ಇನ್ನೊಂದು ಪಕ್ಷಕ್ಕೆ ಸೀಮಿತವಾಗಿ ಜನಸಾಹಿತ್ಯ ಸಮ್ಮೇಳನ ನಡೆಸುವುದು ಸಮಂಜಸವಲ್ಲ. ಸಾಮಾಜಿಕ ಹಾಗೂ ಸೈದ್ಧಾಂತಿಕವಾಗಿ ವ್ಯವಸ್ಥೆ ವಿರುದ್ಧ ಬಂಡಾಯವಾದರೆ ಉತ್ತಮ ಬೆಳವಣಿಗೆ ಎಂದು ಚಿತ್ರನಟ ಅಹಿಂಸಾ ಚೇತನ್‌ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅವರವರ ಸಿದ್ಧಾಂತಗಳ ಮೇಲೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ವಿಷಾದನೀಯ. ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಪುಲೆಯಂತವರ ವಿಚಾರಗಳನ್ನು ಮುಂದಿಟ್ಟುಕೊಂಡು ವ್ಯವಸ್ಥೆ ವಿರುದ್ಧ ಸಾಹಿತ್ಯ ಚಳವಳಿ ಆಗಬೇಕು ಎಂದರು.

ಪಠ್ಯಪುಸ್ತಕ ವಿಷಯದಲ್ಲಿ ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್‌ ಚಕ್ರತೀರ್ಥ ಇಬ್ಬರೂ ಸರಿಯಾದ ನ್ಯಾಯವನ್ನು ಒದಗಿಸಿಲ್ಲ ಎಂದು ಆರೋಪಿಸಿದರು.

ಚುನಾವಣೆ ಬಳಿಕ ಪೌರತ್ವ ಚಿಂತನೆ
ನನ್ನ ತಂದೆ-ತಾಯಿ ಈಗಲೂ ಅಮೆರಿಕದಲ್ಲಿದ್ದಾರೆ. ಸಂದರ್ಭ ಬಂದರೆ ನಾನೂ ಅಲ್ಲಿಗೆ ಹೋಗಬೇಕಾಗುತ್ತದೆ. ಸದ್ಯ ಹೋಗುವ ಯೋಚನೆ ಇಲ್ಲ. ಈಗ ಪೌರತ್ವ ಪಡೆದರೆ ಚುನಾವಣೆಗೆ ಸ್ಪರ್ಧಿಸಲು ಪಡೆದಿದ್ದಾರೆ ಎಂದು ಟೀಕಿಸುತ್ತಾರೆ. ನನಗೆ ಮತದಾನದ ಹಕ್ಕು ಹಾಗೂ ಸರಕಾರಿ ನೌಕರನಾಗಲು ಅರ್ಹತೆ ಇರುವುದಿಲ್ಲ. ನಾನು ದೇವದಾಸಿ ಮಹಿಳೆಯರು, ಕಾರ್ಮಿಕರು, ಬಡವರು, ದಲಿತರು ಒಳಗೊಂಡು ಸಮಾಜಮುಖೀ ಚಟುವಟಿಕೆಯಲ್ಲಿ ತೊಡಗಿಕೊಳ್ಳುವೆ. ಚುನಾವಣೆ ಮುಗಿದ ಬಳಿಕ ಪೌರತ್ವ ಪಡೆಯುವ ಬಗ್ಗೆ ಚಿಂತನೆ ಮಾಡುವುದಾಗಿ ಚೇತನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next