Advertisement

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆ?: ಬೇರೆ ಪ್ರಶ್ನೆ ಕೇಳಿ ಎಂದ ಬಿ.ವೈ.ವಿಜಯೇಂದ್ರ

09:47 PM Mar 06, 2023 | Team Udayavani |

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

Advertisement

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಹಮ್ಮಿಕೊಂಡ ಓಬಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ 2023 ವಿಧಾನಸಭಾ ಚುನಾವಣೆಯ ಕಾರಣದಿಂದ ಓಬಿಸಿ ಸಮಾವೇಶ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಜನರ ಮುಂದಿಡಲು ಮತ್ತು ರಾಜ್ಯದಲ್ಲಿ ಮತ್ತೆ ಬಿಜೆಪಿ ಆಧಿಕಾರಕ್ಕೆ ಬರಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರಣ ದೇವರಹಿಪ್ಪರಗಿ ಕ್ಷೇತ್ರದ ಜನರು ಬಿಜೆಪಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.

ಶಿಖಾರಿಪುರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸುತ್ತಾಟ ಮಾಡುತಿದ್ದೇನೆ. ಅಂತಿಮವಾಗಿ ಪಕ್ಷ ನನಗೆ ಎಲ್ಲಿ ಸ್ಪರ್ಧೆ ಮಾಡು ಅಂತ ಹೇಳುತ್ತದೆಯೋ ಆ ತೀರ್ಮಾನಕ್ಕೆ ಮತ್ತು ಪಕ್ಷದ ಹಿರಿಯರು ನನಗೆ ಯಾವ ಕ್ಷೇತ್ರದಲ್ಲಿ ಸ್ಪರ್ದೆ ಮಾಡು ಎಂದು ಹೇಳುತ್ತಾರೆಯೋ ಆ ಕ್ಷೇತ್ರದಲ್ಲಿ ಸ್ಪರ್ಧೆಸಲು ಸಿದ್ದ. ಪ್ರಸ್ತುತ ಜವಾಬ್ದಾರಿಯಿಂದ ರಾಜ್ಯಾದ್ಯಂತ ಪಕ್ಷದ ಸಂಘಟನೆಯ ಪ್ರವಾಸ ಮಾಡುತ್ತಾ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.

 ಬೇರೆ ಪ್ರಶ್ನೆ ಕೇಳಿ
ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸದ ವಿಜಯೇಂದ್ರ ಬೇರೆ ಪ್ರಶ್ನೆ ಕೇಳಿ ಎನ್ನುವ ಮೂಲಕ ಪ್ರಶ್ನೆಗೆ ತೆರೆ ಎಳೆದರು.

ಸಿದ್ದರಾಮಯ್ಯ ಹೇಳಿಕೆಗೆ  ಟಾಂಗ್
ಮೈಸೂರು-ಬೆಂಗಳೂರು ಮಧ್ಯದ ರಾಷ್ಟ್ರೀಯ ಹೆದ್ದಾರಿ ನಮ್ಮ ಕಾಲದಲ್ಲಿಯಾಗಿದ್ದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದೇ ಫೆಬ್ರವರಿ 9 ರಂದು ಪರಿಶೀಲನೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನೋ ಹೊಸ ವಿಚಾರವಲ್ಲ. ನರೇಂದ್ರ ಮೋದಿ ಅವರು ನೀಡಿದ ಅಕ್ಕಿಯ ಚೀಲದ ಮೇಲೆ ನಾವೇ ಕೊಟ್ಟಿದ್ದು ಎಂದು ರಾಜ್ಯದ ತುಂಬಾ ಪೋಟೋ ಹಾಕಿಕೊಂಡಿದ್ದು ನೋಡಿದ ಮತದಾರರು ಕಾಂಗ್ರೆಸ್ ಧಿಕ್ಕರಿಸಿ ಬಿಜೆಪಿಗೆ ಆಧಿಕಾರ ನೀಡಿದ್ದಾರೆ ಎಂದರು.

Advertisement

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೀಶ್ವರ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನಿಡಬಾರದು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆಂಬ ವಿಚಾರವಾಗಿ ಮಾತನಾಡಿ, ”ಯಡಿಯೂರಪ್ಪ ತಮ್ಮ ಜೀವನದಲ್ಲೇ ಯಾರ ಕಾಲನ್ನು ಎಳದವರಲ್ಲ. ಅದರ ಅವಶ್ಯಕತೆ ಅವರಿಗಿಲ್ಲ. ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳಸಿದವರು. ಅನೇಕ ಕಾರ್ಯಕರ್ತರನನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದರು.

ಕಲ್ಯಾಣ ರಾಜ್ಯದ ಪ್ರಗತಿ ಪಕ್ಷ ಬಿಜೆಪಿಯ ಬಿ ಟೀಂ ಅಥವಾ ಕಾಂಗ್ರೆಸ್ ನ ಬಿ ಟೀಂ ಎಂದು ವಿರೋಧ ಪಕ್ಷದವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳುತ್ತಾರೆ. ನಮಗೆ ಯಾವ ಪಕ್ಷಗಳ ಆವಶ್ಯಕತೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದೆ ನಮ್ಮ ಸ್ವಂತ ಶಕ್ತಿ ಆಧಾರದ ಮೇಲೆ ನಾವು ಮತ್ತೆ ಆಧಿಕಾರಕ್ಕೆ ಬರುತ್ತವೆ. ನರೇಂದ್ರ ಮೋದಿ ಟೀಂ ಇದೆ, ಯಡಿಯೂರಪ್ಪ ಟೀಂ ಇದೆ ಬಸವರಾಜ ಬೊಮ್ಮಾಯಿ ಟೀಂ, ಕಟೀಲ್ ಅವರ ಟೀಂ ಇದ್ದು ಇದೇ ಸಾಕು ನಮಗೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next