Advertisement

‘ನಮ್ಮ ಶಾಲೆ ನನ್ನ ಕೊಡುಗೆ’ ಯೋಜನೆಗೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಡಿಜಿಟಲ್ ಪಾವತಿ ಸೌಲಭ್ಯ

12:40 PM Sep 11, 2021 | Team Udayavani |

ಬೆಂಗಳೂರು: ತನ್ನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಶ್ರೇಣಿಯನ್ನು ವಿಸ್ತರಿಸುತ್ತಿರುವ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರ್ನಾಟಕ ರಾಜ್ಯ ಸರ್ಕಾರದ ‘ನಮ್ಮ ಶಾಲೆ – ನನ್ನ ಕೊಡುಗೆ’ ಯೋಜನೆಗೆ ಪಾವತಿ ಸೇವೆ ಒದಗಿಸಲಿದೆ.

Advertisement

ಕರ್ನಾಟಕದಲ್ಲಿನ ಯಾವುದೇ ಸರ್ಕಾರಿ ಶಾಲೆಗೆ ಧನ ಸಹಾಯ ಮಾಡಲು ಬಯಸುವ ದಾನಿಗಳಿಗೆ, ‘ನಮ್ಮ ಶಾಲೆ – ನನ್ನ ಕೊಡುಗೆ’ಯೋಜನೆ ಪಾವತಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ ಅನ್ಬು ಕುಮಾರ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕನ್ವಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ನಮ್ಮ ಶಾಲೆ – ನನ್ನ ಕೊಡುಗೆ’ಕಾರ್ಯಕ್ರಮವು ಸಾರ್ವಜನಿಕರು, ಶಾಲೆಗಳ ಹಳೆಯ ವಿದ್ಯಾರ್ಥಿಗಳು ಮತ್ತು ಜನರಲ್ಲಿ ಶಾಲೆಯ ಮಾಲೀಕತ್ವದ ಪ್ರಜ್ಞೆಯನ್ನು ಬೆಳೆಸುವ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಉದಾತ್ತ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮದ ಪ್ರಕಾರ, ದಾನಿಗಳಿಂದ ಪಡೆಯುವ ದೇಣಿಗೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ [ಕೆಎಸ್‌ಡಿಪಿಐ] ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಒಂದೇ ಖಾತೆಯಲ್ಲಿ ಸ್ವೀಕರಿಸಲಾಗುತ್ತದೆ. ನಂತರ ಅದನ್ನು ಸಂಬಂಧಿಸಿದ ಶಾಲೆಯ ಖಾತೆಗೆ ವರ್ಗಾಯಿಸಲಾಗುವುದು.

ಇದನ್ನೂ ಓದಿ:ಸ್ಥಳೀಯ ಅರ್ಥಿಕತೆಗೆ ನೆರವು; ಸುಸ್ಥಿರ ಜೀವನ ನಡೆಸಲು 5 ಸರಳ ವಿಧಾನಗಳು

ಈ ಪಾಲುದಾರಿಕೆಯ ನೆರವಿನಿಂದ, ದಾನಿಗಳು ತಮ್ಮ ದೇಣಿಗೆಗಳನ್ನು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ (ಜನ ಎಸ್‌ಎಫ್‌ಬಿ) ಆರ್‌ಟಿಜಿಎಸ್, ಎನ್‌ಇಎಫ್‌ಟಿ, ಯುಪಿಐ, ಐಎಂಪಿಎಸ್, ಡೆಬಿಟ್ ಕಾರ್ಡ್, ಎನ್‌ಎಸಿಎಚ್ ಮುಂತಾದ ಸೌಲಭ್ಯಗಳನ್ನು ಬಳಸಿಕೊಂಡು ಸುಲಭವಾಗಿ ಪಾವತಿಸಬಹುದು. ಕರ್ನಾಟಕದಲ್ಲಿ ಐದು ಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಜನ ಎಸ್‌ಎಫ್‌ಬಿ, ಇದಕ್ಕೆ ಪೂರಕವಾಗಿ ತನ್ನ ವಿಶಾಲವಾದ ಜಾಲದ ನೆರವಿನಿಂದ ದಾನಿಗಳು ಕರ್ನಾಟಕದಾದ್ಯಂತ ಹೆಚ್ಚಿನ ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ. ದಾನಿಗಳ ಯಾವುದೇ ತಾಂತ್ರಿಕ ಮತ್ತು ಕಾರ್ಯಾಚರಣೆಯ ಪ್ರಶ್ನೆಗಳನ್ನು ಪರಿಹರಿಸಲು ಬ್ಯಾಂಕ್, ದಿನದ 24 ಗಂಟೆಗಳ ಕಾಲ (24 x 7) ಕಾರ್ಯನಿರ್ವಹಿಸುವ ದೂರು ಪರಿಹರಿಸುವ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ.

Advertisement

ಮಾರಗೊಂಡನಹಳ್ಳಿಯ ಜಿಎಚ್‌ಎಸ್ ಕಾಂಪೊಸಿಟ್ ಶಾಲೆಯಲ್ಲಿ ಆರ್‌ಒ ನೀರಿನ ಘಟಕ ಸ್ಥಾಪಿಸುವುದಕ್ಕೆ ನೆರವಾಗಲು ಜನ ಎಸ್‌ಎಫ್‌ಬಿ ಸಿಇಒ ಅಜಯ್ ಕನ್ವಲ್   ಮುಖ್ಯಮಂತ್ರಿಗಳಿಗೆ ದೇಣಿಗೆಯ ಚೆಕ್ ಅನ್ನು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next